July 23, 2026
kranthikidi.com
ತಾಜಾಸುದ್ದಿರಾಜ್ಯ

ಧಾರವಾಡದ ಖಾಸಗಿ ಶಾಲೆಯ ಮಕ್ಕಳಿಗೆ ವಿಚಿತ್ರ ಜ್ವರ…!

ಧಾರವಾಡ : ಅಳ್ನಾವರದ ಖಾಸಗಿ ವಸತಿ ಶಾಲೆಯಲ್ಲಿ ಓದುತ್ತಿರುವ ಸುಮಾರು 40ಕ್ಕೂ ಹೆಚ್ಚು ಮಕ್ಕಳಲ್ಲಿ ವಿಚಿತ್ರ ಜ್ವರ ಕಾಣಿಸಿಕೊಂಡಿದ್ದು, ಜ್ವರದ ಜೊತೆಗೆ ಕೈ-ಕಾಲು ನೋವು ಹಾಗೂ ನರಗಳು ಜಗ್ಗಿದಂತಾಗುತ್ತಿರುವ ಲಕ್ಷಣಗಳಿಂದ ಮಕ್ಕಳು ತೀವ್ರವಾಗಿ ಬಳಲುತ್ತಿದ್ದಾರೆ.

ಅಳ್ನಾವರದ ಖಾಸಗಿ ವಸತಿ ಶಾಲೆ ಹಾಗೂ ಕಸ್ತೂರಬಾ ವಸತಿ ನಿಲಯದ ಮಕ್ಕಳಲ್ಲೇ ಈ ಲಕ್ಷಣಗಳು ಕಂಡುಬಂದಿವೆ. ಕಳೆದ ಎರಡು ದಿನಗಳಿಂದ ಜ್ವರ ಕಾಣಿಸಿಕೊಂಡಿದ್ದು, ಕೈ-ಕಾಲು ನೋವಿನಿಂದ ಕೆಲ ಮಕ್ಕಳು ನರಳಾಡುತ್ತಿದ್ದಾರೆ. ಅಸ್ವಸ್ಥಗೊಂಡ ಮಕ್ಕಳಲ್ಲಿ 8 ಮಂದಿಯನ್ನು ಧಾರವಾಡ ಜಿಲ್ಲಾ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಉಳಿದ ಮಕ್ಕಳಿಗೆ ಅಳ್ನಾವರ, ಹಳಿಯಾಳ ಸರ್ಕಾರಿ ಆಸ್ಪತ್ರೆಗಳು ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಮುಂದುವರಿದಿದೆ.

ಮಕ್ಕಳಲ್ಲಿ ಕಂಡುಬಂದಿರುವ ಲಕ್ಷಣಗಳು ಇನ್ಫ್ಲುಯೆಂಜಾ A & B ಅಥವಾ ವೈರಲ್ ಮಯೋಸೈಟಿಸ್ ಆಗಿರಬಹುದೆಂದು ವೈದ್ಯರು ಶಂಕಿಸಿದ್ದಾರೆ. ಜ್ವರದ ವೇಳೆ ಕೈ-ಕಾಲು ಮುಟ್ಟಿದರೂ ತೀವ್ರ ನೋವು ಕಾಣಿಸುತ್ತಿದೆ ಎಂದು ವೈದ್ಯರು ತಿಳಿಸಿದ್ದಾರೆ. ಸದ್ಯ ಮಕ್ಕಳ ಆರೋಗ್ಯದ ಮೇಲೆ ನಿಗಾ ವಹಿಸಲಾಗಿದ್ದು, ಇದು ಯಾವ ಸೋಂಕು ಎಂಬುದನ್ನು ಪರೀಕ್ಷೆಗಳ ಮೂಲಕ ವೈದ್ಯರು ಪತ್ತೆಹಚ್ಚುವ ಕಾರ್ಯದಲ್ಲಿ ತೊಡಗಿದ್ದಾರೆ. ಇದನ್ನೂ ಓದಿ : ಮಾಜಿ ಪ್ರಧಾನಿ ದೇವೇಗೌಡರ ಪತ್ನಿ ಚೆನ್ನಮ್ಮ ವಿಧಿವಶ..!

Related posts

‘ಪೆದ್ದಿ’ ಸಿನಿಮಾ ರಿಲೀಸ್​​ಗೆ, ಮೊದಲು ಫ್ಯಾನ್ಸ್​​ಗೆ ಬ್ಯಾಡ್ ನ್ಯೂಸ್..!

Kalpana Editor

ಜಪ್ತಿ ಮಾಡಿದ್ದ, ಮದ್ಯದ ಲೆಕ್ಕದಲ್ಲಿ ಭಾರೀ ವ್ಯತ್ಯಾಸ; ಅಬಕಾರಿ ಅಧಿಕಾರಿಗಳ ಮೇಲೆ ʻಲೋಕಾʼ ದಾಳಿ..!

Kalpana Editor

ತೆಲುಗು ಬ್ರಾಹ್ಮಣ ಸಂಪ್ರದಾಯದಂತೆ ನೆರವೇರಿದ ಗಾಯಕಿ ಎಸ್.ಜಾನಕಿ ಅಂತ್ಯಕ್ರಿಯೆ..!

Kalpana Editor