ಮೈಸೂರು : ಇವತ್ತು (ಜು.28) ರಾತ್ರಿಯೇ ಸಚಿವ ಸಂಪುಟ ವಿಸ್ತರಣೆ ವಿಚಾರ ಫೈನಲ್ ಆಗಬಹುದು ಎಂದು ಮಾಜಿ ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ. ಮೈಸೂರಿನಲ್ಲಿ ಅವರು ಮಾಧ್ಯಮಗಳ ಜೊತೆ ಮಾತನಾಡಿದರು. ಈ ವೇಳೆ ಅವರು ಇಂದು ರಾತ್ರಿ ಸಭೆ ಇದೆ. ಸಭೆಯಲ್ಲಿ ಎಲ್ಲಾ ತೀರ್ಮಾನ ಆಗುತ್ತೆ. ಇವತ್ತು ರಾತ್ರಿಯೇ ಫೈನಲ್ ಆಗಬಹುದು ಎಂದಿದ್ದಾರೆ.
ಯಾವತ್ತು ವಿಸ್ತರಣೆಯಾಗುತ್ತೆ ಎಂಬುದನ್ನು ಸಿಎಂ ಬಳಿ ಕೇಳಿ. ಅದನ್ನೆಲ್ಲ ಸಿಎಂಗೆ ಕೇಳಬೇಕು ಎಂದಿದ್ದಾರೆ. ದೆಹಲಿಯಲ್ಲಿ ನೇರವಾಗಿ ಮೈಸೂರಿಗೆ ಸಿದ್ದರಾಮಯ್ಯ ಆಗಮಿಸಿದರು. ಹಿರಿಯ ಪುತ್ರ ದಿ.ರಾಕೇಶ್ ಸಿದ್ದರಾಮಯ್ಯ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಭಾಗಿಯಾಗಿ, ಮತ್ತೆ ವಾಪಸ್ ದೆಹಲಿಗೆ ಅವರು ತೆರಳಲಿದ್ದಾರೆ. ಇದನ್ನೂ ಓದಿ : ದರ್ಶನ್ ಪ್ರಕರಣ; ಸಾಕ್ಷಿಗಳಿಗೆ ಬೆದರಿಕೆ ಹಾಕಿದ್ದ ಆರೋಪಿಗಳಿಗೆ ಜಾಮೀನು
