July 13, 2026
kranthikidi.com
ಉದ್ಯೋಗತಾಜಾಸುದ್ದಿ

ಪವನ್ ಹನ್ಸ್ ಲಿಮಿಟೆಡ್‌ನಲ್ಲಿ ಬಂಪರ್ ನೇಮಕಾತಿ; ಹುದ್ದೆಗಳಿಗೆ ಅರ್ಜಿ ಆಹ್ವಾನ..!

ಕೇಂದ್ರ ನಾಗರಿಕ ವಿಮಾನಯಾನ ಸಚಿವಾಲಯದ ಅಡಿಯಲ್ಲಿ ಬರುವ ಪ್ರಮುಖ ಸಾರ್ವಜನಿಕ ವಲಯದ ಉದ್ಯಮ ಹಾಗೂ ಭಾರತದ ಅತಿದೊಡ್ಡ ಹೆಲಿಕಾಪ್ಟರ್ ಕಂಪನಿಯಾದ ಪವನ್ ಹನ್ಸ್ ಲಿಮಿಟೆಡ್ 2026ನೇ ಸಾಲಿನ ನೇಮಕಾತಿಗಾಗಿ ಅಧಿಕೃತ ಅಧಿಸೂಚನೆಯನ್ನು ಹೊರಡಿಸಿದೆ. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಆನ್‌ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಭಾರತೀಯ ನಾಗರಿಕರಿಗೆ ಕೇಂದ್ರ ಸರ್ಕಾರಿ ಸ್ವಾಮ್ಯದ ಸಂಸ್ಥೆಯಲ್ಲಿ ಕೆಲಸ ಮಾಡಲು ಇದೊಂದು ಸುವರ್ಣ ಅವಕಾಶವಾಗಿದೆ.

ಹುದ್ದೆಗಳ ವಿವರ ಮತ್ತು ಒಟ್ಟು ಸಂಖ್ಯೆ – ಈ ನೇಮಕಾತಿ ಪ್ರಕ್ರಿಯೆಯ ಮೂಲಕ ಸಂಸ್ಥೆಯಲ್ಲಿ ಖಾಲಿ ಇರುವ ಒಟ್ಟು 22 ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದೆ. ಇದರಲ್ಲಿ ರೆಗ್ಯುಲರ್ (ಖಾಯಂ) ಹಾಗೂ ಕಾಂಟ್ರಾಕ್ಟ್ (ಗುತ್ತಿಗೆ) ಆಧಾರದ ಮೇಲಿನ ಹುದ್ದೆಗಳು ಸೇರಿವೆ.

ಟ್ರೇನಿ ಟೆಕ್ನಿಷಿಯನ್ (Trainee Technician): 13 ಹುದ್ದೆಗಳು – ಜ್ಯೂನಿಯರ್ ಇಂಜಿನಿಯರ್ – ಸಿವಿಲ್ (Junior Engineer – Civil): 01 ಹುದ್ದೆ, ಕ್ವಾಲಿಟಿ ಅಸಿಸ್ಟೆಂಟ್ (Quality Assistant): 02 ಹುದ್ದೆಗಳು, ಅಸಿಸ್ಟೆಂಟ್ – CAMO (Assistant – CAMO): 02 ಹುದ್ದೆಗಳು, ಅಸಿಸ್ಟೆಂಟ್ – HR&A (Assistant – HR&A): 02 ಹುದ್ದೆಗಳು, ಸ್ಟೇಷನ್ ಇನ್‌ಚಾರ್ಜ್ (Station In-charge): 02 ಹುದ್ದೆಗಳು..,

ಶೈಕ್ಷಣಿಕ ಅರ್ಹತೆ ಮತ್ತು ವಯೋಮಿತಿ : ವಿವಿಧ ಹುದ್ದೆಗಳಿಗೆ ಅನುಗುಣವಾಗಿ ಶೈಕ್ಷಣಿಕ ಅರ್ಹತೆಗಳನ್ನು ನಿಗದಿಪಡಿಸಲಾಗಿದೆ. ಮಾನ್ಯತೆ ಪಡೆದ ವಿಶ್ವವಿದ್ಯಾಲಯ ಅಥವಾ ಸಂಸ್ಥೆಯಿಂದ ಯಾವುದೇ ಪದವಿ (Graduate), ಡಿಪ್ಲೋಮಾ (ಸಿವಿಲ್/ಮೆಕ್ಯಾನಿಕಲ್/ಏರೋನಾಟಿಕಲ್ ಇಂಜಿನಿಯರಿಂಗ್) ಅಥವಾ ಬಿ.ಎಸ್ಸಿ (ಏವಿಯೇಷನ್) ಪೂರ್ಣಗೊಳಿಸಿದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಟ್ರೇನಿ ಟೆಕ್ನಿಷಿಯನ್ ಹುದ್ದೆಗಳಿಗೆ ಗರಿಷ್ಠ ವಯಸ್ಸು 25 ವರ್ಷ ಹಾಗೂ ಇನ್ನುಳಿದ ಹುದ್ದೆಗಳಿಗೆ ಗರಿಷ್ಠ 28 ವರ್ಷ ವಯೋಮಿತಿಯನ್ನು ನಿಗದಿಪಡಿಸಲಾಗಿದೆ. ಸರ್ಕಾರದ ನಿಯಮಾವಳಿಗಳ ಪ್ರಕಾರ ಎಸ್‌ಸಿ, ಎಸ್‌ಟಿ ಮತ್ತು ಒಬಿಸಿ ಅಭ್ಯರ್ಥಿಗಳಿಗೆ ವಯೋಮಿತಿಯಲ್ಲಿ ಸಡಿಲಿಕೆ ಇರಲಿದೆ.

ಪ್ರಮುಖ ದಿನಾಂಕಗಳು ಮತ್ತು ಅರ್ಜಿ ಸಲ್ಲಿಸುವ ವಿಧಾನ : ಪವನ್ ಹನ್ಸ್ ನೇಮಕಾತಿಗೆ ಅರ್ಜಿ ಸಲ್ಲಿಕೆ ಪ್ರಕ್ರಿಯೆಯು ಈಗಾಗಲೇ ಆರಂಭಗೊಂಡಿದ್ದು, ಆಸಕ್ತ ಆಭ್ಯರ್ಥಿಗಳು ಜುಲೈ 10ರ ವರೆಗೆ ಅರ್ಜಿ ಸಲ್ಲಿಸಲು ಅವಕಾಶವಿದೆ. ಅಭ್ಯರ್ಥಿಗಳು ಪವನ್ ಹನ್ಸ್ ಲಿಮಿಟೆಡ್‌ನ ಅಧಿಕೃತ ವೆಬ್‌ಸೈಟ್ ಆದ www.pawanhans.co.in ಗೆ ಭೇಟಿ ನೀಡಿ, ‘Careers’ ವಿಭಾಗದ ಅಡಿಯಲ್ಲಿ ಆನ್‌ಲೈನ್ ಮೂಲಕವೇ ತಮ್ಮ ಅರ್ಜಿಗಳನ್ನು ಸಲ್ಲಿಸಬೇಕಾಗುತ್ತದೆ. ಆಫ್‌ಲೈನ್ ಅಥವಾ ಅಂಚೆ ಮೂಲಕ ನೇರವಾಗಿ ಕಳುಹಿಸುವ ಅರ್ಜಿಗಳನ್ನು ಸ್ವೀಕರಿಸಲಾಗುವುದಿಲ್ಲ. ಹೆಚ್ಚಿನ ವಿವರಗಳಿಗಾಗಿ ಮತ್ತು ಅಧಿಕೃತ ಅಧಿಸೂಚನೆಯನ್ನು ಓದಲು ಅಭ್ಯರ್ಥಿಗಳು ಸಂಸ್ಥೆಯ ವೆಬ್‌ಸೈಟ್‌ಗೆ ಭೇಟಿ ನೀಡಬಹುದು. ಇದನ್ನೂ ಓದಿ : ರಾಜ್ಯದ ಪ್ರಮುಖ ಜಲಾಶಯಗಳು ಖಾಲಿ ಖಾಲಿ; ಯಾವ ಡ್ಯಾಂನಲ್ಲಿ ಎಷ್ಟು ನೀರಿದೆ..?

Related posts

ಶಾಲಾ ವಾಹನಕ್ಕೆ ಸಿಲುಕಿ 4 ವರ್ಷದ ಬಾಲಕಿ ಸಾವು..!

Kalpana Editor

ಡಿಕೆ ಶಿವಕುಮಾರ್​​ ಪಟ್ಟಾಭಿಷೇಕಕ್ಕೆ ಅಜ್ಜಯ್ಯನ ಮುಹೂರ್ತ ಫಿಕ್ಸ್..!

Kalpana Editor

ಯೋಗ ದಿನಾಚರಣೆ; ಇಂದು ಜನರ ಜೊತೆ ಕೋಲ್ಕತ್ತಾದಲ್ಲಿ ಮೋದಿ ಯೋಗ..!

Kalpana Editor