25.1 C
ಬೆಂಗಳೂರು
October 6, 2026
kranthikidi.com
ತಾಜಾಸುದ್ದಿರಾಜ್ಯ

ಸಿಎಂ ವಿಜಯ್‌ ಧ್ವಜಾರೋಹಣದ ವೇಳೆ ಮುಂದಿನ ಸಾಲಲ್ಲಿ ಕುಳಿತು ಮಿಂಚಿದ ನಟಿ ತ್ರಿಷಾ..!

ಚೆನ್ನೈ : ಫೋರ್ಟ್ ಸೇಂಟ್ ಜಾರ್ಜ್‌ನಲ್ಲಿ ನಡೆದ ಸ್ವಾತಂತ್ರ್ಯ ದಿನಾಚರಣೆಯಲ್ಲಿ ತಮಿಳುನಾಡು ಸಿಎಂ ಜೋಸೆಫ್ ವಿಜಯ್ ಅವರು ಮೊದಲ ಬಾರಿಗೆ ಧ್ವಜಾರೋಹಣ ನೆರವೇರಿಸಿದರು. ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ನಟಿ ತ್ರಿಷಾ ಕೃಷ್ಣನ್, ಹಳದಿ ಸೀರೆ ಉಟ್ಟು, ಮಲ್ಲಿಗೆ ಮುಡಿದು ವೇದಿಕೆಯ ಮುಂಭಾಗದ ಸಾಲಿನಲ್ಲಿ ಆಸೀನರಾಗಿದ್ದರು.

ವಿಜಯ್ ಆಗಮನಕ್ಕೆ ಕಾದು ಕುಳಿತಿದ್ದ ತ್ರಿಷಾ ಅವರ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿವೆ. ತ್ರಿಷಾ ತಾಯಿ ಉಮಾ ಕೃಷ್ಣನ್ ಕೂಡ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಇದೇ ವೇಳೆ ವಿಜಯ್ ತಾಯಿ ಶೋಭಾ ಚಂದ್ರಶೇಖ‌ರ್ ಅವರನ್ನು ತ್ರಿಷಾ ಆತ್ಮೀಯವಾಗಿ ಅಪ್ಪಿಕೊಂಡ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಗಮನ ಸೆಳೆದಿದೆ. ವಿಜಯ್ ಪೋಷಕರ ಪಕ್ಕದಲ್ಲೇ ಕುಳಿತಿದ್ದ ತ್ರಿಷಾ, ಪರೇಡ್‌ ವೇಳೆ ಸಿಎಂಗೆ ವಂದನೆಯನ್ನೂ ಸಲ್ಲಿಸಿದರು.

ಕಾರ್ಯಕ್ರಮದಲ್ಲಿ ರಾಜ್ಯದ ಜನತೆಯನ್ನು ಉದ್ದೇಶಿಸಿ ಮಾತನಾಡಿದ ಸಿಎಂ, ರಾಜ್ಯದ ಹಕ್ಕುಗಳಿಗಾಗಿನ ನಮ್ಮ ಹೋರಾಟವನ್ನು ನಾವೆಂದಿಗೂ ಕೈಬಿಡುವುದಿಲ್ಲ. ಸಾರ್ವಜನಿಕ ಹಿತಾಸಕ್ತಿಯೇ ನಮ್ಮ ಆದ್ಯತೆ. 2036ರ ವೇಳೆಗೆ ತಮಿಳುನಾಡಿನ ಆರ್ಥಿಕತೆಯನ್ನು 1.5 ರೂ. ಟ್ರಿಲಿಯನ್‌ಗೆ ಏರಿಸೋಣ ಎಂದು ಕರೆಕೊಟ್ಟರು. ಇದನ್ನೂ ಓದಿ : ನಾನು ಹಿಂದೂಸ್ತಾನಿ, ನಾನು ಕನ್ನಡಿಗ; ದೇಶದ್ರೋಹಿ ಪಟ್ಟ ಕಟ್ಟಿದ ವಿಪಕ್ಷಗಳಿಗೆ ಸಚಿವ ಜಮೀರ್‌ ತಿರುಗೇಟು..!

Related posts

ಉಡುಪಿ ಜಿಲ್ಲೆಯ ಅಂಬಲಪಾಡಿ ದೇವಸ್ಥಾನದಲ್ಲಿ ವಿಶೇಷ ಪುಷ್ಪಾಲಂಕಾರ..!

Kalpana Editor

ಸೂರಜ್‌ ಹೆಗ್ಡೆ ನಿಧನ – ಅಂತಿಮ ನಮನ ಸಲ್ಲಿಸಿದ ರಾಹುಲ್‌ ಗಾಂಧಿ

Kalpana Editor

ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣ; ಮೋದಿ ಸಂಪೂರ್ಣ ಜವಾಬ್ದಾರಿ ಹೊರಬೇಕು – ಡಿಸಿಎಂ ಜಿ. ಪರಮೇಶ್ವರ್

Kalpana Editor