August 1, 2026
kranthikidi.com
ತಾಜಾಸುದ್ದಿದೇಶ

ಪ್ರಶ್ನೆಪತ್ರಿಕೆ ಸೋರಿಕೆಗೆ ಕಠಿಣ ಕಾಯ್ದೆ; 10 ವರ್ಷ ಜೈಲು, 1 ಕೋಟಿ ದಂಡಕ್ಕೆ ಕೇಂದ್ರ ಸಿದ್ಧತೆ..!

ನವದೆಹಲಿ : ದೇಶದಲ್ಲಿ ಪರೀಕ್ಷಾ ಪ್ರಶ್ನೆಪತ್ರಿಕೆ ಸೋರಿಕೆ ಮತ್ತು ಅಕ್ರಮಗಳನ್ನು ತಡೆಯಲು ಹಾಲಿ ಇರುವ ಕಾನೂನುಗಳನ್ನು ಮತ್ತಷ್ಟು ಕಠಿಣಗೊಳಿಸಲು ಕೇಂದ್ರ ಸರ್ಕಾರ ಸಿದ್ಧತೆ ನಡೆಸಿದೆ ಎಂದು ಮೂಲಗಳು ತಿಳಿಸಿವೆ. ಪ್ರಧಾನಿ ನರೇಂದ್ರ ಮೋದಿ ಅವರು ಶುಕ್ರವಾರ ಪ್ರಶ್ನೆಪತ್ರಿಕೆ ಸೋರಿಕೆ ವಿಷಯದ ಕುರಿತು ವಿಡಿಯೋ ಸಂದೇಶ ರವಾನಿಸಿದ ಬೆನ್ನಲ್ಲೇ ಈ ಬೆಳವಣಿಗೆ ನಡೆದಿದೆ.

ಸರ್ಕಾರವು ಸಾರ್ವಜನಿಕ ಪರೀಕ್ಷೆಗಳ (ಅಕ್ರಮ ತಡೆ) ಕಾಯ್ದೆ 2024ಕ್ಕೆ ತಿದ್ದುಪಡಿ ತರಲು ಯೋಜಿಸಿದೆ. ಈ ಪ್ರಸ್ತಾವಿತ ತಿದ್ದುಪಡಿಗಳಿಗೆ ಶುಕ್ರವಾರ ನಡೆಯಲಿರುವ ಕೇಂದ್ರ ಸಚಿವರ ಸಂಪುಟ ಸಭೆಯಲ್ಲಿ ಅನುಮೋದನೆ ಸಿಗುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ. ಪ್ರಧಾನಿ ಮೋದಿ ಅವರ ಘೋಷಣೆಯಂತೆ, ಪರೀಕ್ಷಾ ಸೋರಿಕೆ ಪ್ರಕರಣಗಳ ಶೀಘ್ರ ತನಿಖೆ ಮತ್ತು ವಿಚಾರಣೆಗಾಗಿ ‘ಫಾಸ್ಟ್ ಟ್ರ್ಯಾಕ್ ಕೋರ್ಟ್’ಗಳನ್ನು ಸ್ಥಾಪಿಸುವ ನಿಬಂಧನೆಯನ್ನು ಸಹ ಕಾಯ್ದೆಯಲ್ಲಿ ಸೇರಿಸಲಾಗುತ್ತದೆ.

ಪ್ರಸ್ತುತ ವೈಯಕ್ತಿಕ ಪ್ರಕರಣಗಳಲ್ಲಿ ತಪ್ಪಿತಸ್ಥರಿಗೆ 3 ರಿಂದ 5 ವರ್ಷಗಳ ಜೈಲು ಶಿಕ್ಷೆ ಮತ್ತು 10 ಲಕ್ಷ ರೂ.ದವರೆಗೆ ದಂಡ ವಿಧಿಸಲು ಕಾನೂನಿನಲ್ಲಿ ಅವಕಾಶವಿದೆ. ಹೊಸ ತಿದ್ದುಪಡಿಯ ಪ್ರಕಾರ ಶಿಕ್ಷೆಯ ಅವಧಿಯನ್ನು 5 ರಿಂದ 10 ವರ್ಷಗಳ ಜೈಲು ಶಿಕ್ಷೆಗೆ ಹೆಚ್ಚಿಸಲಾಗುತ್ತಿದ್ದು, ದಂಡದ ಪ್ರಮಾಣವನ್ನು 1 ಕೋಟಿ ರೂ.ರೆಗೆ ಏರಿಸಲು ಉದ್ದೇಶಿಸಲಾಗಿದೆ. ಇದನ್ನೂ ಓದಿ : ಪ್ರತಿಭಟನಾ ನಿರತ ವಿದ್ಯಾರ್ಥಿಗಳನ್ನು ದೇಶದ ಶತ್ರುಗಳಂತೆ ನೋಡುತ್ತಿದೆ ಮೋದಿ ಸರ್ಕಾರ – ಸೋನಿಯಾ ಗಾಂಧಿ

Related posts

ರಾಮಕೃಷ್ಣ ಆಶ್ರಮದಲ್ಲಿ ವಿವೇಕ ಸ್ಮಾರಕ ಉದ್ಘಾಟಿಸಿದ ಪ್ರಧಾನಿ ಮೋದಿ

Kalpana Editor

ಮೀಟರ್​​​ ರೀಡಿಂಗ್​​ ಇಲ್ಲ – ಜುಲೈ ತಿಂಗಳ ಕರೆಂಟ್​ ಬಿಲ್​​ ಬರಲ್ಲ..!

Kalpana Editor

ಅವ್ಯವಸ್ಥೆ ಸರಿಪಡಿಸಲು ಕೇಂದ್ರ ಚುನಾವಣಾ ಆಯೋಗಕ್ಕೆ ಮನವಿ; ಎಸ್‍ಐಆರ್ ದುರ್ಬಳಕೆಗೆ ರಾಜ್ಯ ಸರ್ಕಾರದ ಕುಮ್ಮಕ್ಕು – ಬಿ.ವೈ.ವಿಜಯೇಂದ್ರ

Kalpana Editor