22.1 C
ಬೆಂಗಳೂರು
September 21, 2026
kranthikidi.com
ತಾಜಾಸುದ್ದಿರಾಜ್ಯ

ತಮಿಳುನಾಡು ರಾಜ್ಯಕ್ಕೆ ಕಾವೇರಿ ನೀರನ್ನು ಬಿಡುಗಡೆ ಮಾಡುವಂತೆ ನೀಡಿರುವ ಆದೇಶವನ್ನು ರಾಜ್ಯ ಸರ್ಕಾರ ತಿರಸ್ಕರಿಸಬೇಕು; ಟಿ.ಎ. ನಾರಾಯಣಗೌಡ ಆಗ್ರಹ..!

ಬೆಂಗಳೂರು : ತಮಿಳುನಾಡು ರಾಜ್ಯಕ್ಕೆ 3,500 ಕ್ಯೂಸೆಕ್ ಕಾವೇರಿ ನೀರನ್ನು ಬಿಡುಗಡೆ ಮಾಡುವಂತೆ CWRC (ಕಾವೇರಿ ಜಲ ನಿಯಂತ್ರಣ ಸಮಿತಿ) ನೀಡಿರುವ ಆದೇಶವನ್ನು ರಾಜ್ಯ ಸರ್ಕಾರ ತಿರಸ್ಕರಿಸಬೇಕು ಎಂದು ಕರ್ನಾಟಕ ರಕ್ಷಣಾ ವೇದಿಕೆ (ಕರವೇ) ರಾಜ್ಯಾಧ್ಯಕ್ಷ ಟಿ.ಎ. ನಾರಾಯಣಗೌಡ ಆಗ್ರಹಿಸಿದರು.

ಬೆಂಗಳೂರು ಫ್ರೀಡಂ ಪಾರ್ಕ್‌ನಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ವತಿಯಿಂದ ಅವರ ನೇತೃತ್ವದಲ್ಲಿ ಆಯೋಜಿಸಿದ್ದ ಪ್ರತಿಭಟನೆಯಲ್ಲಿ ಮಾತನಾಡಿದ ಅವರು, “CWRC ಕರ್ನಾಟಕ ಪಾಲಿಗೆ ಮರಣ ಶಾಸನದಂತ ಆದೇಶ ನೀಡಿದೆ. ರಾಜ್ಯದ ವಾಸ್ತವ ಪರಿಸ್ಥಿತಿಯನ್ನು ಸರ್ಕಾರ ಮತ್ತು ವಕೀಲರು ಸಮಗ್ರವಾಗಿ ಮನವರಿಕೆ ಮಾಡಿಕೊಟ್ಟು CWRC ಮುಂದೆ ಬಲವಾದ ಮನವಿ ಸಲ್ಲಿಸಬೇಕು” ಎಂದು ಒತ್ತಾಯಿಸಿದರು.

ರಾಜ್ಯದ ಮೂರು ಪ್ರಮುಖ ಜಲಾಶಯಗಳಲ್ಲಿ ಕೇವಲ 12 ಟಿಎಂಸಿ ನೀರು ಮಾತ್ರ ಲಭ್ಯವಿದೆ. ಬೆಂಗಳೂರಿನ ಕುಡಿಯುವ ನೀರಿನ ಅಗತ್ಯಕ್ಕೇ ಪ್ರತಿ ತಿಂಗಳು ಸುಮಾರು 3 ಟಿಎಂಸಿ ನೀರು ಬೇಕಾಗುತ್ತದೆ. ಇಂತಹ ಸಂಕಷ್ಟದ ಸಂದರ್ಭದಲ್ಲಿ ಕರ್ನಾಟಕಕ್ಕೆ ಕುಡಿಯಲು ನೀರೇ ಇಲ್ಲದಿರುವಾಗ ತಮಿಳುನಾಡಿನ ಎರಡನೇ ಬೆಳೆಗಾಗಿ ನೀರು ಬಿಡುವುದು ಸಮಂಜಸವಲ್ಲ ಎಂದು ಅವರು ಹೇಳಿದರು.

“ನಾವು ಕುಡಿಯುವ ನೀರಿಗಾಗಿ ಕೇಳುತ್ತಿದ್ದೇವೆ. ಆದರೆ ತಮಿಳುನಾಡು ಎರಡನೇ ಬೆಳೆಗಾಗಿ ನೀರು ಕೇಳುತ್ತಿದೆ. ಇಂತಹ ಪರಿಸ್ಥಿತಿಯಲ್ಲಿ ನೀರು ಬಿಡಲು ಸಾಧ್ಯವಿಲ್ಲ ಎಂಬುದನ್ನು ರಾಜ್ಯ ಸರ್ಕಾರ ಗಟ್ಟಿಯಾಗಿ ತಿಳಿಸಬೇಕು” ಎಂದು ನಾರಾಯಣಗೌಡ ಒತ್ತಾಯಿಸಿದರು.

ಆಗಸ್ಟ್ 3ರಂದು ಕರ್ನಾಟಕ ಮತ್ತು ತಮಿಳುನಾಡು ಮುಖ್ಯಮಂತ್ರಿಗಳ ಸಭೆ ನಡೆಯಲಿದ್ದು, ಆ ಸಭೆಯಲ್ಲಿ ಮಾನವೀಯತೆ ಮತ್ತು ಪರಸ್ಪರ ಸಹಕಾರದ ಮನೋಭಾವದಿಂದ ಉತ್ತಮ ತೀರ್ಮಾನ ಕೈಗೊಳ್ಳಬೇಕು ಎಂದು ಅವರು ಆಶಿಸಿದರು. ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹಾಗೂ ಸಂಬಂಧಪಟ್ಟ ನಾಯಕರಿಗೆ ಮನವಿ ಮಾಡಿಕೊಂಡ ಅವರು, ರಾಜ್ಯದ ಹಿತಾಸಕ್ತಿಯನ್ನು ಕಾಪಾಡುವ ದೃಢ ನಿಲುವು ತಾಳಬೇಕು ಎಂದರು.

ಈ ವೇಳೆ 1991ರ ಕಾವೇರಿ ವಿವಾದದ ಸಂದರ್ಭವನ್ನು ಉಲ್ಲೇಖಿಸಿದ ನಾರಾಯಣಗೌಡ, ಅಂದಿನ ಮುಖ್ಯಮಂತ್ರಿ ಎಸ್. ಬಂಗಾರಪ್ಪ ಅವರು ರಾಜ್ಯದ ಹಿತದೃಷ್ಟಿಯಿಂದ ತೆಗೆದುಕೊಂಡ ನಿಲುವನ್ನು ಸ್ಮರಿಸಿದರು. “ಬಂಗಾರಪ್ಪ ಅವರ ಶಿಷ್ಯ ಎಂದು ಹೇಳುವುದಷ್ಟೇ ಸಾಲದು. ಅವರು ರಾಜ್ಯದ ಹಿತಕ್ಕಾಗಿ ತೋರಿದ ಧೈರ್ಯವನ್ನು ಇಂದಿನ ನಾಯಕತ್ವವೂ ಪ್ರದರ್ಶಿಸಬೇಕು” ಎಂದು ಹೇಳಿದರು.

ಕರ್ನಾಟಕ ರಕ್ಷಣಾ ವೇದಿಕೆ ವತಿಯಿಂದ ನಡೆದ ಈ ಪ್ರತಿಭಟನೆಯಲ್ಲಿ ಸುಮಾರು 500ಕ್ಕೂ ಹೆಚ್ಚು ಕಾರ್ಯಕರ್ತರು ಮತ್ತು ಸಾರ್ವಜನಿಕರು ಭಾಗವಹಿಸಿ, CWRC ಆದೇಶವನ್ನು ಹಿಂಪಡೆಯುವಂತೆ ಹಾಗೂ ಕರ್ನಾಟಕದ ಕುಡಿಯುವ ನೀರಿನ ಹಕ್ಕನ್ನು ರಕ್ಷಿಸುವಂತೆ ರಾಜ್ಯ ಸರ್ಕಾರಕ್ಕೆ ಒತ್ತಾಯಿಸಿದರು. ಇದನ್ನೂ ಓದಿ : ಪ್ಲಾಟ್ ಖರೀದಿಸಿ, VIP ದರ್ಶನ ಪಡೆಯಿರಿ ಜಾಹೀರಾತು ವಿವಾದ; ಟಿಟಿಡಿ ಸ್ಪಷ್ಟನೆ..!

Related posts

ನಾವು ದಾರಿ ತಪ್ಪಿದಾಗ ತಿದ್ದಿ ಸರಿದಾರಿಗೆ ತರುತ್ತಿದ್ದರು; ತಾಯಿ ನೆನೆದು ಕಣ್ಣೀರಿಟ್ಟ ಹೆಚ್‌ಡಿಕೆ..!

Kalpana Editor

ಮತ್ತೆ ಬಾಂಬ್‌ ಬೆದರಿಕೆ – ಧಾರವಾಡ ಹೈಕೋರ್ಟ್‌ ಪೀಠಕ್ಕೆ ಭಾರೀ ಭದ್ರತೆ..!

Kalpana Editor

ಮತ್ತಷ್ಟು ಯಶಸ್ಸು ನಿಮ್ಮದಾಗಲಿ; ಡಿಕೆ ಶಿವಕುಮಾರ್‌ಗೆ ಸೋನಿಯಾ ಗಾಂಧಿ ಶುಭ ಹಾರೈಕೆ..!

Kalpana Editor