25.1 C
ಬೆಂಗಳೂರು
October 6, 2026
kranthikidi.com
ಕ್ರೈಂತಾಜಾಸುದ್ದಿರಾಜ್ಯ

ಪತ್ನಿ ಜೊತೆ ಅನೈತಿಕ ಸಂಬಂಧ ಶಂಕೆ; ವ್ಯಕ್ತಿಯ ಬರ್ಬರ ಹತ್ಯೆ..!

ಹುಬ್ಬಳ್ಳಿ : ಪತ್ನಿಯ ಜೊತೆ ಅನೈತಿಕ ಸಂಬಂಧ ಹೊಂದಿದ್ದಾನೆ ಎಂದು ಶಂಕಿಸಿ ವ್ಯಕ್ತಿಯೊಬ್ಬನನ್ನು ಬರ್ಬರವಾಗಿ ಹತ್ಯೆ ಮಾಡಿದ ಘಟನೆ ಹುಬ್ಬಳ್ಳಿ ತಾಲೂಕಿನ ಬ್ಯಾಹಟ್ಟಿ ಗ್ರಾಮದ ಶಾಂತಿನಗರ ಪ್ಲಾಟ್‌ನಲ್ಲಿ ನಡೆದಿದೆ.

ಫಕ್ಕೀರಪ್ಪ ಅಲಿಯಾಸ್ ಬಸು ಅಕ್ಕಿವಳ್ಳಿ ಕೊಲೆಯಾದ ದುರ್ದೈವಿ. ಪ್ರಕಾಶ್ ಕರಶೆಟ್ಟಿ ಕೊಲೆಗೈದ ಆರೋಪಿಯಾಗಿದ್ದಾನೆ. ಪ್ರಕಾಶನ ಪತ್ನಿಯೊಂದಿಗೆ ಬಸು ಅನೈತಿಕ ಸಂಬಂಧ ಹೊಂದಿದ್ದ ಎನ್ನಲಾಗಿದೆ. ಈ ವಿಚಾರವಾಗಿ ಈ ಹಿಂದೆ ರಾಜೀ ಪಂಚಾಯತಿ ನಡೆದಿತ್ತು. ಬಳಿಕವೂ ಅನೈತಿಕ ಸಂಬಂಧ ಮುಂದುವರಿದಿತ್ತು ಎನ್ನಲಾಗಿದೆ. ಇದರಿಂದ ಕೋಪಗೊಂಡು ಹತ್ಯೆ ಮಾಡಿದ್ದಾನೆ ಎಂಬ ಮಾಹಿತಿ ಲಭ್ಯವಾಗಿದೆ.

ಈ ಸ್ಥಳಕ್ಕೆ ಹುಬ್ಬಳ್ಳಿ ಗ್ರಾಮೀಣ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ. ಆರೋಪಿಯನ್ನು ವಶಕ್ಕೆ ಪಡೆದಿರುವ ಪೊಲೀಸರು ಹೆಚ್ಚಿನ ವಿಚಾರಣೆ ಮುಂದುವರೆಸಿದ್ದಾರೆ. ಇದನ್ನೂ ಓದಿ : ಡಿಕೆಶಿ ಜೊತೆಗೆ ಒಳ ಒಪ್ಪಂದ ಮಾಡಿಕೊಂಡಿದ್ದೀರಾ?; ವಿಜಯೇಂದ್ರಗೆ ಬಿಜೆಪಿ ಮುಖಂಡ ದೇವರಾಜೇಗೌಡ ಪ್ರಶ್ನೆ..?

Related posts

ದುನಿಯಾ ವಿಜಯ್​​ರ ಕೊಂಡಾಡಿದ ಪರಭಾಷಾ ಸ್ಟಾರ್ ನಟ

Kalpana Editor

ವಿಧಾನಸಭೆಯಲ್ಲಿ ʻಎನ್‌ಕೌಂಟರ್‌ʼ ಸದ್ದು – ವಿಪಕ್ಷಗಳು ನಿಗಿ ನಿಗಿ, ಗದ್ದಲ ಕೋಲಾಹಲ..!

kknewskannada1987@gmail.com

ಭೂಸ್ವಾಧೀನಕ್ಕೆ ಅಂತಿಮ ಅಧಿಸೂಚನೆ ಹೊರಡಿಸಿ; ಸಿಎಂ ಡಿಕೆಶಿ ಅವರಿಗೆ ಬಿಡದಿ ರೈತರ ಮನವಿ..!

kknewskannada1987@gmail.com