23.5 C
ಬೆಂಗಳೂರು
October 12, 2026
kranthikidi.com
ತಾಜಾಸುದ್ದಿರಾಜ್ಯಸಿನಿಮಾ

ರೇಣುಕಾಸ್ವಾಮಿ ಕೊಲೆ ಪ್ರಕರಣ; ದರ್ಶನ್‌ಗೆ ಮಾಫಿ ಸಾಕ್ಷಿ ಕಂಟಕ – ಹೈಕೋರ್ಟ್ ಮೆಟ್ಟಿಲೇರಲು ಪ್ಲಾನ್..!

ಬೆಂಗಳೂರು : ರೇಣುಕಾಸ್ವಾಮಿ ಕೊಲೆ ಪ್ರಕರಣದ ಪ್ರಮುಖ ಆರೋಪಿ ನಟ ದರ್ಶನ್ ಹಾಗೂ ಪವಿತ್ರ ಗೌಡಗೆ ಈಗ ತಮ್ಮದೇ ಸಹಚರ, ಆರೋಪಿ ಪ್ರದೋಷ್ ಮಾಫಿ ಸಾಕ್ಷಿ ಆಗುತ್ತಿರುವುದು ದೊಡ್ಡ ಕಂಟಕವಾಗಿ ಪರಿಣಮಿಸಿದೆ. ಪ್ರದೋಷ್ ನೀಡಲಿರುವ ಹೇಳಿಕೆಗೆ ಶತಾಯಗತಾಯ ತಡೆ ನೀಡಲು ದರ್ಶನ್ ಪರ ವಕೀಲರು ಕಾನೂನು ಸಮರಕ್ಕೆ ಸಜ್ಜಾಗಿದ್ದಾರೆ.

ಪ್ರದೋಷ್ ಮ್ಯಾಜಿಸ್ಟ್ರೇಟ್ ಮುಂದೆ ಹೇಳಿಕೆ ನೀಡಿದರೆ, ಅದು ದರ್ಶನ್ ಹಾಗೂ ಪವಿತ್ರ ಗೌಡಗೆ ಕಾನೂನಾತ್ಮಕವಾಗಿ ಚಕ್ರವ್ಯೂಹವಾಗಲಿದೆ. ಹೀಗಾಗಿ ಪ್ರದೋಷ್ ಹೇಳಿಕೆ ದಾಖಲಿಸುವುದನ್ನು ತಡೆಹಿಡಿಯಲು ಅಥವಾ ಅದನ್ನು ಸಾಧ್ಯವಾದಷ್ಟು ತಡಮಾಡಲು ದರ್ಶನ್ ತಂಡ ಪ್ಲಾನ್ ಮಾಡಿದೆ.

ಸೆಷನ್ಸ್ ಕೋರ್ಟ್ ನೀಡಿರುವ ಆದೇಶವನ್ನು ಪ್ರಶ್ನಿಸಿ ಶೀಘ್ರದಲ್ಲೇ ಹೈಕೋರ್ಟ್ ಮೊರೆ ಹೋಗಲು ದರ್ಶನ್ ಕಾನೂನು ತಂಡ ಸಿದ್ಧತೆ ನಡೆಸುತ್ತಿದೆ ಎಂಬ ವಿಚಾರ ಈಗ ತಿಳಿದು ಬಂದಿದೆ. ಸ್ಫೋಟಕ ವಿವರಗಳನ್ನು ಪ್ರದೋಷ್ ಕೋರ್ಟ್ ಮುಂದೆ ಬಿಚ್ಚಿಟ್ಟರೆ ದರ್ಶನ್ ಮತ್ತು ಪವಿತ್ರ ಗೌಡಗೆ ಜಾಮೀನು ಸಿಗುವುದು ಮತ್ತಷ್ಟು ಕಷ್ಟವಾಗಲಿದೆ. ಪ್ರದೋಷ್ ಹೇಳಿಕೆ ದಾಖಲಾದರೆ ಪ್ರಕರಣ ತನಿಖಾಧಿಕಾರಿಗಳ ಪರ ವಾಲಲಿದೆ. ಇದನ್ನೂ ಓದಿ : ಕೊಲಂಬಿಯಾದಲ್ಲಿ ತೀವ್ರತೆಯ ಪ್ರಬಲ ಭೂಕಂಪ; ಸಾವಿನ ಸಂಖ್ಯೆ 132ಕ್ಕೆ ಏರಿಕೆ..!

Related posts

ಅಯೋಧ್ಯೆ, ಬದರಿನಾಥ ಬಳಿಕ ಬಾಗಲಾಮುಖಿ ದೇವಾಲಯದಲ್ಲೂ ಕಾಣಿಕೆ ದುರ್ಬಳಕೆ ಆರೋಪ..!

Kalpana Editor

ಗಾಯಕಿ ಅಲ್ಕಾ ಯಾಗ್ನಿಕ್ ಅಪರೂಪದ ಕಾಯಿಲೆ; ಆ ಸಮಸ್ಯೆ ಬಗ್ಗೆ ವಿವರ..!

Kalpana Editor

ಮಾದಪ್ಪನ ಹುಂಡಿಯಲ್ಲಿ ಮತ್ತೆ ಕೋಟಿ ಕೋಟಿ ಹಣ ಸಂಗ್ರಹ..!

Kalpana Editor