ಬೆಂಗಳೂರು : ರಾಜ್ಯಕ್ಕೆ ಈ ಬಾರಿ ಮುಂಗಾರು ಆರಂಭದಲ್ಲೇ ಬಿಗ್ ಶಾಕ್ ನೀಡಿದೆ. ವರುಣನ ಮುನಿಸಿನಿಂದಾಗಿ ರಾಜ್ಯದ ಬಹುತೇಕ ಎಲ್ಲಾ ಜಿಲ್ಲೆಗಳಲ್ಲೂ ಭೀಕರ ಮಳೆ ಕೊರತೆ ಎದುರಾಗಿದ್ದು, ಮುಂಗಾರು ಅಭಾವದ ನೆರಳು ಇಡೀ ನಾಡನ್ನು ಆವರಿಸಿದೆ. ಮಳೆಯಿಲ್ಲದೆ ಕೃಷಿ ಚಟುವಟಿಕೆಗಳು ಕುಂಠಿತಗೊಂಡಿದ್ದು, ಇತ್ತ ಕುಡಿಯುವ ನೀರಿಗೂ ಹಾಹಾಕಾರ ಸೃಷ್ಟಿಯಾಗುವ ಭೀತಿ ಎದುರಾಗಿದೆ.
ರಾಜ್ಯದ ಪ್ರಮುಖ ನದಿಗಳಾದ ಕಾವೇರಿ ಮತ್ತು ಕೃಷ್ಣಾ ಜಲಾನಯನ ಪ್ರದೇಶಗಳಲ್ಲಿ ನಿರೀಕ್ಷಿತ ಪ್ರಮಾಣದಲ್ಲಿ ಮಳೆಯಾಗದ ಕಾರಣ, ಜಲಾಶಯಗಳಿಗೆ ಹರಿದು ಬರುತ್ತಿರುವ ನೀರಿನ ಪ್ರಮಾಣ ಗಣನೀಯವಾಗಿ ಕುಸಿದಿದೆ. ಮುಂಗಾರು ಕೈಕೊಟ್ಟ ಹಿನ್ನೆಲೆಯಲ್ಲಿ ಇಡೀ ರಾಜ್ಯಕ್ಕೆ ಬರಸಿಡಿಲು ಬಡಿದಂತಾಗಿದೆ. ಜುಲೈ ತಿಂಗಳು ಹತ್ತಿರ ಬರುತ್ತಿದ್ದರೂ ಡ್ಯಾಂಗಳು ಭರ್ತಿಯಾಗುವ ಲಕ್ಷಣಗಳು ಕಾಣಿಸುತ್ತಿಲ್ಲ.
ಕಾವೇರಿ ಮತ್ತು ಕೃಷ್ಣಾ ಕೊಳ್ಳದ ಪ್ರಮುಖ ಜಲಾಶಯಗಳ ಒಡಲು ಸಂಪೂರ್ಣ ಖಾಲಿಯಾಗುತ್ತಿದ್ದು, ಇರುವ ನೀರನ್ನು ಕೇವಲ ಕುಡಿಯುವ ಉದ್ದೇಶಕ್ಕೆ ಮಾತ್ರ ಕಾಯ್ದಿರಿಸಬೇಕಾದ ಅನಿವಾರ್ಯತೆ ಎದುರಾಗಿದೆ. ಬಿತ್ತನೆ ಕಾರ್ಯ ಮುಗಿಸಿ ಮಳೆಗಾಗಿ ಕಾಯುತ್ತಿದ್ದ ರೈತರಿಗೆ ಮುಂಗಾರು ಅಭಾವ ದೊಡ್ಡ ಆಘಾತ ತಂದಿದೆ.
ಕೃಷಿ ಚಟುವಟಿಕೆಗಳು ಸಂಪೂರ್ಣ ಸ್ಥಗಿತಗೊಳ್ಳುವ ಹಂತಕ್ಕೆ ತಲುಪಿವೆ. ಕೇವಲ ಗ್ರಾಮೀಣ ಭಾಗ ಮಾತ್ರವಲ್ಲದೆ, ಬೆಂಗಳೂರು, ಮೈಸೂರು, ಹುಬ್ಬಳ್ಳಿ-ಧಾರವಾಡ ಸೇರಿದಂತೆ ಪ್ರಮುಖ ನಗರಗಳ ನಿವಾಸಿಗಳಿಗೂ ಮುಂದಿನ ದಿನಗಳಲ್ಲಿ ಕುಡಿಯುವ ನೀರಿನ ಅಭಾವ ತಟ್ಟುವ ಆತಂಕ ಶುರುವಾಗಿದೆ.
ರಾಜಧಾನಿ ಬೆಂಗಳೂರಿನ ಕುಡಿಯುವ ನೀರಿನ ದಾಹ ನೀಗಿಸಲು ಸದ್ಯ ಕಾವೇರಿ ಜಲಾನಯನ ಪ್ರದೇಶದ ಪ್ರಮುಖ ಜಲಾಶಯವಾದ ಕೆಆರ್ಎಸ್ (ಕೃಷ್ಣರಾಜಸಾಗರ) ಆಸರೆಯಾಗಿದೆ. ಡ್ಯಾಂನಲ್ಲಿ ನೀರಿನ ಮಟ್ಟ ಕುಸಿಯುತ್ತಿದ್ದರೂ ಸಹ, ಬೆಂಗಳೂರಿನ ಜನತೆಯ ಕುಡಿಯುವ ನೀರಿನ ಅಗತ್ಯವನ್ನು ಪೂರೈಸಲು ಪ್ರಸ್ತುತ ಕೆಆರ್ಎಸ್ ಜಲಾಶಯದಿಂದ ಪ್ರತಿದಿನ 1800 ಕ್ಯೂಸೆಕ್ ನೀರನ್ನು ಬಿಡಲಾಗುತ್ತಿದೆ. ಜುಲೈ ಮೊದಲ ವಾರದ ಒಳಗಾಗಿ ರಾಜ್ಯಾದ್ಯಂತ ವ್ಯಾಪಕ ಮಳೆಯಾಗದಿದ್ದರೆ, ಕರ್ನಾಟಕ ಮತ್ತೊಂದು ಭೀಕರ ಬರಗಾಲ ಬರುವ ಸಾಧ್ಯತೆಯಿದೆ. ಪ್ರಮುಖ ಡ್ಯಾಂಗಳಲ್ಲಿ ನೀರಿನಮಟ್ಟ ಎಷ್ಟಿದೆ? ; ಇದನ್ನೂ ಓದಿ : ಸತೀಶ್ ಜಾರಕಿಹೊಳಿ ಬಾಮೈದನ ಮನೆ ಮೇಲಿನ ಇಡಿ ದಾಳಿ ಅಂತ್ಯ – ತೀವ್ರ ಹುಡುಕಾಟ..!
ಕೆ.ಆರ್.ಎಸ್ ಜಲಾಶಯ –
ಒಟ್ಟು ಎತ್ತರ – 124.80 ಅಡಿ
ಇಂದಿನ ನೀರಿನ ಮಟ್ಟ – 81 ಅಡಿ
ಒಟ್ಟು ಸಾಮರ್ಥ್ಯ – 49.45 ಟಿಎಂಸಿ
ಇಂದಿನ ನೀರಿನ ಪ್ರಮಾಣ – 11.37 ಟಿಎಂಸಿ
ಆಲಮಟ್ಟಿ ಜಲಾಶಯ –
ಒಟ್ಟು ಎತ್ತರ 514.27 ಮೀಟರ್
ಇಂದಿನ ನೀರಿನ ಮಟ್ಟ – 508.32 ಮೀಟರ್
ಒಟ್ಟು ಸಾಮರ್ಥ್ಯ – 123 ಟಿಎಂಸಿ
ಇಂದಿನ ನೀರಿನ ಪ್ರಮಾಣ – 105 ಟಿಎಂಸಿ
ತುಂಗಭದ್ರಾ ಜಲಾಶಯ –
ಒಟ್ಟು ಎತ್ತರ 1633.00 ಮೀಟರ್
ಇಂದಿನ ನೀರಿನ ಮಟ್ಟ – 1578 ಮೀಟರ್
ಒಟ್ಟು ಸಾಮರ್ಥ್ಯ – 105 ಟಿಎಂಸಿ
ಇಂದಿನ ನೀರಿನ ಪ್ರಮಾಣ – 9.63 ಟಿಎಂಸಿ
ಕಬಿನಿ ಜಲಾಶಯ –
ಒಟ್ಟು ಎತ್ತರ 2284.00 ಮೀಟರ್
ಇಂದಿನ ನೀರಿನ ಮಟ್ಟ – 2260 ಮೀಟರ್
ಒಟ್ಟು ಸಾಮರ್ಥ್ಯ – 19.52 ಟಿಎಂಸಿ
ಇಂದಿನ ನೀರಿನ ಪ್ರಮಾಣ – 5.21 ಟಿಎಂಸಿ
ಹೇಮಾವತಿ ಜಲಾಶಯ –
ಒಟ್ಟು ಎತ್ತರ – 2922.00 ಮೀಟರ್
ಇಂದಿನ ನೀರಿನ ಮಟ್ಟ -2868 ಮೀಟರ್
ಒಟ್ಟು ಸಾಮರ್ಥ್ಯ – 35.7 ಟಿಎಂಸಿ
ಇಂದಿನ ನೀರಿನ ಪ್ರಮಾಣ – 14.55 ಟಿಎಂಸಿ
ಲಿಂಗನಮಕ್ಕಿ ಜಲಾಶಯ –
ಒಟ್ಟು ಎತ್ತರ – 1819.00 ಮೀಟರ್
ಇಂದಿನ ನೀರಿನ ಮಟ್ಟ- 1745 ಮೀಟರ್
ಒಟ್ಟು ಸಾಮರ್ಥ್ಯ – 156 ಟಿಎಂಸಿ
ಇಂದಿನ ನೀರಿನ ಪ್ರಮಾಣ – 151 ಟಿಎಂಸಿ
