21.6 C
ಬೆಂಗಳೂರು
September 22, 2026
kranthikidi.com
ತಾಜಾಸುದ್ದಿರಾಜ್ಯ

ನಾರಾಯಣಪುರ ಡ್ಯಾಂನಿಂದ ನೀರು ಬಿಡುಗಡೆ – ಮೈದುಂಬಿ ಹರಿಯುತ್ತಿರುವ ಕೃಷ್ಣ..

ರಾಯಚೂರು : ಕೃಷ್ಣಾ ನದಿ ಮೇಲ್ಭಾಗದಲ್ಲಿ ಉತ್ತಮ ಮಳೆಯಾದ ಹಿನ್ನೆಲೆ ಜಲಾಶಯಗಳು ಭರ್ತಿಯಾಗುವ ಹಂತಕ್ಕೆ ತಲುಪಿದ್ದು, ನಾರಾಯಣಪುರ ಡ್ಯಾನಿಂದ ಕೃಷ್ಣಾ ನದಿಗೆ ಭಾರೀ ಪ್ರಮಾಣದ ನೀರು ಬಿಡುಗಡೆ ಮಾಡಲಾಗಿದ್ದು, ಕೃಷ್ಣೆ ಮೈದುಂಬಿ ಹರಿಯುತ್ತಿದ್ದಾಳೆ.

ರಾಯಚೂರು ಜಿಲ್ಲೆಯಲ್ಲಿ ಕೃಷ್ಣಾ ನದಿ ಮೈದುಂಬಿ ಹರಿಯುತ್ತಿದೆ. ನದಿ ಪಾತ್ರದ ಗ್ರಾಮಗಳಲ್ಲಿ ಹೈ ಅಲರ್ಟ್ ಘೋಷಣೆ ಮಾಡಿದ್ದು, ನದಿ ಪಾತ್ರಕ್ಕೆ ಯಾರೂ ತೆರಳದಂತೆ ಎಚ್ಚರಿಸಲಾಗಿದೆ. ಜಲಾಶಯದ 24 ಕ್ರಸ್ಟ್ ಗೇಟ್‌ಗಳಿಂದ 1,11,000 ಕ್ಯೂಸೆಕ್ ನೀರು ಬಿಡುಗಡೆ ಮಾಡಲಾಗುತ್ತಿದ್ದು, ಲಿಂಗಸುಗೂರು, ದೇವದುರ್ಗ ಹಾಗೂ ರಾಯಚೂರು ತಾಲೂಕಿನ ನದಿ ದಂಡೆಯ ಗ್ರಾಮಗಳಿಗೆ ಮುನ್ನೆಚ್ಚರಿಕೆ ನೀಡಲಾಗಿದೆ.

ಲಿಂಗಸುಗೂರು ತಾಲೂಕಿನ ಶೀಲಹಳ್ಳಿ ಸೇತುವೆ ಮುಳುಗಡೆಗೆ ಕೆಲವೇ ಅಡಿಗಳು ಬಾಕಿಯಿದೆ. ಆಲಮಟ್ಟಿ ಜಲಾಶಯದಿಂದ ಅಪಾರ ಪ್ರಮಾಣದ ನೀರು ಹರಿದು ಬರುತ್ತಿರುವುದರಿಂದ ನಾರಾಯಣಪುರ ಜಲಾಶಯಕ್ಕೆ ಒಳಹರಿವು ಹೆಚ್ಚುತ್ತಿದೆ. ಅಧಿಕಾರಿಗಳು ನೀರಿನ ಹೊರಹರಿವು ಪ್ರಮಾಣ ಹಂತ ಹಂತವಾಗಿ ಹೆಚ್ಚಳವಾಗುವ ಮುನ್ಸೂಚನೆ ನೀಡಿದ್ದಾರೆ. ಇದನ್ನೂ ಓದಿ : ʻರಾಮಮಂದಿರ ದೇಣಿಗೆ ಕಳವುʼ ಚರ್ಚೆಗೆ ಒತ್ತಾಯ – ಲೋಕಸಭೆಯಲ್ಲೂ ಗದ್ದಲ, ಕಲಾಪ ಮುಂದೂಡಿಕೆ..!

Related posts

ಶಾಲೆಗೆ ತೆರಳುವಾಗ ಕಾರು ಡಿಕ್ಕಿ – ಬಾಲಕಿ ಸ್ಥಳದಲ್ಲೇ ಸಾವು..!

Kalpana Editor

ತೇಜಸ್ವಿ ಸೂರ್ಯ ದೂರಿನ ಬೆನ್ನಲ್ಲೇ BMRCLಗೆ ಕೇಂದ್ರದಿಂದ ತನಿಖೆಗೆ ಆದೇಶ..!

Kalpana Editor

ವಚನಾನಂದ ಶ್ರೀಗೆ ನಿರೀಕ್ಷಣಾ ಜಾಮೀನು ಕೊಟ್ಟ ರೀತಿ ಆಘಾತಕಾರಿ ಎಂದ ಹೈಕೋರ್ಟ್

Kalpana Editor