27.8 C
ಬೆಂಗಳೂರು
October 11, 2026
kranthikidi.com
ಕ್ರೈಂತಾಜಾಸುದ್ದಿರಾಜ್ಯ

ಬೇಬಿ ಕೇರ್‌ನಲ್ಲಿ ಮಕ್ಕಳ ಮೇಲೆ ದೈಹಿಕ ಹಿಂಸೆ ಆರೋಪ; ಸಿಬ್ಬಂದಿಗಳಗೆ ನೋಟಿಸ್..!

ಬೆಂಗಳೂರು : ಬೆಂಗಳೂರಿನ ಬ್ರೂಕ್ ಫೀಲ್ಡ್‌ನಲ್ಲಿರುವ ಬೇಬಿ ಕೇರ್ ಸೆಂಟರ್‌ನಲ್ಲಿ ಮಕ್ಕಳಿಗೆ ದೈಹಿಕವಾಗಿ ಚಿತ್ರಹಿಂಸೆ ನೀಡಿ ವಿಕೃತಿ ಮೆರೆದಿದ್ದರು. ಇದನ್ನು ತಿಳಿದ ಮಕ್ಕಳ ಸಹಾಯವಾಣಿ ಅಧಿಕಾರಿಗಳು ಮಕ್ಕಳ ಮೇಲೆ ಆಯಾಗಳು ಕ್ರೌರ್ಯ ಮೆರೆದಿರುವ ವೀಡಿಯೋ ಪರಿಶೀಲನೆ ಮಾಡಿ, ಐವರು ಆಯಾಗಳ ಮೇಲೆ ಹೆಚ್‌ಎಎಲ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ಅದರನ್ವಯ ಮಂಜುಳ, ವಿಜಯಲಕ್ಷ್ಮೀ, ಭವಾನಿ, ಸಿಂಧು, ಬಿಂದು ಸೇರಿ ಐವರ ಮೇಲೆ ಎಫ್‌ಐಆರ್ ದಾಖಲಾಗಿದೆ.

ಬೇಬಿ ಕೇರ್‌ನಲ್ಲಿ ಮಕ್ಕಳ ಮೇಲೆ ದೈಹಿಕ ಹಿಂಸೆ ನೀಡಿರುವ ವಿಡಿಯೋ ವೈರಲ್ ಆದ ಬೆನ್ನಲ್ಲೇ, ಇದೀಗ ಹೆಚ್‌ಎಎಲ್‌ ಪೊಲೀಸರು ಸಿಬ್ಬಂದಿಗಳು ವಿಚಾರಣೆಗೆ ಹಾಜರಾಗುವಂತೆ ನೋಟಿಸ್‌ ನೀಡಿದ್ದಾರೆ. ಹೆಚ್‌ಎಎಲ್‌ ಪೊಲೀಸರು ಇಂದು ವಿಚಾರಣೆಗೆ ಹಾಜರಾಗುವಂತೆ ನೋಟಿಸ್‌ ನೀಡಿದ್ದು, ಇದರ ಜೊತೆಗೆ ಬೇಬಿಕೇರ್ ಮೈಂಟೇನೆನ್ಸ್ ಹಾಗೂ ಕಂಪನಿ ಅಡ್ಮಿನ್ ಡಿಪಾರ್ಟ್ಮೆಂಟ್‌ಗೂ ನೋಟಿಸ್ ನೀಡಲು ಸಿದ್ದತೆ ಮಾಡಿಕೊಳ್ಳಲಾಗಿದೆ.

ಪ್ರಾಥಮಿಕ ತನಿಖೆ ವೇಳೆ ವೈರಲ್ ಆಗಿರುವ ವಿಡಿಯೋ ಹಳೆಯದು ಅನ್ನೋದು ಬೆಳಕಿಗೆ ಬಂದಿದೆ. CAPGEMINI TECHNOLOGY SERVICES ಕಂಪನಿ ಉದ್ಯೋಗಿಗಳಿಗಾಗಿಯೇ ಈ ಬೇಬಿಕೇರ್‌ನ ತೆರಯಲಾಗಿದ್ದು, ಅಲ್ಲಿನ ಕೆಲಸಗಾರರು ಮಕ್ಕಳನ್ನ ಬೇಬಿಕೇರ್‌ನಲ್ಲಿ ಬಿಟ್ಟು ಹೋಗ್ತಿದ್ರು. ಕೆಲಸ ಮುಗಿಸಿಕೊಂಡು ಹೋಗುವಾಗ ಮಕ್ಕಳನ್ನ ವಾಪಸ್ ಕರೆದೊಯ್ಯುತ್ತಿದ್ದರು ಅನ್ನೋದು ಗೊತ್ತಾಗಿದೆ.

ಬೇಬಿ ಕೇರ್‌ನಲ್ಲಿ ಕೆಲಸ ಮಾಡೋ ಸಿಬ್ಬಂದಿಯನ್ನು ಕಂಪನಿಯವರೇ ನಿಯೋಜನೆ ಮಾಡಿದ್ದಾರೆ. ಸದ್ಯ 18 ಮಕ್ಕಳು ಬೇಬಿಕೇರ್‌ನಲ್ಲಿ ಇರುತ್ತಿದ್ದು, ಮಕ್ಕಳ ಮೇಲೆ ದೈಹಿಕ ಹಿಂಸೆ ವಿಡಿಯೋ ವೈರಲ್ ಆದ ನಂತರ ಬೇರೆ ಸಿಬ್ಬಂದಿ ನಿಯೋಜನೆ ಮಾಡಲಾಗಿದೆ. ಹೆಚ್‌ಎಎಲ್ ಪೊಲೀಸ್ ಠಾಣೆಯಲ್ಲಿ ಬಿಎನ್‌ಎಸ್ ಮತ್ತು ಬಾಲಾಪರಾಧಿ ನ್ಯಾಯ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ : ಕಲ್ಲು ಕ್ವಾರಿ ದುರಂತ – ತಪ್ಪಿತಸ್ಥರ ವಿರುದ್ಧ ಕ್ರಮ ಎಂದ ಡಿಸಿಎಂ ಜಿ.ಪರಮೇಶ್ವರ್‌

Related posts

ಉದ್ಯೋಗಾಕಾಂಕ್ಷಿಗಳಿಗೆ ಗುಡ್ ನ್ಯೂಸ್; ಆರೋಗ್ಯ ಇಲಾಖೆಯಲ್ಲಿ ನೇಮಕಾತಿ..!

Kalpana Editor

ರೇಣುಕಾಸ್ವಾಮಿ ಕೊಲೆ ಪ್ರಕರಣ; ದರ್ಶನ್‌ಗೆ ಮಾಫಿ ಸಾಕ್ಷಿ ಕಂಟಕ – ಹೈಕೋರ್ಟ್ ಮೆಟ್ಟಿಲೇರಲು ಪ್ಲಾನ್..!

kknewskannada1987@gmail.com

ಮಂಡ್ಯ ಜಿಲ್ಲೆ ಶಾಸಕರೊಂದಿಗೆ ಡಿಕೆಶಿ ಮಿಡ್‌ನೈಟ್ ಮೀಟಿಂಗ್ – ಕೆರಳಿಸಿದ ಕುತೂಹಲ

Kalpana Editor