July 23, 2026
kranthikidi.com
ತಾಜಾಸುದ್ದಿರಾಜ್ಯ

ಏರ್‌ಪೋರ್ಟ್‌ನಲ್ಲಿ ಬಾಂಬ್ ಬೆದರಿಕೆ; ಇಂಡಿಗೋ ವಿಮಾನದಲ್ಲಿ ಚೀಟಿ ಪತ್ತೆ..!

ಬೆಂಗಳೂರು : ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಂಡಿಗೋ ವಿಮಾನದ ಶೌಚಾಲಯದ ಒಳಗೆ ಬಾಂಬ್ ಬೆದರಿಕೆಯ ಚೀಟಿ ಪತ್ತೆಯಾಗಿದೆ.

ನೆನ್ನೆ (ಗುರುವಾರ) ಬೆಂಗಳೂರಿನಿಂದ ಅಹಮದಾಬಾದ್‌ಗೆ ತೆರಳುತ್ತಿದ್ದ ಇಂಡಿಗೋ 6E-6423 ವಿಮಾನದ ಶೌಚಾಲಯದ ಒಳಗೆ ಬೆದರಿಕೆಯ ಚೀಟಿ ಪತ್ತೆಯಾಗಿದೆ. ಪತ್ತೆಯಾದ ಚೀಟಿಯಲ್ಲಿ “ದಯವಿಟ್ಟು ಹೋಗಬೇಡಿ, ಬಾಂಬ್ ಇದೆ” ಎಂದು ಬರೆದಿದೆ. ವಿಚಾರ ಗೊತ್ತಾಗಿ ಪ್ರಯಾಣಿಕರು ಭಯಭೀತರಾಗಿದ್ದಾರೆ.

ಬೆದರಿಕೆಯ ಚೀಟಿ ಪತ್ತೆಯಾದ ಹಿನ್ನೆಲೆ ಸಂಜೆ 7:30ಕ್ಕೆ ಹೊರಡಬೇಕಿದ್ದ ವಿಮಾನ ಐದು ಗಂಟೆ ತಡವಾಗಿ ಟೇಕ್ ಆಫ್ ಆಗಿದೆ. ಈ ಸಂಬಂಧ ಎಟಿಸಿಯಿಂದ ಕ್ಲಿಯರೆನ್ಸ್ ಸಿಕ್ಕಿದ್ದು, ಓರ್ವ ಪ್ರಯಾಣಿಕನೇ ಈ ಚೀಟಿ ಬರೆದು ಬಿಸಾಡಿರುವ ಶಂಕೆ ವ್ಯಕ್ತವಾಗಿದೆ. ಸದ್ಯ ಪ್ರಯಾಣಿಕನ ವಿರುದ್ಧ ದೂರು ದಾಖಲಾಗಿದೆ. ಇದನ್ನೂ ಓದಿ : ಕ್ರೀಡಾ ಮತ್ತು ಯುವಜನ ಸಬಲೀಕರಣ ಇಲಾಖೆಯಿಂದ ಮಹತ್ವದ ಕೊಡುಗೆ; ಕ್ರೀಡಾ ಕ್ಷೇತ್ರಕ್ಕೆ ನವಚೈತನ್ಯ – ಡಿಸಿಎಂ ಡಾ. ಜಿ. ಪರಮೇಶ್ವರ

Related posts

ದೇವರ ಮಹೋತ್ಸವ ಕಾರ್ಯಕ್ರಮದಲ್ಲಿ ಊಟ ಸೇವನೆ; 150 ಕ್ಕೂ ಹೆಚ್ಚು ಮಂದಿ ಅಸ್ವಸ್ಥ..!

Kalpana Editor

ಹೊಳೆನರಸೀಪುರದ ಪ್ರಮುಖ ಗ್ರಾಮಗಳಲ್ಲಿ ಮೆರವಣಿಗೆ; ಚೆನ್ನಮ್ಮ ಅಂತಿಮ ಯಾತ್ರೆ ಆರಂಭ..!

Kalpana Editor

ವಕ್ಫ್ ವಿವಾದ; ರಾಜ್ಯ ಸರ್ಕಾರದ ಮೇಲೆ ಮುಗಿಬಿದ್ದ, ಆರ್‌.ಅಶೋಕ್​​

Kalpana Editor