27.3 C
ಬೆಂಗಳೂರು
October 12, 2026
kranthikidi.com
ತಾಜಾಸುದ್ದಿಸಿನಿಮಾ

ನಿರ್ದೇಶಕನ ಜೊತೆ ಹಸೆಮಣೆ ಏರಿದ ಖ್ಯಾತ ನಟಿ ಸ್ವಾತಿ ರೆಡ್ಡಿ

ಖ್ಯಾತ ನಟಿ ಸ್ವಾತಿ ರೆಡ್ಡಿ ಅವರು ನಿರ್ದೇಶಕ ಶ್ರೀಕಾಂತ್‌ ನಾಗೋಟಿ ಜೊತೆ ಹಸೆಮಣೆ ಏರಿದ್ದಾರೆ. ʼಡೇಂಜರ್ʼ ಸಿನಿಮಾ ಮೂಲಕ ಎಂಟ್ರಿ ಕೊಟ್ಟು ಕಲರ್ಸ್‌ ಸ್ವಾತಿ ಎಂದೇ ಹೆಸರುವಾಸಿಯಾಗಿದ್ದ ನಟಿ ಸ್ವಾತಿ ರೆಡ್ಡಿ ಇತ್ತೀಚೆಗಷ್ಟೇ ಪೈಲಟ್ ಪತಿ ವಿಕಾಸ್ ವಸು ಜೊತೆಗಿನ ಮದುವೆಯಲ್ಲಿ ವಿಚ್ಛೇದನ ಪಡೆದುಕೊಂಡಿದ್ದರು. ಇದೀಗ ಆಶ್ಚರ್ಯಕರ ರೀತಿಯಲ್ಲಿ ಇನ್ನೊಂದು ಮದುವೆಯಾಗಿದ್ದಾರೆ. ಅವರ ಬಾಳಸಂಗಾತಿ ಸಿನಿಮಾ ನಿರ್ದೇಶಕ ಅನ್ನೋದೇ ವಿಶೇಷವಾಗಿದೆ.

ಕಲರ್ಸ್‌ ಸ್ವಾತಿ ಇದೀಗ ಶ್ರೀಕಾಂತ್ ನಾಗೋಟಿ ಜೊತೆ ವಿವಾಹವಾಗಿದ್ದಾರೆ. ಮನೆಯಲ್ಲೇ ಸರಳ ವಿವಾಹವಾಗಿದ್ದು, ಮದುವೆಯ ಫೋಟೋವನ್ನ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಶ್ರೀಕಾಂತ್ ನಾಗೋಟಿಯನ್ನು ಕೊಲಾಬರೇಟ್ ಮಾಡಿದ್ದಾರೆ. 2023ರಲ್ಲಿ ಸ್ವಾತಿ ಜೊತೆ `ಮಂತ್ ಆಫ್ ಮಧು’ ಚಿತ್ರ ಮಾಡಿದ್ದ ಶ್ರೀಕಾಂತ್ ನಾಗೋಟಿ ಇದೀಗ ಸ್ವಾತಿಗೆ ಪತಿಯಾಗಿದ್ದಾರೆ.

ಮೊದಲ ಪತಿಯಿಂದ ದೂರಾಗಿ ಸ್ವಾತಿ ಮಂತ್ ಆಫ್ ಮಧು ಚಿತ್ರದ ಮೂಲಕ ಬಣ್ಣದ ಲೋಕಕ್ಕೆ ರೀ ಎಂಟ್ರಿ ಕೊಟ್ಟಿದ್ದರು. ಇದೀಗ ಅದೇ ನಿರ್ದೇಶಕನ ಜೊತೆ ಹಲವು ವರ್ಷಗಳ ಸ್ನೇಹ, ಪರಿಚಯ ಪ್ರೀತಿಯಾಗಿ ಇದೀಗ ಮದುವೆಯಾಗಿದ್ದಾರೆ. ಇದು ಹಲವರಿಗೆ ಆಶ್ಚರ್ಯ ಉಂಟುಮಾಡಿದೆ. ಪರಸ್ಪರ ಪ್ರೀತಿಸುತ್ತಿದ್ದ ಇವರು ಇದೀಗ ದಂಪತಿಯಾಗಿದ್ದಾರೆ. ಇದನ್ನೂ ಓದಿ : ಸುಲಭ ರೀತಿಯಲ್ಲಿ ಹೋಟೆಲ್ ಶೈಲಿಯ ಮೇಥಿ ಪನ್ನೀರ್ ಕರಿ

Related posts

ಎಸ್.ಜಾನಕಿ ಕನ್ನಡಿಗರ ಹೃದಯದಲ್ಲಿ ಚಿರಸ್ಥಾಯಿ – ಬೊಮ್ಮಾಯಿ

Kalpana Editor

ಹಿರಿಯ ಕಾಂಗ್ರೆಸ್ ಮುಖಂಡ, ಮಾಜಿ ರಾಜ್ಯಪಾಲ ಡಿವೈ ಪಾಟೀಲ್ ನಿಧನ..!

kknewskannada1987@gmail.com

ಮಹಿಳೆಯರಿಗೆ ಉಚಿತ ಬಸ್‌ ಪ್ರಯಾಣ; ‘ಪ್ರಿಯದರ್ಶಿನಿ’ ಯೋಜನೆಗೆ ಸಿಎಂ ಚಾಲನೆ..!

Kalpana Editor