22.4 C
ಬೆಂಗಳೂರು
October 6, 2026
kranthikidi.com
ತಾಜಾಸುದ್ದಿರಾಜ್ಯ

ಶಿವಗಂಗೆ ಬೆಟ್ಟದಲ್ಲಿ ಟ್ರೆಕ್ಕಿಂಗ್‌ಗೆ ಹೋಗಿದ್ದ, ಟೆಕ್ಕಿ ನಾಪತ್ತೆ..!

ನೆಲಮಂಗಲ : ತಾಲೂಕಿನ ದಕ್ಷಿಣ ಕಾಶಿ ಶಿವಗಂಗೆ ಬೆಟ್ಟದಲ್ಲಿ ಟ್ರೆಕ್ಕಿಂಗ್‌ಗೆ ಹೋಗಿದ್ದ 31 ವರ್ಷದ ಯುವಕ ನಾಪತ್ತೆಯಾಗಿದ್ದು, ಹಲವು ಅನುಮಾನಗಳು ಮೂಡಿವೆ. ಪ್ರತೀಕ್ ಉಪಧ್ಯಾಯ ನಾಪತ್ತೆಯಾದ ಯುವಕ. ನಿನ್ನೆ ಬೆಳಗ್ಗೆ ಬೆಟ್ಟದಲ್ಲಿ ಟ್ರೆಕ್ಕಿಂಗ್‌ಗೆ ಬಂದಿದ್ದ. ಬೆಟ್ಟದ ಪಾರ್ಕಿಂಗ್‌ನಲ್ಲಿ ಬುಲೆಟ್ ಬೈಕ್ ಪಾರ್ಕಿಂಗ್ ಮಾಡಿ ಬೆಟ್ಟ ಏರಿದ್ದವ ಈಗ ನಾಪತ್ತೆಯಾಗಿದ್ದಾನೆ.

ಐದು ದಿನಗಳ ಹಿಂದೆ ವೈಟ್‌ಫೀಲ್ಡ್‌ನಲ್ಲಿ ಬುಲೆಟ್ ಬೈಕನ್ನು ಬಾಡಿಗೆಗೆ ಪಡೆದಿದ್ದ. ಯುವಕ ನಾಪತ್ತೆ ಹಿನ್ನೆಲೆಯಲ್ಲಿ ಸಾಕಷ್ಟು ಅನುಮಾನಗಳು ಮೂಡಿವೆ. ನಿನ್ನೆ ಬೆಳಗ್ಗೆ ಬೆಟ್ಟ ಹತ್ತುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಮತ್ತೆ ವಾಪಸ್ ಆಗಿದ್ದಾನಾ, ಇಲ್ವ ಎಂಬ ಅನುಮಾನ ವ್ಯಕ್ತವಾಗಿದೆ.

ಯುವಕನ ಫೋನ್ ಬೇರೆ ಕಡೆ ಸ್ವಿಚ್ ಆಫ್‌ ಆಗಿದೆ. ಶಿವಗಂಗೆ ಬೆಟ್ಟದ ಶಾಂತಲಾ ಡ್ರಾಪ್‌ನಲ್ಲಿ ಪೊಲೀಸರು ಶೋಧ ಕಾರ್ಯ ನಡೆಸುತ್ತಿದ್ದಾರೆ. ಡ್ರೋನ್ ಕ್ಯಾಮೆರಾ ಬಿಟ್ಟು ಪರಿಶೀಲನೆ ನಡೆಸಲಾಗುತ್ತಿದೆ.

ಶಿವಗಂಗೆ ಬೆಟ್ಟ ಸಮುದ್ರದ ಮಟ್ಟದಿಂದ 4,800 ಅಡಿ ಎತ್ತರದಲ್ಲಿದೆ. ಅಪಾಯಕಾರಿ ರೀತಿಯಲ್ಲಿ ಶಾಂತಲಾ ಡ್ರಾಪ್ ಇದೆ. ಮರಗಿಡಗಳು ಕಲ್ಲು ಬಂಡೆಗಳಿಂದ ಕೂಡಿದೆ. ವೈಟ್‌ಫೀಲ್ಡ್ ಪೊಲೀಸ್ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ : ಲೇಡಿ ಸೂಪರ್ವೈಸರ್ ಕಿರುಕುಳಕ್ಕೆ ಬೇಸತ್ತ ಮಹಿಳೆ ಆತ್ಮಹತ್ಯೆ..!

Related posts

ಉತ್ತರ ಕನ್ನಡ ಜಿಲ್ಲಾ ನ್ಯಾಯಾಲಯದಲ್ಲಿ ನೇಮಕಾತಿ; ಅರ್ಜಿಗಳನ್ನು ಆಹ್ವಾನ..!

kknewskannada1987@gmail.com

ಬದರಿನಾಥ್ ದೇಣಿಗೆ ಕಳವು – ಪ್ರಮುಖ ಆರೋಪಿ ಡೆಹ್ರಾಡೂನ್‌ನಲ್ಲಿ ಬಂಧನ..!

Kalpana Editor

ಅಯೋಧ್ಯೆ, ಬದರಿನಾಥ ಬಳಿಕ ಬಾಗಲಾಮುಖಿ ದೇವಾಲಯದಲ್ಲೂ ಕಾಣಿಕೆ ದುರ್ಬಳಕೆ ಆರೋಪ..!

Kalpana Editor