July 12, 2026
kranthikidi.com
ಅಡುಗೆತಾಜಾಸುದ್ದಿ

ಸುಲಭ ರೀತಿಯಲ್ಲಿ ಹೋಟೆಲ್ ಶೈಲಿಯ ಮೇಥಿ ಪನ್ನೀರ್ ಕರಿ

ಹೋಟೆಲ್, ರೆಸ್ಟೋರೆಂಟ್‌ಗಳಿಗೆ ಹೋದರೆ ರೋಟಿ, ಚಪಾತಿ ಜೊತೆಗೆ ನಾನಾ ರೀತಿಯ ಪನ್ನೀರ್ ಕರಿಗಳನ್ನು ನೀವು ತಿಂದಿರಬಹುದು, ನೋಡಿರಬಹುದು. ಮೇಥಿ ಪನ್ನೀರ್ ಕರಿ ಕೂಡ ಒಂದಾಗಿದೆ. ಇವತ್ತಿನ ರೆಸಿಪಿಯಲ್ಲಿ ಹೋಟೆಲ್ ಶೈಲಿಯ ಮೇಥಿ ಪನ್ನೀರ್ ಕರಿ ಯಾವ ರೀತಿ ಮಾಡುವುದು ಎಂಬುದನ್ನು ತಿಳಿಸಿಕೊಡುತ್ತಿದ್ದೇವೆ. ಮನೆಯಲ್ಲಿ ಒಂದ್ಸಲ ಇದನ್ನ ಟ್ರೈ ಮಾಡಿ.

ಬೇಕಾಗುವ ಸಾಮಗ್ರಿಗಳು : ಪನ್ನೀರ್ – 200 ಗ್ರಾಂ, ಚಕ್ಕೆ – ಸ್ವಲ್ಪ, ಲವಂಗ – ಸ್ವಲ್ಪ, ಕಾಳು ಮೆಣಸು – ಕಾಲು ಚಮಚ, ಶುಂಠಿ ಹಾಗೂ ಬೆಳ್ಳುಳ್ಳಿ – ಸ್ವಲ್ಪ, ಹಸಿಮೆಣಸಿನ ಕಾಯಿ – 9ರಿಂದ 10, ಈರುಳ್ಳಿ – 1, ಗೋಡಂಬಿ – ಅರ್ಧ ಹಿಡಿಯಷ್ಟು, ಜೀರಿಗೆ – ಸ್ವಲ್ಪ, ಮೆಂತ್ಯೆ ಸೊಪ್ಪು – 1 ಕಪ್, ಬೇಯಿಸಿದ ಬಟಾಣಿ – ಒಂದು ಕಪ್, ಗರಂ ಮಸಾಲಾ ಪುಡಿ – ಅರ್ಧ ಚಮಚ, ಉಪ್ಪು – ರುಚಿಗೆ ತಕ್ಕಷ್ಟು, ಕೊತ್ತಂಬರಿ ಸೊಪ್ಪು – ಸ್ವಲ್ಪ

ಮಾಡುವ ವಿಧಾನ : ಮೊದಲಿಗೆ ಒಲೆಯ ಮೇಲೆ ಒಂದು ಪ್ಯಾನ್ ಇಟ್ಟು ಅದಕ್ಕೆ ಎಣ್ಣೆ ಹಾಕಿ ಕಾಯಲು ಬಿಡಿ. ಈಗ ಎಣ್ಣೆಗೆ ಚಕ್ಕೆ, ಲವಂಗ, ಕಾಳು ಮೆಣಸು, ಶುಂಠಿ-ಬೆಳ್ಳುಳ್ಳಿ, ಹಸಿಮೆಣಸಿನ ಕಾಯಿ, ಈರುಳ್ಳಿ, ಗೋಡಂಬಿ ಹಾಕಿ ಕೆಂಪಗೆ ಹುರಿಯಿರಿ. ಇದು ತಣ್ಣಗಾದ ಬಳಿಕ ಮಿಕ್ಸಿ ಜಾರಿಗೆ ಹಾಕಿ ನುಣ್ಣಗೆ ರುಬ್ಬಿಕೊಳ್ಳಿ. ಬಳಿಕ ಒಲೆಯ ಮೇಲೆ ಬಾಣಲೆ ಇಟ್ಟು ಇದಕ್ಕೆ ಸ್ವಲ್ಪ ಎಣ್ಣೆ ಹಾಕಿ.

ಕಾದ ನಂತರ ಜೀರಿಗೆ ಹಾಗೂ ಮೆಂತ್ಯೆ ಸೊಪ್ಪು ಹಾಕಿ, ಹಸಿ ವಾಸನೆ ಹೋಗುವವರೆಗೆ ಹುರಿಯಿರಿ. ನಂತರ ಬೇಯಿಸಿದ ಬಟಾಣಿ ಹಾಗೂ ರುಬ್ಬಿಕೊಂಡ ಮಸಾಲೆ ಹಾಗೂ ಹೆಚ್ಚಿದ ಪನ್ನೀರ್ ಅನ್ನು ಹಾಕಿ ಚೆನ್ನಾಗಿ ಮಿಶ್ರಣ ಮಾಡಿ. ಅಗತ್ಯವಿದ್ದಷ್ಟು ನೀರು ಹಾಕಿ, ಬಳಿಕ ಉಪ್ಪು, ಗರಂಮಸಾಲಾ ಪುಡಿ ಹಾಕಿ ಮಿಶ್ರಣ ಮಾಡಿ. 5-10 ನಿಮಿಷ ಕುದಿಯಲು ಬಿಡಿ. ಬಳಿಕ ಕೊತ್ತಂಬರಿ ಸೊಪ್ಪಿನೊಂದಿಗೆ ಅಲಂಕರಿಸಿದರೆ ರುಚಿಕರವಾದ ಮೇಥಿ ಪನ್ನೀರ್ ಕರಿ ಸವಿಯಲು ಸಿದ್ಧ. ಇದನ್ನೂ ಓದಿ : ಶಿಕ್ಷಕಿ ಬೈದರೆಂಬ ಆರೋಪ; ನೇಣಿಗೆ ಶರಣಾದ 8ನೇ ತರಗತಿ ವಿದ್ಯಾರ್ಥಿನಿ

Related posts

ಮೌಂಟ್ ಎವರೆಸ್ಟ್ ಏರಿದ ಬೆಂಗಳೂರಿನ ಪರ್ವತಾರೋಹಿಗಳು…!

Kalpana Editor

ರಾಜ್ಯ ಬಿಜೆಪಿಯಲ್ಲಿ ಬದಲಾವಣೆ ತರಬೇಕು, ಯತ್ನಾಳ್‌ರನ್ನ ವಿಪಕ್ಷ ನಾಯಕನನ್ನಾಗಿ ಮಾಡಬೇಕು – ಕುಮಾರ್‌ ಬಂಗಾರಪ್ಪ

Kalpana Editor

ಐಷಾರಾಮಿ ದಾಳಿ: 142 ಕೋಟಿ ನಗದು ಮತ್ತು ಶುದ್ಧ ಚಿನ್ನದ ಒಳ ಉಡುಪು ಜಪ್ತಿ..!

Kalpana Editor