21.6 C
ಬೆಂಗಳೂರು
September 22, 2026
kranthikidi.com
ತಾಜಾಸುದ್ದಿರಾಜ್ಯ

ಕಾಲುವೆ ನೀರು ನುಗ್ಗಿ ಬೆಳೆಗಳು ಹಾನಿ – ಅಧಿಕಾರಿಗಳ ವಿರುದ್ಧ ರೈತರ ಆಕ್ರೋಶ..!

ರಾಯಚೂರು : ದೇವದುರ್ಗ ತಾಲೂಕಿನ ಇಂಗಳದಾಳದಲ್ಲಿ ನಾರಾಯಣಪುರ ಬಲದಂಡೆ ಕಾಲುವೆ ನೀರು ಜಮೀನಿಗೆ ನುಗ್ಗಿ ಲಕ್ಷಾಂತರ ರೂಪಾಯಿ ಬೆಳೆಹಾನಿಯಾಗಿದೆ. ಕಾಲುವೆಯಲ್ಲಿ ಹೂಳು ತುಂಬಿ, ಗಿಡಗಂಟೆ ಬೆಳೆದ ಹಿನ್ನೆಲೆ ಜಮೀನುಗಳಿಗೆ ನೀರು ನುಗ್ಗಿದೆ. ಅಲ್ಲದೇ ಕಾಲುವೆಗೆ ನೀರು ಹರಿಸುವ ಮುನ್ನ ಜಂಗಲ್ ಕಟ್ ಮಾಡದ ಹಿನ್ನೆಲೆ ಅನಾಹುತ ನಡೆದಿದೆ.

ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಬೆಳೆದ ಹತ್ತಿ ಬೆಳೆ ಹಾನಿಯಾಗಿದ್ದು, ರೈತರು ಕಂಗಾಲಾಗಿದ್ದಾರೆ. ನಾರಾಯಣಪುರ ಬಲದಂಡೆ ಕಾಲುವೆಯ 17ನೇ ಉಪಕಾಲುವೆಯಲ್ಲಿ ಗಿಡ ಗಂಟೆಗಳು ಬೆಳೆದಿದ್ದು, ಇಂಗಳದಾಳ, ಬೂದಿನಾಳ ಜಮೀನುಗಳಿಗೆ ನೀರು ನುಗ್ಗಿದೆ. ಬೇರೆ ದಾರಿಯಿಲ್ಲದೇ ಜೆಸಿಬಿಯಿಂದ ಸ್ವತಃ ರೈತರೇ ಕಾಲುವೆ ಸ್ವಚ್ಛ ಮಾಡಿಕೊಂಡಿದ್ದಾರೆ. ಕೆಬಿಜೆಎನ್‌ಎಲ್ ಅಧಿಕಾರಿಗಳ ಬೇಜವಾಬ್ದಾರಿತನಕ್ಕೆ ರೈತರು ಆಕ್ರೋಶ ಹೊರಹಾಕಿದ್ದಾರೆ. ಇದನ್ನೂ ಓದಿ : ಫೇಸ್‌ಬುಕ್‌ನಿಂದ ಮೋದಿ ವಿಡಿಯೋ ನಿರ್ಬಂಧ – ಕ್ಷಮೆಯಾಚಿಸಿದ ಟೆಕ್‌ ದೈತ್ಯ ಮೆಟಾ

Related posts

‘ಒಳ್ಳೆತನದ ಮುಖವಾಡ ಧರಿಸಿದ್ದ ದೀಪಿಕಾ’ – ಹೇಳಿಕೆಗೆ ಕ್ಷಮೆ ಕೇಳಿದ ನಿರ್ದೇಶಕ

Kalpana Editor

ಉಡುಪಿ ಶ್ರೀಕೃಷ್ಣ ಮಠಕ್ಕೆ ಅಣ್ಣಾಮಲೈ ಭೇಟಿ; ಆತ್ಮೀಯ ಸ್ವಾಗತ..!

kknewskannada1987@gmail.com

ಮಹಿಳೆ ಮೇಲೆ ಲೈಂಗಿಕ ದೌರ್ಜನ್ಯ, ಜೀವ ಬೆದರಿಕೆ ಆರೋಪ ಖಂಡಿಸಿ; ಕಾಂಗ್ರೆಸ್ ಪ್ರತಿಭಟನೆ..!

kknewskannada1987@gmail.com