ಬೆಂಗಳೂರು : ನಟಿ ಕೃಷಿ ತಾಪಂಡ ಅವರ ಆರ್ಆರ್ ನಗರದ ಮನೆಯಲ್ಲಿ ಗೆಳೆಯ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ. ನಟಿಯ ಗೆಳೆಯ ಹಾಗೂ ಉದ್ಯಮಿ ವೈಶಾಕ್ ಆತ್ಮಹತ್ಯೆಗೆ ಶರಣಾಗಿದ್ದಾರೆ. ಮನೆಯಲ್ಲಿ ಯಾರು ಇಲ್ಲದ ವೇಳೆ ಅವರು ಆತ್ಮಹತ್ಯೆಗೆ ಮಾಡಿಕೊಂಡಿದ್ದಾರೆ. ಆರ್ಆರ್ ನಗರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ವಿಕ್ಟೋರಿಯ ಆಸ್ಪತ್ರೆಗೆ ರವಾನಿಸಲಾಗಿದೆ. ಗೆಳೆಯ ವೈಶಾಖ್ ಆತ್ಮಹತ್ಯೆ ಮಾಡಿಕೊಂಡ ವಿಚಾರವನ್ನು ನಟಿ ಕೃಷಿ ತಾಪಂಡ ಅವರೇ ಪೊಲೀಸರಿಗೆ ತಿಳಿಸಿದ್ದರು ಎಂಬ ವಿಚಾರ ತಿಳಿದುಬಂದಿದೆ.
ಗೆಳೆಯ ಆತ್ಮಹತ್ಯೆ ಮಾಡಿಕೊಳ್ಳುವ ಸಮಯದಲ್ಲಿ ಅವರು ನೆಲಮಂಗಲದಲ್ಲಿದ್ದರು. ಈ ವೇಳೆ ಹಲವು ಬಾರಿ ಕೃಷಿ ತಾಪಂಡ ಅವರಿಗೆ ವೈಶಾಖ್ ಕರೆ ಮಾಡಿದ್ದರು. ಆದರೂ ನಟಿ ಕಾಲ್ ರಿಸಿವ್ ಮಾಡಿರಲಿಲ್ಲ. ರಾತ್ರಿ 8:30ರ ಸುಮಾರಿಗೆ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ವೈಶಾಖ್ ಮೆಸೆಜ್ ಕಳಿಸಿದ್ದರು. ಈ ವಿಚಾರವನ್ನು ತಕ್ಷಣ ವೈಶಾಖ್ ಮನೆಯವರಿಗೆ ಕೃಷಿ ತಾಪಂಡ ತಿಳಿಸಿದ್ದರು. ಕೃಷಿ ತಾಪಂಡ ವಾಸವಾಗಿದ್ದ ಆರ್ಆರ್ ನಗರದ ಬಿ ಬ್ಲಾಕ್ 4ನೇ ಪ್ಲೋರ್ನ 403ನೇ ಫ್ಲಾಟ್ಗೆ ಹೋಗಿ ನೋಡುವಷ್ಟರಲ್ಲಿ ವೈಶಾಖ್ ಆತ್ಮಹತ್ಯೆಗೆ ಶರಣಾಗಿದ್ದರು.
ಅನೇಕ ದಿನಗಳಿಂದ ಇದೇ ನಿವಾಸದಲ್ಲಿದ್ದ ವೈಶಾಕ್ ವಾಸವಾಗಿದ್ದರು. ಇಬ್ಬರ ಬಳಿಯೂ ಮನೆಯ ಕೀ ಇತ್ತು ಎಂದು ತಿಳಿದು ಬಂದಿದೆ. ಸಧ್ಯಕ್ಕೆ ಸ್ಥಳದಲ್ಲಿ ಯಾವುದೇ ಡೆತ್ ನೋಟ್ ಪತ್ತೆಯಾಗಿಲ್ಲ. ಮೊಬೈಲ್ನಲ್ಲೂ ಯಾವುದೇ ವಿಡಿಯೋವನ್ನೂ ಮಾಡಿಲ್ಲ. ಮೆಸೆಜ್ ಮಾಡಿದ ಬಳಿಕ ವೈಶಾಖ್ ಜೊತೆ ಮಾತಾಡಿದ್ದರು. ಈ ವೇಳೆ ಮನವೊಲಿಕೆಗೆ ಪ್ರಯತ್ನ ಮಾಡಿದ್ದರು. ಈ ವೇಳೆ ಕುಕ್ಕೆಗೆ ಹೋಗೋಣ ಬಾ ಎಂದಿದ್ದ ವೈಶಾಕ್, ಆಯ್ತು ನಾನು ಬರ್ತೀನಿ ಎಂದು ಕೃಷಿ ಹೇಳಿದ್ದರು.
ಮಧ್ಯರಾತ್ರಿ 12 ಗಂಟೆಗೆ ನಟಿ ಮನೆಗೆ ಬಂದು ನೋಡಿದಾಗ ಆತ್ಮಹತ್ಯೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ. ಬಳಿಕ ಈ ಬಗ್ಗೆ ನಟಿ ಪೊಲೀಸರಿಗೆ ಮಾಹಿತಿ ನೀಡಿದ್ದರು. ಚಾಮರಾಜಪೇಟೆಯ ಚಿತಾಗಾರಕ್ಕೆ ಗೆಳೆಯ ವೈಶಾಕ್ನ ಅಂತಿಮ ದರ್ಶನ ಪಡೆಯಲು ಬಂದ ನಟಿ ಕೃಷಿ ತಾಪಂಡಗೆ ಕೊನೆಕ್ಷಣದಲ್ಲಿ ಸ್ನೇಹಿತನ ಮುಖ ನೋಡುವ ಅವಕಾಶ ಸಿಗದೇ ಕಣ್ಣೀರಿಡುತ್ತಾ ವಾಪಸ್ಸಾಗಿದ್ದಾರೆ ಎಂದು ತಿಳಿದುಬಂದಿದೆ. ಇದನ್ನೂ ಓದಿ : ಪೋಕ್ಸೋ ಪ್ರಕರಣ; ವಚನಾನಂದ ಶ್ರೀಗಳಿಗೆ ನೀಡಿದ್ದ, ನಿರೀಕ್ಷಣಾ ಜಾಮೀನು ರದ್ದು..!
