July 22, 2026
kranthikidi.com
ತಾಜಾಸುದ್ದಿದೇಶರಾಜಕೀಯರಾಜ್ಯ

ಸಂಪುಟ ವಿಸ್ತರಣೆ ಪ್ರಾಥಮಿಕ ಚರ್ಚೆ; ಪ್ರತ್ಯೇಕ ಪಟ್ಟಿ ಕಳುಹಿಸಲು ಸಿಎಂ, ಮಾಜಿ ಸಿಎಂಗೆ ಸೂಚನೆ..!

ನವದೆಹಲಿ/ಬೆಂಗಳೂರು : ಸಿಎಂ ಡಿ.ಕೆ.ಶಿವಕುಮಾರ್‌ ನೇತೃತ್ವದ ಸರ್ಕಾರದ ಸಚಿವ ಸಂಪುಟ ವಿಸ್ತರಣೆಗೆ ಸಂಬಂಧಿಸಿದಂತೆ ದೆಹಲಿಯಲ್ಲಿ ಈಚೆಗೆ ನಡೆದಿದ್ದು, ಪ್ರಾಥಮಿಕ ಚರ್ಚೆಯಷ್ಟೇ. ಪ್ರತ್ಯೇಕ ಪಟ್ಟಿಯನ್ನು ಕಳುಹಿಸುವಂತೆ ಸಿಎಂ ಡಿಕೆಶಿ ಮತ್ತು ಮಾಜಿ ಸಿಎಂ ಸಿದ್ದರಾಮಯ್ಯಗೆ ಹೈಕಮಾಂಡ್‌ ಸೂಚನೆ ನೀಡಿದೆ.

ಸಿಎಂ ಮತ್ತು ಮಾಜಿ ಸಿಎಂ ಕಳುಹಿಸುವ ಪಟ್ಟಿ ಇಟ್ಟುಕೊಂಡು ಸೋಮವಾರದ ನಂತರ ಹೈಕಮಾಂಡ್ ಚರ್ಚೆ ನಡೆಸಲಿದೆ. ಮಲ್ಲಿಕಾರ್ಜುನ್ ಖರ್ಗೆ ಜೊತೆ ರಾಹುಲ್‌ ಗಾಂಧಿ ಚರ್ಚಿಸಲಿದ್ದಾರೆ. ಅಗತ್ಯ ಬಿದ್ದರೆ ಸಿಎಂ-ಮಾಜಿ ಸಿಎಂ ಇಬ್ಬರಿಗೂ ದೆಹಲಿಗೆ ಬುಲಾವ್ ನೀಡುವ ಸಾಧ್ಯತೆಯಿದೆ. ಹೈಕಮಾಂಡ್‌ಗೆ ಒಪ್ಪಿಗೆಯಾದ್ರೆ ಮುಂದಿನ ವಾರ ಅಂತಿಮ ಪಟ್ಟಿ ಹೊರಬೀಳುವ ಸಾಧ್ಯತೆ ಇದೆ.

ಇಬ್ಬರ ಪಟ್ಟಿ ಹೈಕಮಾಂಡ್‌ಗೆ ಸಮಾಧಾನ ತಂದರೆ ಮುಂದಿನ ವಾರ ಅಂತಿಮ ಪಟ್ಟಿಯನ್ನು ರಾಜ್ಯಕ್ಕೆ ಹೈಕಮಾಂಡ್‌ ನಾಯಕರು ಕಳುಹಿಸಿಕೊಡಲಿದ್ದಾರೆ. ಮುಂದಿನ ಬೆಳವಣಿಗೆ ಹೀಗಿರಲಿದೆ ಎಂದು ಸಿಎಂ ಹಾಗೂ ಮಾಜಿ ಸಿಎಂಗೆ ಎಐಸಿಸಿ ನಾಯಕರು ಸ್ಪಷ್ಟ ಸೂಚನೆ ನೀಡಿದ್ದಾರೆ. ಇದನ್ನೂ ಓದಿ : ಇಂದು ಉದ್ಘಾಟಿಸಬೇಕಿದ್ದ, ಕೊಪ್ಪಳ ರೈಲ್ವೆ ನಿಲ್ದಾಣದಲ್ಲಿ ನೀರು ಸೋರಿಕೆ..!

Related posts

ಭಾರೀ ಮಳೆ – ನುಗ್ಗಿದ ನೀರು, ಇತ್ತ ಬೃಹತ್ ಮರಗಳು ಧರಾಶಾಹಿ..!

Kalpana Editor

ಮತ್ತೆ ಸುಪ್ರೀಂ ಮೆಟ್ಟಿಲೇರಿದ ನಟ ದರ್ಶನ್ – ಜಾಮೀನು ಅರ್ಜಿ ಸಲ್ಲಿಸದಂತೆ ನೀಡಿದ್ದ, ಆದೇಶ ಮಾರ್ಪಾಡಿಗೆ ಮನವಿ..!

Kalpana Editor

ಸಶಸ್ತ್ರ ಸೀಮಾ ಬಲದಲ್ಲಿ 404 ಕಾನ್ಸ್‌ಟೇಬಲ್ ಹುದ್ದೆಗೆ ನೇಮಕಾತಿ..!

Kalpana Editor