August 25, 2026
kranthikidi.com
ತಾಜಾಸುದ್ದಿರಾಜ್ಯ

ಹೋಟೆಲ್‌ಗಳ ಮೇಲೆ ಮುಂದುವರೆದ ಫುಡ್ ಸೇಫ್ಟಿ ರೇಡ್; ರೆಸ್ಟೋರೆಂಟ್‌ಗಳಿಗೆ ನೋಟಿಸ್..!

ಬೆಂಗಳೂರು : ನಗರದಲ್ಲಿ ಹೋಟೆಲ್‌ಗಳು ಹಾಗೂ ಜಂಕ್ ಫುಡ್‌ಗಳ ಗುಣಮಟ್ಟದ ಬಗ್ಗೆ ಆಹಾರ ಸುರಕ್ಷತಾ ಇಲಾಖೆ ಅಧಿಕಾರಿಗಳು ನಡೆಸುತ್ತಿರುವ ದಾಳಿ ಇಂದು ಕೂಡ ಮುಂದುವರಿದಿದೆ. ಬ್ರಿಗೇಡ್ ರೋಡ್ ಸೇರಿದಂತೆ ನಗರದ ಹಲವು ಕಡೆ ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ. ಇಂದು ಕೂಡ ಪ್ರಸಿದ್ಧ ಹೋಟೆಲ್‌ ಮತ್ತು ರೆಸ್ಟೋರೆಂಟ್‌ ಸೇರಿದಂತೆ ಹಲವು ಕಡೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ.

ಹೋಟೆಲ್‌ಗಳಲ್ಲಿ ಸಿದ್ಧಪಡಿಸಲಾಗುತ್ತಿದ್ದ ಆಹಾರ ಪದಾರ್ಥಗಳ ಗುಣಮಟ್ಟವನ್ನು ಪರಿಶೀಲಿಸಲಾಗಿದೆ. ಅನುಮಾನ ಬಂದ ಆಹಾರ ಪದಾರ್ಥಗಳ ಸ್ಯಾಂಪಲ್‌ಗಳನ್ನು ಅಧಿಕಾರಿಗಳು ಸಂಗ್ರಹಿಸಿದ್ದು, ಅವುಗಳನ್ನು ಲ್ಯಾಬ್‌ಗೆ ಕಳುಹಿಸಲು ಸಿದ್ಧತೆ ನಡೆಸಿದ್ದಾರೆ. ಇಂದು ಬ್ರಿಗೇಡ್ ರೋಡ್‌ನಲ್ಲಿರುವ ಫೇಮಸ್‌ ಹೋಟೆಲ್‌ಗಳು ಮತ್ತು ಫಾಸ್ಟ್‌ಫುಟ್‌ ಸೆಂಟರ್‌ಗಳಲ್ಲೂ ಪರಿಶೀಲನೆ ನಡೆಸಲಾಗಿದೆ. ಐವರು ಅಧಿಕಾರಿಗಳ ತಂಡ ಸ್ಥಳಕ್ಕೆ ತೆರಳಿ ಆಹಾರ ಮತ್ತು ಮಾಂಸದ ಗುಣಮಟ್ಟವನ್ನು ಪರಿಶೀಲಿಸಿದೆ.

ಆಹಾರ ಸುರಕ್ಷತಾ ಇಲಾಖೆ ಆಯುಕ್ತ ಶ್ರೀನಿವಾಸ್ ಮಾತನಾಡಿ, ನಿನ್ನೆಯಿಂದಲೇ ನಗರದ ಹೋಟೆಲ್‌ಗಳ ಮೇಲೆ ದಾಳಿ ನಡೆಸಲಾಗುತ್ತಿದೆ ಎಂದು ತಿಳಿಸಿದ್ದಾರೆ. ಹಲವು ಹೋಟೆಲ್‌ಗಳು ಆಹಾರ ಸುರಕ್ಷತಾ ನಿಯಮಗಳನ್ನು ಉಲ್ಲಂಘಿಸಿರುವುದು ಪರಿಶೀಲನೆ ವೇಳೆ ಕಂಡುಬಂದಿದೆ. ಕೆಲವು ಕಡೆ ಲೇಬಲಿಂಗ್ ಹಾಗೂ ಪ್ಯಾಕೇಜಿಂಗ್ ನಿಯಮಗಳನ್ನು ಪಾಲಿಸದಿರುವುದು ಪತ್ತೆಯಾಗಿದೆ. ಹೀಗಾಗಿ ಸಂಬಂಧಪಟ್ಟ ಹೋಟೆಲ್‌ಗಳಿಗೆ ನೋಟಿಸ್ ನೀಡಲಾಗಿದೆ. ಇಂದು ನಗರದ ಸುಮಾರು 30 ಕಡೆ ದಾಳಿ ನಡೆಸುವ ಗುರಿ ಇತ್ತು. ಈಗಾಗಲೇ 26 ಕಡೆ ಪರಿಶೀಲನೆ ನಡೆದಿದ್ದು, 11 ಕಡೆ ನೋಟಿಸ್ ನೀಡಲಾಗಿದೆ. ಅಧಿಕಾರಿಗಳು ಹಲವು ಆಹಾರ ಪದಾರ್ಥಗಳ ಸ್ಯಾಂಪಲ್‌ಗಳನ್ನು ಸಂಗ್ರಹಿಸಿದ್ದಾರೆ.

ಆಹಾರ ಸುರಕ್ಷತಾ ನಿಯಮಗಳನ್ನು ಗಂಭೀರವಾಗಿ ಉಲ್ಲಂಘಿಸಿರುವುದು ಸಾಬೀತಾದರೆ ಪ್ರಾಸಿಕ್ಯೂಷನ್‌ಗೆ ಅವಕಾಶವಿದೆ. ಅಗತ್ಯವಿದ್ದರೆ ಹೋಟೆಲ್‌ನ ಲೈಸೆನ್ಸ್ ರದ್ದು ಮಾಡುವ ಕ್ರಮವೂ ಕೈಗೊಳ್ಳಬಹುದು ಎಂದು ಆಯುಕ್ತ ಶ್ರೀನಿವಾಸ್ ಹೇಳಿದ್ದಾರೆ. ನಗರದಲ್ಲಿ ನಡೆಯುತ್ತಿರುವ ಈ ಕಾರ್ಯಾಚರಣೆಯನ್ನು ಮುಂದಿನ ದಿನಗಳಲ್ಲಿ ರಾಜ್ಯದ ವಿವಿಧ ಜಿಲ್ಲೆಗಳಿಗೂ ವಿಸ್ತರಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.

ನಗರದಲ್ಲಿ ಜಂಕ್ ಫುಡ್ ಸೇವನೆಯಿಂದ ಹಲವು ಆರೋಗ್ಯ ಸಮಸ್ಯೆಗಳು ಎದುರಾಗುತ್ತಿರುವ ಹಿನ್ನೆಲೆಯಲ್ಲಿ ಆಹಾರ ಇಲಾಖೆ ಈ ವಿಚಾರದಲ್ಲೂ ಎಚ್ಚರಿಕೆ ವಹಿಸಿದೆ. ಬ್ರೆಡ್, ಸಾಸ್ ಸೇರಿದಂತೆ ವಿವಿಧ ಆಹಾರ ಪದಾರ್ಥಗಳ ಸ್ಯಾಂಪಲ್‌ಗಳನ್ನು ಸಂಗ್ರಹಿಸಿ ಗುಣಮಟ್ಟ ಪರೀಕ್ಷೆಗೆ ಕಳುಹಿಸಲಾಗುತ್ತಿದೆ. ಲ್ಯಾಬ್ ವರದಿ ಬಂದ ಬಳಿಕ ನಿಯಮ ಉಲ್ಲಂಘಿಸಿರುವುದು ಕಂಡುಬಂದರೆ ಮುಂದಿನ ಕ್ರಮ ಕೈಗೊಳ್ಳಲಾಗುತ್ತದೆ. ಇದನ್ನೂ ಓದಿ : ಅಧಿಕಾರ ಕೊಟ್ಟವರು ಮುಖ್ಯಮಂತ್ರಿಗಳು, ಅವ್ರು ಹೇಳಿದ ಹಾಗೆ ಕೇಳ್ತೀನಿ; ಬಾಲಕೃಷ್ಣ

Related posts

ಅಂಬುಲೆನ್ಸ್‌ಗೆ ದಾರಿ ಬಿಡದೆ ವೀಲಿಂಗ್ – 6 ಅಪ್ರಾಪ್ತರು ಪೊಲೀಸರ ವಶಕ್ಕೆ..!

Kalpana Editor

KPCC ಪಟ್ಟದ ಮೇಲೆ ಕಣ್ಣಿಟ್ಟ ಸತೀಶ್ ಜಾರಕಿಹೊಳಿ; ಸಿಎಂ, ಡಿಸಿಎಂ ಬೆನ್ನಲ್ಲೇ ದೆಹಲಿಗೆ ದೌಡು..!

Kalpana Editor

ಲೋಕಸಭೆಯಲ್ಲಿ ಮತ್ತೆ ʻನೀಟ್‌ʼ ಗದ್ದಲ – ಕಲಾಪ ಮುಂದೂಡಿಕೆ..!

Kalpana Editor