August 1, 2026
kranthikidi.com
ತಾಜಾಸುದ್ದಿರಾಜಕೀಯರಾಜ್ಯ

ಸಂಪುಟ ವಿಸ್ತರಣೆ ಚರ್ಚೆ – ಶಾಸಕ ಹೆಚ್.ಸಿ.ಬಾಲಕೃಷ್ಣ ಟೆಂಪಲ್ ರನ್

ರಾಮನಗರ : ರಾಜ್ಯ ಸಂಪುಟ ವಿಸ್ತರಣೆಯ ಕುರಿತು ಚರ್ಚೆಗೆ ಸಿಎಂ ದೆಹಲಿಗೆ ಪ್ರವಾಸ ಬೆಳೆಸುತ್ತಿರುವ ಬೆನ್ನಲ್ಲೇ, ಮಾಗಡಿ ಶಾಸಕ ಹೆಚ್.ಸಿ. ಬಾಲಕೃಷ್ಣ ಸಚಿವ ಸ್ಥಾನಕ್ಕಾಗಿ ದೇವರಮೊರೆ ಹೋಗಿದ್ದಾರೆ. ಈ ಬಾರಿ ತಮಗೆ ಮಂತ್ರಿಗಿರಿ ಸಿಗುವುದು ಖಚಿತ ಎಂಬ ವಿಶ್ವಾಸದೊಂದಿಗೆ ಪತ್ನಿ ಸಮೇತ ಹಲವು ದೇವಾಲಯಗಳಿಗೆ ಭೇಟಿ ನೀಡಿದ್ದಾರೆ. ಸಚಿವ ಸ್ಥಾನದ ಪ್ರಬಲ ಆಕಾಂಕ್ಷಿಯಾಗಿರುವ ಹೆಚ್.ಸಿ. ಬಾಲಕೃಷ್ಣ, ನಂಜನಗೂಡಿನ ಶ್ರೀ ನಂಜುಂಡೇಶ್ವರ ಹಾಗೂ ಮೈಸೂರಿನ ಚಾಮುಂಡೇಶ್ವರಿ ಬೆಟ್ಟಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ್ದಾರೆ.

ನಾನು ಈಗಾಗಲೇ ಐದು ಬಾರಿ ಶಾಸಕನಾಗಿ ಆಯ್ಕೆಯಾಗಿ ಜನಸೇವೆ ಮಾಡಿದ್ದೇನೆ. ನನ್ನ ಹಿರಿತನ ಮತ್ತು ಅನುಭವವನ್ನು ಪರಿಗಣಿಸಿ ಈ ಬಾರಿ ಸಂಪುಟದಲ್ಲಿ ಸಚಿವ ಸ್ಥಾನದ ಅವಕಾಶ ನೀಡಬೇಕು ಎಂದು ಈಗಾಗಲೇ ದೆಹಲಿಗೆ ತೆರಳಿ ಹೈಕಮಾಂಡ್ ನಾಯಕರನ್ನು ಭೇಟಿಯಾಗಿ ಮನವಿ ಸಲ್ಲಿಸಿ ಬಂದಿರುವ ಶಾಸಕ, ಈಗ ಸಿಎಂ ದೆಹಲಿ ಯಾತ್ರೆ ಕೈಗೊಳ್ಳುತ್ತಿದ್ದಂತೆ ಟೆಂಪಲ್ ರನ್ ಶುರುಮಾಡಿದ್ದಾರೆ. ಇದನ್ನೂ ಓದಿ : ಇವತ್ತು ರಾತ್ರಿಯೇ ಸಚಿವ ಸಂಪುಟ ವಿಸ್ತರಣೆ ಫೈನಲ್‌ ಆಗಬಹುದು – ಸಿದ್ದರಾಮಯ್ಯ

Related posts

ಕಾಡುಗೋಡಿ ಮಗು ಕೊಲೆ ಪ್ರಕರಣ; ಮೂವರು ಪೊಲೀಸರ ತಲೆದಂಡ..!

Kalpana Editor

ಅಶ್ಲೀಲ ಟ್ರೋಲ್ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ ಧ್ರುವಂತ್

Kalpana Editor

ಕಾಲೇಜು ವಿದ್ಯಾರ್ಥಿಗಳಲ್ಲಿ ಹೆಚ್‌ಐವಿ ಸೋಂಕು ವದಂತಿ ಸುಳ್ಳು – ಸಚಿವ ಯುಟಿ ಖಾದರ್​ ಸ್ಪಷ್ಟನೆ..!

Kalpana Editor