August 25, 2026
kranthikidi.com
ತಾಜಾಸುದ್ದಿದೇಶ

ಇನ್ಮುಂದೆ ತಿರುಪತಿಯಲ್ಲಿ ಭಕ್ತರಿಗೆ ನಿಂತಲ್ಲೇ ಬರುತ್ತೆ ಪ್ರಸಾದ..!

ಹೈದರಾಬಾದ್ : ತಿರುಮಲದಲ್ಲಿ ದರ್ಶನಕ್ಕಾಗಿ ಸರದಿ ಸಾಲಲ್ಲಿ ಕಾಯುವ ಭಕ್ತರಿಗೆ ಪ್ರಸಾದ ವಿತರಣೆಯನ್ನು ಸುಲಭಗೊಳಿಸಲು ಟಿಟಿಡಿ ಹೊಸ ವ್ಯವಸ್ಥೆಯೊಂದನ್ನು ಪರಿಚಯಿಸಿದೆ. ಪ್ರಸಾದ ಕೌಂಟರ್‌ನಲ್ಲಿ ಜನಸಂದಣಿಯನ್ನು ಕಡಿಮೆ ಮಾಡಲು ಮತ್ತು ಭಕ್ತರಿಗೆ ಪ್ರಸಾದವನ್ನು ತ್ವರಿತವಾಗಿ ತಲುಪಿಸಲು ತಿರುಮಲ ತಿರುಪತಿ ದೇವಸ್ಥಾನ ಸಮಿತಿ `ಮೂವಿಂಗ್-ಟೇಬಲ್’ ವ್ಯವಸ್ಥೆಯನ್ನು ಜಾರಿಗೆ ತಂದಿದೆ.

ಸುಮಾರು 10 ಲಕ್ಷ ರೂ. ವೆಚ್ಚದಲ್ಲಿ ಈ ಮೂವಿಂಗ್ ಟೇಬಲ್‌ನ್ನು ವಿನ್ಯಾಸಗೊಳಿಸಿ ಅಳವಡಿಸಲಾಗಿದೆ. ಇದರಲ್ಲಿ 7 ಮೀಟರ್ ಉದ್ದದ ಮೇಜು ಕನ್ವೇಯರ್ ಬೆಲ್ಟ್ನಂತೆ ನಿರಂತರವಾಗಿ ಚಲಿಸುತ್ತದೆ. ಸಿಬ್ಬಂದಿ ಪ್ರಸಾದದ ತಟ್ಟೆಗಳನ್ನು ಇದರ ಮೇಲೆ ಇರಿಸಿದ ನಂತರ, ಸರತಿ ಸಾಲಿನಲ್ಲಿ ನಿಂತಿರುವ ಭಕ್ತರು ಸುಲಭವಾಗಿ ತಾವು ನಿಂತಲ್ಲೇ ಪ್ರಸಾದ ಪಡೆಯಬಹುದು.

ಈ ಮೊದಲು ಇದರ ಪ್ರಯೋಗ ನಡೆಸಲಾಗಿದ್ದು, ಇದರ ಯಶಸ್ಸಿನ ನಂತರ ಟಿಟಿಡಿಯು ಈ ಮೂವಿಂಗ್-ಟೇಬಲ್ ವ್ಯವಸ್ಥೆಯನ್ನು ವೈಕುಂಠಂ ಕ್ಯೂ ಕಾಂಪ್ಲೆಕ್ಸ್-1/2, ನಾರಾಯಣಗಿರಿ ಶೆಡ್ ಹಾಗೂ ಮುಖ್ಯ ಸರತಿ ಸಾಲುಗಳಿಗೆ ವಿಸ್ತರಿಸಲು ನಿರ್ಧರಿಸಿದೆ. ಈವರೆಗೆ ದರ್ಶನ ಸಾಲಿನಲ್ಲಿ ಕಾದವರು ಕೌಂಟರ್‌ಗೆ ಹೋಗಿ ಪ್ರಸಾದ ಪಡೆಯಬೇಕಿತ್ತು. ಆದರೆ ಇನ್ನು ಮುಂದೆ ಮೂವಿಂಗ್ ಟೇಬಲ್ ಕಾರಣ ಭಕ್ತರಿಗೆ ನಿಂತಲ್ಲೇ ಪ್ರಸಾದ ಬರಲಿದೆ. ಇದನ್ನೂ ಓದಿ : ರಷ್ಯಾದ ತೈಲ ಖರೀದಿಸುವ ದೇಶಗಳಿಗೆ ದಂಡ ವಿಧಿಸುವ ಮಸೂದೆ; ಯುಎಸ್‌ ಸೆನೆಟ್ ಅಂಗೀಕಾರ..!

Related posts

ಬಾಂಗ್ಲಾದೇಶೀಯರಿಗೆ ದಾಖಲೆ ನೀಡುತ್ತಿರುವ ಆರೋಪ, ಕಾಲ್ತುಳಿತ ಪ್ರಕರಣಕ್ಕೆ ಸಿಬಿಐ ತನಿಖೆ ಆಗ್ರಹ; ಆರ್‌.ಅಶೋಕ್

Kalpana Editor

ಸುಪ್ರೀಂ ಮೆಟ್ಟಿಲೇರಿದ್ದ ಸಿಎಂ ಒಮರ್‌ ಅಬ್ದುಲ್ಲಾಗೆ ಪತ್ನಿಯಿಂದ ಸಿಕ್ತು ವಿಚ್ಛೇದನ..!

Kalpana Editor

ಸಾರಿಗೆ ನೌಕರರಿಗೆ ಸಿಹಿ ಸುದ್ದಿ – ವೇತನ ಹೆಚ್ಚಳ ಮಾಡಿದ ರಾಜ್ಯ ಸರ್ಕಾರ..!

Kalpana Editor