July 14, 2026
kranthikidi.com
ತಾಜಾಸುದ್ದಿರಾಜ್ಯ

ಮಂತ್ರಾಲಯ ರಾಯರ ಮಠದ ಕಾಣಿಕೆ ಹುಂಡಿ ಎಣಿಕೆ; 21 ದಿನದಲ್ಲಿ ಕೋಟಿ ಹಣ ಸಂಗ್ರಹ..!

ರಾಯಚೂರು : ಕಲಿಯುಗ ಕಾಮಧೇನು ಮಂತ್ರಾಲಯದ ಶ್ರೀ ರಾಘವೇಂದ್ರ ಸ್ವಾಮಿ ಮಠದ ಜೂನ್ ತಿಂಗಳಿನ 21 ದಿನದ ಕಾಣಿಕೆ ಹುಂಡಿ ಎಣಿಕೆ ಮುಕ್ತಾಯವಾಗಿದ್ದು, 21 ದಿನದಲ್ಲಿ 3.72 ರೂ. ಕಾಣಿಕೆ ಸಂಗ್ರಹವಾಗಿದೆ. ಪ್ರತಿ ತಿಂಗಳಿನಂತೆ ಈ ಬಾರಿಯೂ ಭಕ್ತರು ದಂಡು ಮಠಕ್ಕೆ ಹರಿದು ಬಂದಿದೆ.

ಗುರುರಾಘವೇಂದ್ರ ಸ್ವಾಮಿ ಮಠಕ್ಕೆ 21 ದಿನಗಳಲ್ಲೇ ಕೋಟ್ಯಂತರ ರೂ. ಕಾಣಿಕೆ ಹರಿದು ಬಂದಿದೆ. ಸಂಗ್ರಹವಾದ ಒಟ್ಟು ಕಾಣಿಕೆಯಲ್ಲಿ 3,61,40,030 ರೂ. ಕರೆನ್ಸಿ ನೋಟುಗಳು. 11,02,500 ರೂ. ನಾಣ್ಯಗಳು ಸಂಗ್ರಹವಾಗಿವೆ. 67 ಗ್ರಾಂ ಚಿನ್ನ, 511 ಗ್ರಾಂ ಬೆಳ್ಳಿಯನ್ನ ಕಾಣಿಕೆ ರೂಪದಲ್ಲಿ ಭಕ್ತರು ನೀಡಿದ್ದಾರೆ.

ಮಂತ್ರಾಲಯ ರಾಯರ ಮಠದಲ್ಲಿ ನಡೆಸಲಾದ ಹುಂಡಿ ಎಣಿಕೆ ಕಾರ್ಯ ಮುಕ್ತಾಯವಾಗಿದ್ದು, ಎಣಿಕೆ ಕಾರ್ಯದಲ್ಲಿ ಮಠದ ನೂರಾರು ಸಿಬ್ಬಂದಿ, ಭಜನಾ ಮಂಡಳಿ, ಕರ ಸೇವಕರು ಭಾಗವಹಿಸಿದ್ದರು. ಮುಜರಾಯಿ ಇಲಾಖೆ ಅಧಿಕಾರಿಗಳು, ಮಠದ ಅಧಿಕಾರಿಗಳು ಹುಂಡಿ ಎಣಿಕೆ ವೇಳೆ ಹಾಜರಿದ್ದರು. ಇದನ್ನೂ ಓದಿ : ಪವನ್ ಹನ್ಸ್ ಲಿಮಿಟೆಡ್‌ನಲ್ಲಿ ಬಂಪರ್ ನೇಮಕಾತಿ; ಹುದ್ದೆಗಳಿಗೆ ಅರ್ಜಿ ಆಹ್ವಾನ..!

Related posts

ಡಿಕೆ ಶಿವಕುಮಾರ್​​ ಪಟ್ಟಾಭಿಷೇಕಕ್ಕೆ ಅಜ್ಜಯ್ಯನ ಮುಹೂರ್ತ ಫಿಕ್ಸ್..!

Kalpana Editor

RSS ನೋಂದಣಿ ಬಗ್ಗೆ ಮೋಹನ್ ಭಾಗವತ್​ಗೆ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಪತ್ರ

Kalpana Editor

ಕರ್ನಾಟಕದ 25ನೇ ಮುಖ್ಯಮಂತ್ರಿಯಾಗಿ ಜೂ. 3ರಂದು ಡಿಕೆಶಿ ಪ್ರಮಾಣವಚನ..!

Kalpana Editor