August 25, 2026
kranthikidi.com
ತಾಜಾಸುದ್ದಿರಾಜ್ಯ

ವಿಐಪಿ ಸೆಲ್‌ನಿಂದ ಪ್ರಜ್ವಲ್‌ ಎತ್ತಂಗಡಿ; ಸಿಕ್ಕ ಮೊಬೈಲ್‌ನಲ್ಲೂ ಅಶ್ಲೀಲ ವಿಡಿಯೋಗಳು ಪತ್ತೆ..!

ಬೆಂಗಳೂರು : ಪರಪ್ಪನ ಅಗ್ರಹಾರ ಜೈಲಿನಲ್ಲಿ ಅತ್ಯಾಚಾರ ಪ್ರಕರಣದ ಅಪರಾಧಿ ಪ್ರಜ್ವಲ್ ರೇವಣ್ಣ ಸೆಲ್‌ನಲ್ಲಿ ಮೊಬೈಲ್ ಪತ್ತೆಯಾದ ಪ್ರಕರಣ ತೀವ್ರ ಸ್ವರೂಪ ಪಡೆದುಕೊಂಡಿದೆ. ಮೊಬೈಲ್‌ ಪತ್ತೆಯಾದ ಬೆನ್ನಲ್ಲೇ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿದ್ದು, ವಿಐಪಿ ಸೆಲ್‌ನಿಂದ ಪ್ರಜ್ವಲ್‌ ರೇವಣ್ಣನನ್ನ ಜನರಲ್‌ ಕೈದಿಗಳಿರುವ ಸೆಲ್‌ಗೆ ಎತ್ತಂಗಡಿ ಮಾಡಲಾಗಿದೆ. 20 ಕೈದಿಗಳಿರುವ ಬ್ಯಾರಕ್‌ಗೆ ಪ್ರಜ್ವಲ್‌ ರೇವಣ್ಣನನ್ನ ಶಿಫ್ಟ್‌ ಮಾಡಲಾಗಿದ್ದು, ಸಿಸಿಟಿವಿ ಕಣ್ಗಾವಲಿನಲ್ಲಿ ಇರಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಬಳಿ ಸಿಕ್ಕ ಮೊಬೈಲ್‌ನಲ್ಲಿ ಸುಮಾರು 90 ಅಶ್ಲೀಲ ವಿಡಿಯೋಗಳು ಪತ್ತೆಯಾಗಿವೆ. ಹಾಗೇ ಪ್ರಜ್ವಲ್ ಪರಿಚಿತರೊಂದಿಗೆ ಮಾತನಾಡಿದ ಆಡೀಯೋ ರೆಕಾರ್ಡ್ ಸಹ ಸಿಕ್ಕಿದೆ. ಜೈಲಿನಲ್ಲಿ ಸಿಕ್ಕ ಮೊಬೈಲ್ ಮೂಲಕ ಪ್ರಜ್ವಲ್ ರೇವಣ್ಣ ಅಪರಿಚಿತ ವ್ಯಕ್ತಿಯೊಂದಿಗಿನ ಸಂಭಾಷಣೆ ಸಿಕ್ಕಿದೆ. ಇನ್ನು ಅತ್ಯಾಚಾರ ಪ್ರಕರಣದ ಅಪರಾಧಿ ಪ್ರಜ್ವಲ್ ರೇವಣ್ಣ ಜೈಲಿನ ಕೊಠಡಿಯೊಳಗೆ ವೈಯಕ್ತಿಕ ಉಡುಪು ಧರಿಸಿ, ಜೈಲು ಸಮವಸ್ತ್ರವಿಲ್ಲದೇ ಆರಾಮವಾಗಿ ಮೊಬೈಲ್ ಫೋನ್‌ನಲ್ಲಿ ಮಾತನಾಡುತ್ತಿರುವುದು ಕಂಡುಬಂದಿದೆ.

ಈ ವಿಡಿಯೋ ಯಾವಾಗ ಚಿತ್ರೀಕರಿಸಲಾಗಿದೆ ಎಂಬುದು ನಿಖರವಾಗಿ ತಿಳಿದುಬಂದಿಲ್ಲ. ನಿನ್ನೆ ಸಿಸಿಬಿ ಅಧಿಕಾರಿಗಳು ಜೈಲು ಕೊಠಡಿಯ ಮೇಲೆ ದಾಳಿ ನಡೆಸಿದಾಗ, ಒಂದು ಮೊಬೈಲ್ ಫೋನ್ ಪತ್ತೆಯಾಗಿತ್ತು. ವಿಡಿಯೋ ಬಹಿರಂಗವಾದ ಬೆನ್ನಲ್ಲೇ ಜೈಲು ಆಡಳಿತದ ಭದ್ರತಾ ವ್ಯವಸ್ಥೆ ಹಾಗೂ ನಿಯಮಗಳ ಪಾಲನೆ ಕುರಿತು ಹಲವು ಪ್ರಶ್ನೆಗಳು ಎದ್ದಿವೆ ಎನ್ನಲಾಗಿದೆ. ಇದನ್ನೂ ಓದಿ : ಹೊರ ಬರಲ್ಲ ಎಂದು ಹಠ ಹಿಡಿದ ವಾಟಾಳ್‌ ಮನೆಯಂಗಳದಲ್ಲೇ ವಶಕ್ಕೆ..!

Related posts

ಮೇಕೆದಾಟು ಯೋಜನೆ ವಿರುದ್ಧ ರಾಜ್ಯಸಭೆಯಲ್ಲಿ ಡಿಎಂಕೆ ನಿಲುವಳಿ ಮಂಡನೆ..!

kknewskannada1987@gmail.com

SIR ಅವಧಿ ವಿಸ್ತರಣೆ ಚುನಾವಣಾ ಆಯೋಗಕ್ಕೆ ಬಿಟ್ಟ ವಿಚಾರ – ಹೈಕೋರ್ಟ್‌

Kalpana Editor

ಮಾರುವೇಷ ಧರಿಸಿ, ಬಸ್‌ಗಳಲ್ಲಿ ಸಚಿವ ಬೈರತಿ ಸುರೇಶ್‌ ಚೆಕ್ಕಿಂಗ್‌..!

Kalpana Editor