29 C
ಬೆಂಗಳೂರು
September 20, 2026
kranthikidi.com
ತಾಜಾಸುದ್ದಿರಾಜಕೀಯರಾಜ್ಯ

ನೂತನ ಸಚಿವರ ಪ್ರಮಾಣ ವಚನಕ್ಕೆ ಸಜ್ಜಾದ ಲೋಕಭವನ..!

ಬೆಂಗಳೂರು : ರಾಜ್ಯ ಸಂಪುಟದ ನೂತನ ಸಚಿವರ ಪ್ರಮಾಣ ವಚನ ಸ್ವೀಕಾರ ಕಾರ್ಯಕ್ರಮಕ್ಕೆ ಬೆಂಗಳೂರಿನ ಲೋಕಭವನದ ಗ್ಲಾಸ್ ಹೌಸ್ ಸಜ್ಜಾಗಿದೆ. ಇಡೀ ಗ್ಲಾಸ್ ಹೌಸ್ ಕನ್ನಡದ ಬಾವುಟಗಳಿಂದ ಅಲಂಕರಿಸಲಾಗಿದೆ. ಸಿಎಂ ಡಿಕೆ ಶಿವಕುಮಾರ್ ಸಂಪುಟಕ್ಕೆ ಸೇರ್ಪಡೆಯಾಗಲಿರುವ 20 ನೂತನ ಸಚಿವರು ಸಂಜೆ 5 ಗಂಟೆಗೆ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.

ಈ ಹಿನ್ನೆಲೆಯಲ್ಲಿ ಮುಖ್ಯ ವೇದಿಕೆಯ ಮೇಲೆ ರಾಜ್ಯಪಾಲರು, ಮುಖ್ಯಮಂತ್ರಿಗಳು ಹಾಗೂ ಉಪಮುಖ್ಯಮಂತ್ರಿಗಳಿಗೆ ಆಸನಗಳ ವ್ಯವಸ್ಥೆ ಮಾಡಲಾಗಿದೆ. ವೇದಿಕೆಯ ಮುಂಭಾಗದಲ್ಲಿ ನಿಯೋಜಿತ ಸಚಿವರು ಕುಳಿತುಕೊಳ್ಳಲು 20 ಪ್ರತ್ಯೇಕ ಆಸನಗಳನ್ನು ಕಾಯ್ದಿರಿಸಲಾಗಿದ್ದು, ಐದೈದು ಜನರ ತಂಡವಾಗಿ ಅಥವಾ ಒಬ್ಬೊಬ್ಬರಾಗಿ ವೇದಿಕೆಗೆ ತೆರಳಿ ಪ್ರಮಾಣ ವಚನ ಸ್ವೀಕರಿಸಲು ಅನುಕೂಲವಾಗುವಂತೆ ವಿಶೇಷ ಮಾರ್ಗವನ್ನು ನಿರ್ಮಿಸಲಾಗಿದೆ.

ರಾಜ್ಯದ ನೂತನ ಮಂತ್ರಿಗಳ ಪ್ರಮಾಣವಚನ ಕಾರ್ಯಕ್ರಮಗಳ ನಡೆಯುತ್ತಿದೆ. 20 ಸಚಿವರ ಪ್ರಮಾಣವಚನ ನಡೆಯುತ್ತಿದೆ. ಕಾಂಗ್ರೆಸ್​​​ನ ಹಿರಿಯ ನಾಯಕರು, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಸಿಎಂ ಡಿಕೆ ಶಿವಕುಮಾರ್​, ಕಾಂಗ್ರೆಸ್​​ ಕೆಪಿಸಿಸಿ ಅಧ್ಯಕ್ಷರು ಕೂಡ ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾರೆ. ರಾಜ್ಯ ಭನವದಲ್ಲಿ ಈ ಕಾರ್ಯಕ್ರಮ ನಡೆಯುತ್ತಿದೆ. ಇದನ್ನೂ ಓದಿ : ಲಕ್ಷ್ಮಣ್‌ ಸವದಿಗೆ ಸಚಿವ ಸ್ಥಾನ; ಕಟೀಲು ದೇವಿಗೆ ಪೂಜೆ ಸಲ್ಲಿಸಿದ ಸವದಿ ಪುತ್ರ

Related posts

ಕರ್ನಾಟಕ ಬಂದ್ ಖಚಿತ; ಅತ್ತಿಬೆಲೆ ಗಡಿ ಬಂದ್ – ವಾಟಾಳ್ ನಾಗರಾಜ್

kknewskannada1987@gmail.com

ಗೆಳತಿ ಸಾವಿನ ನೋವಲ್ಲಿ ಸಲ್ಮಾನ್ ಖಾನ್; ಅಂತಿಮ ನಮನ ಸಲ್ಲಿಸಿದ ನಟ

Kalpana Editor

ಕೋರ್ಟ್‌ ಕಲಾಪಗಳ ವೀಡಿಯೋ ರೆಕಾರ್ಡ್ ಮಾಡುವುದು, ಹಂಚಿಕೊಳ್ಳುವುದು; ಸುಪ್ರೀಂ ಕೋರ್ಟ್ ನಿಷೇಧ..!

Kalpana Editor