20.4 C
ಬೆಂಗಳೂರು
October 12, 2026
kranthikidi.com
ತಾಜಾಸುದ್ದಿಸಿನಿಮಾ

ನಿರ್ಮಾಪಕನ ಜೊತೆ ನಟಿ ಶರ್ಮಿಳಾ ಮಾಂಡ್ರೆ ಮದುವೆ ಫಿಕ್ಸ್‌..!

ಅನೇಕ ವರ್ಷಗಳಿಂದ ಸ್ಯಾಂಡಲ್‌ವುಡ್‌ನಲ್ಲಿ ತನ್ನದೇ ಛಾಪು ಮೂಡಿಸಿರುವ ನಟಿ ಶರ್ಮಿಳಾ ಮಾಂಡ್ರೆಗೆ ಇದೀಗ ಕಂಕಣ ಬಲ ಕೂಡಿಬಂದಿದೆ. ಮದುವೆ ನಿಶ್ಚಯವಾಗಿದ್ದು, ಇದೇ ಜೂನ್ 25 ರಂದೇ ನಿಶ್ಚಿತಾರ್ಥ ನಡೆಯಲಿದೆ. ನಟಿ ಶರ್ಮಿಳಾ ಮಾಂಡ್ರೆ ಅವರು ಜೀವನ ಸಂಗಾತಿಯನ್ನಾಗಿ ಚಿತ್ರೋದ್ಯಮಿಯನ್ನೇ ಆಯ್ಕೆ ಮಾಡಿಕೊಂಡಿರುವುದು ವಿಶೇಷ. ತಮಿಳಿನ ಖ್ಯಾತ ನಿರ್ಮಾಪಕ ಸುಧನ್ ಸುಂದರಂ ಜೊತೆ ಶರ್ಮಿಳಾ ಮಾಂಡ್ರೆ ಸಪ್ತಪದಿ ತುಳಿಯಲು ಸಿದ್ಧರಾಗಿದ್ದಾರೆ.

ಸುಧನ್ ಸುಂದರಂ ತಮಿಳಿನ ಯಶಸ್ವಿ ನಿರ್ಮಾಪಕಲ್ಲೊಬ್ಬರು. ಪ್ಯಾಷನ್ ಸ್ಟುಡಿಯೋಸ್’ ನಿರ್ಮಾಣ ಸಂಸ್ಥೆಯ ಸಂಸ್ಥಾಪಕರಾಗಿದ್ದು, ಬ್ಲಾಕ್‌ಬಸ್ಟರ್ಮಹಾರಾಜ’, ತಾಯ್ ಕಿಳವಿ’ ಮತ್ತುಅನ್ನಾಬೆಲ್ಲೆ ಸೇತುಪತಿ’ ಮುಂತಾದ ಚಿತ್ರಗಳನ್ನು ನಿರ್ಮಿಸಿದ್ದಾರೆ. ತಮಿಳಿನಲ್ಲಿ ಚಿತ್ರ ನಿರ್ಮಿಸಿರುವ ಶರ್ಮಿಳಾಗೆ ಭಾವೀ ಪತಿ ಅದೇ ಇಂಡಸ್ಟ್ರಿಯಲ್ಲೇ ಪರಿಚಯವಾದಂತೆ ಕಾಣುತ್ತೆ.

`ಸಜನಿ’ ಚಿತ್ರದ ಮೂಲಕ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ಶರ್ಮಿಳಾ ಇದೀಗ ನಟನೆ ಜೊತೆ ಚಿತ್ರ ನಿರ್ಮಾಣವನ್ನೂ ಮಾಡುತ್ತಿದ್ದಾರೆ. ಬೋಲ್ಡ್ & ಬ್ಯೂಟಿಗೆ ಹೆಸರಾಗಿರುವ ಶರ್ಮಿಳಾ ಮಾಂಡ್ರೆ ಇದೀಗ ತಮಿಳುನಾಡಿನ ಸೊಸೆಯಾಗುತ್ತಿದ್ದಾರೆ. ಇದೇ ವರ್ಷ ಮದುವೆಯಾಗಲಿದ್ದಾರೆ ಎಂದು ತಿಳಿದುಬಂದಿದೆ. ಇದನ್ನೂ ಓದಿ : ರಕ್ಷಣಾ ಕ್ಷೇತ್ರದಲ್ಲಿ ಭಾರತದ ಮಹತ್ವದ ಸಾಧನೆ; 1.78 ಲಕ್ಷ ಕೋಟಿ ರೂ. ತಲುಪಿದ ಉತ್ಪಾದನೆ..!

Related posts

ಸಿಎಂ ಸ್ಥಾನಕ್ಕೆ ಸಿದ್ದರಾಮಯ್ಯ ರಾಜೀನಾಮೆ; ರಾಜ್ಯಪಾಲರ ಕಾರ್ಯದರ್ಶಿಗೆ ಪತ್ರ ಹಸ್ತಾಂತರ..!

Kalpana Editor

80ನೇ ಸ್ವಾತಂತ್ರ್ಯ ದಿನಾಚರಣೆ; ಮುಖ್ಯಮಂತ್ರಿಯಾಗಿ ಮೊದಲ ಬಾರಿಗೆ ಧ್ವಜಾರೋಹಣ ನೆರವೇರಿಸಿದ ಡಿಕೆಶಿ

kknewskannada1987@gmail.com

ಏರ್‌ಪೋರ್ಟ್‌ನಲ್ಲಿ 3.12 ಕೋಟಿ ಮೌಲ್ಯದ ಚಿನ್ನ, ಮಾದಕ ವಸ್ತು ಜಪ್ತಿ..!

Kalpana Editor