July 23, 2026
kranthikidi.com
ತಾಜಾಸುದ್ದಿಸಿನಿಮಾ

ಶೂಟಿಂಗ್ ವೇಳೆ ಅವಘಡ; ತೆಲುಗು ಸ್ಟಾರ್ ನಂದಮೂರಿ ಬಾಲಯ್ಯಗೆ ಶಸ್ತ್ರಚಿಕಿತ್ಸೆ..!

ತೆಲುಗು ನಟ, ಶಾಸಕ ನಂದಮೂರಿ ಬಾಲಕೃಷ್ಣ ಅವರ ಚಿತ್ರವೊಂದರ ಚಿತ್ರೀಕರಣದ ವೇಳೆ ಅವಘಡ ಸಂಭವಿಸಿದೆ. ಆಂಧ್ರಪ್ರದೇಶದ ಕಾಕಿನಾಡ ಪೋರ್ಟ್ ಬಳಿ ಬಾಲಯ್ಯ ನಟನೆಯ ಮುಂಬರುವ ಹೆಸರಿಡದ ಎನ್‌ಬಿಕೆ111 ಚಿತ್ರದ ಸಾಹಸ ಚಿತ್ರೀಕರಣ ನಡೆದಿತ್ತು. ಈ ವೇಳೆ ಬಾಲಯ್ಯಗೆ ಸಣ್ಣ ಅಪಘಾತವಾಗಿದೆ. ಈ ವೇಳೆ ಸ್ನಾಯು ಸೆಳೆತಕ್ಕೆ ಒಳಗಾಗಿದ್ದಾರೆ 66 ವರ್ಷದ ಬಾಲಯ್ಯ. ಕೂಡಲೇ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಇದೀಗ ಬಾಲಯ್ಯ ಶಸ್ತ್ರಚಿಕಿತ್ಸೆಗೆ ಒಳಗಾಗಬೇಕಿದೆ.

ಸಿನಿಮಾ ಹಾಗೂ ರಾಜಕೀಯದಲ್ಲಿ ಬ್ಯುಸಿ ಇರೋ ಬಾಲಯ್ಯ ಹೆಸರಿಡದ ಚಿತ್ರ ಗೋಪಿಚಂದ್ ಮಾನಿನೇನಿ ನಿರ್ದೇಶನದ ಸಿನಿಮಾದಲ್ಲಿ ತೊಡಗಿದ್ದರು. ಚಿತ್ರೀಕರಣ ಪ್ರಾರಂಭವಾಗಿ ತಿಂಗಳುಗಳೇ ಉರುಳಿದೆ. ಇದೀಗ ಸಾಹಸ ಚಿತ್ರೀಕರಣದ ವೇಳೆ ಸಣ್ಣ ಸ್ಟಂಟ್ ಮಾಡುವ ವೇಳೆ ಬಾಲಯ್ಯ ಸ್ನಾಯುಮುರಿತಕ್ಕೆ ಒಳಗಾಗಿದ್ದಾರೆ. ಹೀಗಾಗಿ ಶಸ್ತ್ರಚಿಕಿತ್ಸೆಗೆ ಸೂಚಿಸಿದ ವೈದ್ಯರ ಸಲಹೆಯಂತೆ ಕೆಲವೇ ದಿನಗಳಲ್ಲಿ ಶಸ್ತ್ರಚಿಕಿತ್ಸೆಗೆ ನಡೆಯಲಿದೆ. ಆಂಧ್ರಪ್ರದೇಶದ ಖಾಸಗಿ ಆಸ್ಪತ್ರೆಯೊಂದಲ್ಲಿ ಬಾಲಯ್ಯ ಚಿಕಿತ್ಸೆ ಪಡೆಯುತ್ತಿದ್ದಾರೆ. ಅಭಿಮಾನಿಗಳು ಭಯ ಪಡಬೇಕಿಲ್ಲ ಎಂದು ಆಪ್ತರು ತಿಳಿಸಿದ್ದಾರೆ. ಇದನ್ನೂ ಓದಿ : ನೀಟ್ ಯುಜಿ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣ; ದೆಹಲಿ ವಿದ್ಯಾರ್ಥಿಗಳ ಪರ ನಿಂತ ನಟಿ ಆಲಿಯಾ ಭಟ್..!

Related posts

ಹೈಕಮಾಂಡ್​​​​ನಿಂದ ಬಂತು ಫೋನ್, ಡಿಕೆಶಿಗೆ ಖಡಕ್ ಎಚ್ಚರಿಕೆ..!

Kalpana Editor

ಇಂದಿನಿಂದ ನೈಸ್ ರಸ್ತೆ, ಎಲೆಕ್ಟ್ರಾನಿಕ್ಸ್‌ ಸಿಟಿ ಫ್ಲೈಓವರ್‌ – ಟೋಲ್ ದರ ಏರಿಕೆ..!

Kalpana Editor

ಅಯೋಧ್ಯೆ, ಬದರಿನಾಥ ಬಳಿಕ ಈಗ ವೈಷ್ಣೋದೇವಿಯಲ್ಲೂ ಅಕ್ರಮ..!

Kalpana Editor