August 1, 2026
kranthikidi.com
ತಾಜಾಸುದ್ದಿರಾಜ್ಯ

ಮೊಟ್ಟೆ ದರ ಏರಿಕೆ; ಇದು ಸರ್ಕಾರಿ ಶಾಲೆಯ ʻಒಂದು ಮೊಟ್ಟೆಯ ಕಥೆʼ..!

ಬೆಂಗಳೂರು : ಮೊಟ್ಟೆ ದರ ಏರಿಕೆಯಾಗಿದ್ದು, ಸರ್ಕಾರಿ ಶಾಲೆಗಳಲ್ಲಿ ಹೆಚ್ಚುವರಿ ಹಣ ಹೊಂದಿಸಲಾಗದೆ ಮೊಟ್ಟೆಗೆ ಕೊಕ್ ನೀಡಲಾಗಿದೆ. ಮಾರುಕಟ್ಟೆಯಲ್ಲಿ ಮೊಟ್ಟೆ ದರ 2-3 ರೂ. ಏರಿಕೆಯಾಗಿದೆ. ಮೊಟ್ಟೆ ದರ ಏರಿಕೆ ಆಗಿದ್ದರಿಂದ ಶಾಲೆಗಳಲ್ಲಿ ಹಣಕಾಸು ಕೊರತೆ ಉಂಟಾಗುತ್ತಿದೆ.

ಮೊಟ್ಟೆ ಖರೀದಿಗೆ ಸರ್ಕಾರ ಅನುದಾನ ಹೆಚ್ಚಳ ಮಾಡಿಲ್ಲ. ಈ ಬಗ್ಗೆ ಪ್ರಸ್ತಾವನೆ ಹೋದರೂ ಸರ್ಕಾರ ಅದಕ್ಕೆ ಗ್ರೀನ್ ಸಿಗ್ನನ್ ಕೊಟ್ಟಿಲ್ಲ. ಇದರಿಂದ ಶಿಕ್ಷಕರು ಇಕ್ಕಟ್ಟಿಗೆ ಸಿಲುಕಿದ್ದಾರೆ. ಅಲ್ಲದೇ ಶಾಲಾ ಮಕ್ಕಳಿಗೆ ಕೇವಲ ಬಾಳೆಹಣ್ಣನ್ನು ಕೊಟ್ಟು ಶಿಕ್ಷಕರು ಕೈತೊಳೆದುಕೊಳ್ಳುತ್ತಿದ್ದಾರೆ.

ರಾಜ್ಯದಲ್ಲಿ 1-10ನೇ ತರಗತಿವರೆಗಿನ ಮಕ್ಕಳಿಗೆ 6 ದಿನ ಸರ್ಕಾರ ಮೊಟ್ಟೆ ಕೊಡುತ್ತಿದೆ. ಸುಮಾರು 55 ಲಕ್ಷ ಮಕ್ಕಳಿಗೆ ನಿತ್ಯ ಮೊಟ್ಟೆ ಶಿಕ್ಷಣ ಇಲಾಖೆ ಮೊಟ್ಟೆ ಕೊಡುತ್ತಿದೆ. ಇದಕ್ಕಾಗಿ ಶಾಲಾ ಹಂತದಲ್ಲಿ ಮೊಟ್ಟೆ ಖರೀದಿಗೆ 6 ರೂ. ಕೊಡಲಾಗುತ್ತಿದೆ.

ಮಾರುಕಟ್ಟೆಯಲ್ಲಿ ಮೊಟ್ಟೆ ದರ 8-9 ರೂ.ಗೆ ಏರಿಕೆಯಾಗಿದೆ. ಮೊಟ್ಟೆ ದರ ಏರಿಕೆ ಆದರೋ ಹೆಚ್ಚುವರಿ ಹಣವನ್ನು ಸರ್ಕಾರ ನೀಡುತ್ತಿಲ್ಲ. ಹೀಗಾಗಿ ಮೊಟ್ಟೆಗೆ ಹಣ ಭರಿಸಲಾಗದೇ ಶಿಕ್ಷಕರು ಹೈರಾಣಾಗಿದ್ದಾರೆ. ಇದನ್ನೂ ಓದಿ :ಮೈಸೂರಿಗೆ ಪ್ರಧಾನಿ ಮೋದಿ ಭೇಟಿ; ವಿವೇಕಾನಂದ ಸ್ಮಾರಕ ಲೋಕಾರ್ಪಣೆ..!

Related posts

ಕಲ್ಲು ಕ್ವಾರಿ ದುರಂತ; ಅಧಿಕೃತ ವರದಿ ಬಂದ ಬಳಿಕ ಕ್ರಮಗಳ ಬಗ್ಗೆ ತೀರ್ಮಾನ – ಸಿಎಂ ಡಿಕೆಶಿ

Kalpana Editor

ʻರಾಮಮಂದಿರ ದೇಣಿಗೆ ಕಳವುʼ ಚರ್ಚೆಗೆ ಒತ್ತಾಯ – ಲೋಕಸಭೆಯಲ್ಲೂ ಗದ್ದಲ, ಕಲಾಪ ಮುಂದೂಡಿಕೆ..!

Kalpana Editor

ಚಿಕ್ಕಬಳ್ಳಾಪುರದಲ್ಲಿ ಟಾರ್ಗೆಟ್ ರಾಜಕಾರಣ: 9 ಜನರ ಬಂಧನ ಖಂಡಿಸಿ ನಿಖಿಲ್ ಕಿಡಿ

Kalpana Editor