28.4 C
ಬೆಂಗಳೂರು
October 5, 2026
kranthikidi.com
ತಾಜಾಸುದ್ದಿಸಿನಿಮಾ

ನಿಶ್ಚಿತಾರ್ಥ ಮಾಡಿಕೊಂಡ ನಟಿ ಶರ್ಮಿಳಾ ಮಾಂಡ್ರೆ – ಫೋಟೋಗಳು ವೈರಲ್..!

ನಿರ್ಮಾಪಕ ಸುಧನ್ ಸುಂದರಂ ಜೊತೆ ನಟಿ ಶರ್ಮಿಳಾ ಮಾಂಡ್ರೆ ಅವರ ನಿಶ್ಚಿತಾರ್ಥ ನೆರವೇರಿದೆ. ಬೆಂಗಳೂರಿನ ಖಾಸಗಿ ಹೋಟೆಲ್​ನಲ್ಲಿ ನಡೆದ ನಿಶ್ಚಿತಾರ್ಥ ಸಮಾರಂಭದ ಕಲರ್​ಫುಲ್ ಫೋಟೋಗಳು ಇಲ್ಲಿವೆ. ಮದುವೆಯ ದಿನಾಂಕ ಮತ್ತು ಸ್ಥಳದ ಬಗ್ಗೆ ಇನ್ನೂ ಮಾಹಿತಿ ಹೊರಬಿದ್ದಿಲ್ಲ. ಅದ್ದೂರಿ ವಿವಾಹಕ್ಕೆ ತಯಾರಿ ಮಾಡಿಕೊಳ್ಳಲಾಗುತ್ತಿದೆ.

ಕನ್ನಡ ಚಿತ್ರರಂಗದ ಖ್ಯಾತ ನಟಿ ಶರ್ಮಿಳಾ ಮಾಂಡ್ರೆ ಅವರು ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಈ ಶುಭ ಸಂದರ್ಭದ ಫೋಟೋಗಳನ್ನು ಅವರೇ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ. ತಮಿಳು ಚಿತ್ರರಂಗದಲ್ಲಿ ನಿರ್ಮಾಪಕನಾಗಿ ಗುರುತಿಸಿಕೊಂಡಿರುವ ಸುಧನ್ ಸುಂದರಂ ಜೊತೆ ಶರ್ಮಿಳಾ ಮಾಂಡ್ರೆ ಅವರ ನಿಶ್ಚಿತಾರ್ಥ ನೆರವೇರಿದೆ. ಅಭಿಮಾನಿಗಳು ಮತ್ತು ಆಪ್ತರು ಅಭಿನಂದನೆ ತಿಳಿಸಿದ್ದಾರೆ.

ಬೆಂಗಳೂರಿನ ಸ್ಟಾರ್ ಹೋಟೆಲ್​ನಲ್ಲಿ ಎಂಗೇಜ್​ಮೆಂಟ್ ಮಾಡಲಾಗಿದೆ. ಕುಟುಂಬದವರು ಮತ್ತು ಕೆಲವೇ ಮಂದಿ ಸ್ನೇಹಿತರು ಈ ಕ್ಷಣಕ್ಕೆ ಸಾಕ್ಷಿಯಾದರು. ಫೋಟೋಗಳು ಈಗ ಸಖತ್ ವೈರಲ್ ಆಗುತ್ತಿವೆ. ಜೀವನದಲ್ಲಿ ಹೊಸ ಅಧ್ಯಾಯ ಆರಂಭಿಸುತ್ತಿರುವ ಬಗ್ಗೆ ಶರ್ಮಿಳಾ ಮಾಂಡ್ರೆ ಅವರು ಕೆಲವೇ ದಿನಗಳ ಹಿಂದೆ ಮಾಹಿತಿ ಹಂಚಿಕೊಂಡಿದ್ದರು.

ಈಗ ನಿಶ್ಚಿತಾರ್ಥ ಮಾಡಿಕೊಂಡು ಮದುವೆಗೆ ಸಜ್ಜಾಗಿದ್ದಾರೆ. ಶರ್ಮಿಳಾ ಮಾಂಡ್ರೆ ಅವರ ಮದುವೆಗೆ ಸಕಲ ಸಿದ್ಧತೆ ನಡೆಯುತ್ತಿದೆ. ವಿವಾಹದ ಸ್ಥಳ ಮತ್ತು ದಿನಾಂಕದ ಬಗ್ಗೆ ಇನ್ನಷ್ಟೇ ಮಾಹಿತಿ ಹೊರಬೀಳಬೇಕಿದೆ. ಡೆಸ್ಟಿನೇಷನ್ ವೆಡ್ಡಿಂಗ್​ಗೆ ಈ ಜೋಡಿ ಪ್ಲ್ಯಾನ್ ಮಾಡುತ್ತಿದೆ. ಇದನ್ನೂ ಓದಿ : ಪಾಗಲ್​​ ಪ್ರೇಮಿಯ ದಾರುಣ ಅಂತ್ಯ – ಸ್ಫೋಟಕದ ಬಗ್ಗೆ ಖಾಕಿ ತನಿಖೆ..!

Related posts

ನವೆಂಬರ್ 6ಕ್ಕೆ ಬೆಳ್ಳಿತೆರೆ ಮೇಲೆ ʻರಾಮಾಯಣʼ ಸಿನಿಮಾ ದೈವಿಕ ಪರ್ವ ಶುರು..!

kknewskannada1987@gmail.com

ಶೃಂಗೇರಿಯಲ್ಲೂ ಭೂಕುಸಿತದ ಆತಂಕ; ಬಿರುಕುಗೊಂಡ ಬೃಹತ್ ತಡೆಗೋಡೆ..!

Kalpana Editor

ನಮ್ಮ ಮೆಟ್ರೋ 3ನೇ ಹಂತಕ್ಕೆ ಕೇಂದ್ರ ಸರ್ಕಾರದಿಂದ ಶೀಘ್ರ ಅನುಮೋದನೆ ಸಾಧ್ಯತೆ..!

Kalpana Editor