August 25, 2026
kranthikidi.com
ತಾಜಾಸುದ್ದಿವಿದೇಶ

ಉಡಾವಣೆಯಾದ ಕೆಲವೇ ಕ್ಷಣಗಳಲ್ಲಿ ಚೀನಾ ರಾಕೆಟ್‌ ಪತನ..!

ಬೀಜಿಂಗ್ : ಚೀನಾದ ದಕ್ಷಿಣ ಹೈನಾನ್ ಪ್ರಾಂತ್ಯದ ವೆನ್‌ಚಾಂಗ್ ಬಾಹ್ಯಾಕಾಶ ಉಡಾವಣಾ ಕೇಂದ್ರದಿಂದ ಚೀನಾಸ್ಯಾಟ್-4B ಉಪಗ್ರಹವನ್ನು ಹೊತ್ತೊಯ್ಯುತ್ತಿದ್ದ ‘ಲಾಂಗ್ ಮಾರ್ಚ್ 7A’ ರಾಕೆಟ್ ಉಡಾವಣೆ ವಿಫಲಗೊಂಡಿದೆ. ಉಡಾವಣೆಯಾದ ಕೆಲವೇ ಕ್ಷಣಗಳಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡು ರಾಕೆಟ್ ಪತನಗೊಂಡಿದೆ.

ಚೀನಾದ ಶಕ್ತಿಶಾಲಿ ‘ಲಾಂಗ್ ಮಾರ್ಚ್ 7A’ ರಾಕೆಟ್ ಬೀಜಿಂಗ್ ಕಾಲಮಾನ ರಾತ್ರಿ 8:02ಕ್ಕೆ ಉಡಾವಣೆಯಾಗಿತ್ತು. ಆದರೆ ಉಡಾವಣೆಯಾದ ತಕ್ಷಣವೇ ರಾಕೆಟ್‌ನಲ್ಲಿ ದೋಷ ಕಾಣಿಸಿಕೊಂಡು ಸ್ಪೋಟಗೊಂಡಿದೆ. ಉಡಾವಣೆ ವಿಫಲವಾಗಿರುವುದನ್ನು ದೇಶದ ಅಧಿಕೃತ ಸುದ್ದಿ ಸಂಸ್ಥೆ ಕ್ಸಿನ್ಹುವಾ ದೃಢಪಡಿಸಿದ್ದು, ಘಟನೆಗೆ ನಿಖರ ಕಾರಣ ಏನೆಂಬುದರ ಕುರಿತು ತನಿಖೆ ಮತ್ತು ವಿಶ್ಲೇಷಣೆ ನಡೆಯುತ್ತಿದೆ ಎಂದು ತಿಳಿಸಿದೆ.

ಡರ್ಹಾಮ್ ವಿಶ್ವವಿದ್ಯಾಲಯದ ಗೌರವ ಪ್ರಾಧ್ಯಾಪಕ ಹಾಗೂ ಬಾಹ್ಯಾಕಾಶ ತಜ್ಞ ಜೊನಾಥನ್ ಮೆಕ್‌ಡೊವೆಲ್ ಪ್ರಕಾರ, ಉಡಾವಣೆಯ ವೀಡಿಯೊ ತುಣುಕುಗಳನ್ನು ವಿಶ್ಲೇಷಿಸಿದಾಗ ರಾಕೆಟ್ ತೀರಾ ಕಡಿಮೆ ಎತ್ತರ ಮತ್ತು ವೇಗದಲ್ಲಿದ್ದಾಗಲೇ ಸಂಪೂರ್ಣವಾಗಿ ನಾಶವಾಗಿದೆ. ಹೀಗಾಗಿ ಉಪಗ್ರಹ ಅಥವಾ ರಾಕೆಟ್‌ನ ಯಾವುದೇ ಭಾಗಗಳು ಕಕ್ಷೆಯನ್ನು ತಲುಪಲು ಸಾಧ್ಯವಾಗಿಲ್ಲ.

ಈ ಉಡಾವಣೆ ವೈಫಲ್ಯದ ಕುರಿತು ಪ್ರತಿಕ್ರಿಯಿಸಿರುವ ಸ್ಪೇಸ್‌ಎಕ್ಸ್ (SpaceX) ಸಂಸ್ಥಾಪಕ ಹಾಗೂ ಸಿಇಒ ಎಲಾನ್ ಮಸ್ಕ್, ರಾಕೆಟ್‌ಗಳನ್ನು ನಿರ್ಮಿಸುವುದು ಮತ್ತು ಉಡಾಯಿಸುವುದು ಅತ್ಯಂತ ಕಷ್ಟಕರವಾದ ಕೆಲಸ. ಚೀನಾ ಈ ಹಿನ್ನಡೆಯಿಂದ ಶೀಘ್ರದಲ್ಲೇ ಚೇತರಿಸಿಕೊಳ್ಳಲಿ ಎಂದು ಹಾರೈಸಿದ್ದಾರೆ.

ಲಾಂಗ್ ಮಾರ್ಚ್ 7A ರಾಕೆಟ್ ತನ್ನ ಚೊಚ್ಚಲ ಉಡಾವಣೆಯನ್ನು ಮಾರ್ಚ್ 2020 ರಲ್ಲಿ ನಡೆಸಿತ್ತು, ಆಗಲೂ ತಾಂತ್ರಿಕ ದೋಷದಿಂದ ಉಡಾವಣೆ ವಿಫಲವಾಗಿತ್ತು. ಆದರೆ ಅದಾದ ಒಂದು ವರ್ಷದ ನಂತರ ಯಶಸ್ವಿಯಾಗಿ ಕಂಬ್ಯಾಕ್ ಮಾಡಿದ್ದ ಈ ರಾಕೆಟ್ ಸಾಲು ಸಾಲು 10ಕ್ಕೂ ಹೆಚ್ಚು ಯಶಸ್ವಿ ಉಡಾವಣೆಗಳನ್ನು ಪೂರ್ಣಗೊಳಿಸಿತ್ತು. ಇದನ್ನೂ ಓದಿ : ಗುಬ್ಬಿ, ಕುಣಿಗಲ್ ಬರಪೀಡಿತ ಪ್ರದೇಶಕ್ಕೆ ಡಿಸಿಎಂ ಪರಮೇಶ್ವರ್ ಭೇಟಿ..!

Related posts

ಶ್ರೀನಗರ ಕಿಟ್ಟಿ ನಟನೆಯ ‘ವೇಷಗಳು’ ಸಿನಿಮಾದ ವಿಶೇಷ ಹಾಡು ಬಿಡುಗಡೆ..!

Kalpana Editor

ಓರ್ವ ನಟಿ ಬಿಟ್ಟು ಉಳಿದೆಲ್ಲರನ್ನ ಅನ್‌ಫಾಲೋ ಮಾಡಿದ ಕರಣ್ ಜೋಹರ್

Kalpana Editor

ಬೆಂಗಳೂರಿನಲ್ಲಿ ಐದು ದಿನಗಳಲ್ಲಿ 4000 ಟನ್ ಕಟ್ಟಡ ನಿರ್ಮಾಣ ತ್ಯಾಜ್ಯ ತೆರವು..!

kknewskannada1987@gmail.com