28.4 C
ಬೆಂಗಳೂರು
October 5, 2026
kranthikidi.com
ತಾಜಾಸುದ್ದಿದೇಶ

ಶಸ್ತ್ರಾಸ್ತ್ರ ತಪಾಸಣೆ ವೇಳೆ ಏರ್ ಇಂಡಿಯಾ ಪ್ರಯಾಣಿಕನಿಂದ ಗುಂಡಿನ ದಾಳಿ

ಅಲಕ್ನೋ : ಮುಂಬೈಗೆ ತೆರಳುತ್ತಿದ್ದ, ಏರ್‌ಇಂಡಿಯಾ ಎಕ್ಸ್‌ಪ್ರೆಸ್‌ ವಿಮಾನ (ಸಂಖ್ಯೆ IX-1810) ಹತ್ತುವಾಗ ಶಸ್ತ್ರಾಸ್ತ್ರ ತಪಾಸಣೆ ನಡೆಸುವ ವೇಳೆ ಪ್ರಯಾಣಿಕನೊಬ್ಬ ಏಕಾಏಕಿ ಗುಂಡು ಹಾರಿಸಿರುವ ಘಟನೆ ವಾರಣಾಸಿ ಏರ್‌ಪೋರ್ಟ್‌ನಲ್ಲಿ ನಡೆದಿದೆ.

ಇಂದು ಬೆಳಗ್ಗೆ 9:30 ರ ಸುಮಾರಿಗೆ ಘಟನೆ ನಡೆದಿದೆ. ತನ್ನ ಪತ್ನಿಯೊಂದಿಗೆ ಪ್ರಯಾಣಿಸುತ್ತಿದ್ದ ಪ್ರಯಾಣಿಕ ಶಸ್ತ್ರಾಸ್ತ್ರ ತಪಾಸಣೆ ವೇಳೆ ಏಕಾಏಕಿ ಗುಂಡು ಹಾರಿಸಿದ್ದಾನೆ. ಈ ವೇಳೆ ತಪಾಸಣೆ ನಡೆಸುತ್ತಿದ್ದ ಇಬ್ಬರು AAICLAS ಸ್ಕ್ರೀನಿಂಗ್‌ ಸಿಬ್ಬಂದಿ ಗಾಯಗೊಂಡಿದ್ದಾರೆ.

ಆಗಿದ್ದೇನು? – ಪ್ರಯಾಣಿಕನು ತನ್ನ ಬಳಿ ಶಸ್ತ್ರಾಸ್ತ್ರ ಇರುವುದಾಗಿ ಹೇಳಿಕೊಂಡಿದ್ದಾನೆ. ಬಳಿಕ ಏರ್‌ ಇಂಡಿಯಾ ಸಿಬ್ಬಂದಿ ತಪಾಸಣೆ ನಡೆಸಲು ಶುರು ಮಾಡಿದ್ದಾರೆ. ಈ ವೇಳೆ ಗನ್‌ ತೆಗೆದ ಪ್ರಯಾಣಿಕ ಒಂದು ಸುತ್ತು ಗುಂಡು ಹಾರಿಸಿದ್ದಾನೆ. ಇದರಿಂದ ಇಬ್ಬರು AAICLAS ಸ್ಕ್ರೀನಿಂಗ್‌ ಸಿಬ್ಬಂದಿ ಗಾಯಗೊಂಡಿದ್ದಾರೆ.

ಅವರಿಬ್ಬರನ್ನೂ ಚಿಕಿತ್ಸೆಗಾಗಿ ನ್ಯೂ ಲಕ್ಷ್ಮಿ ಟ್ರಾಮಾ ಸೆಂಟರ್‌ಗೆ ದಾಖಲಿಸಲಾಗಿದೆ ಎಂದು ವಿಮಾನ ನಿಲ್ದಾಣ ನಿರ್ದೇಶಕರು ಮಾಹಿತಿ ನೀಡಿದ್ದಾರೆ. ಘಟನೆ ಬಳಿಕ ಸ್ಥಳೀಯ ಪೊಲೀಸರಿಗೆ ಈ ಬಗ್ಗೆ ಮಾಹಿತಿ ನೀಡಲಾಗಿದ್ದು, ತನಿಖೆ ನಡೆಯುತ್ತಿದೆ. ಇದನ್ನೂ ಓದಿ : CJI ಸೂರ್ಯಕಾಂತ್ ಟೀಕೆ ಬಳಿಕ BCI ಯೂಟರ್ನ್; ವಿದ್ಯಾರ್ಥಿಗಳ ದಾಖಲಾತಿ ನಿರ್ಬಂಧ ವಾಪಸ್..!

Related posts

ಚಿಕ್ಕಬಳ್ಳಾಪುರದಲ್ಲಿ ಶಾಸಕ ಪ್ರದೀಪ್ ಈಶ್ವರ್ ಕಾರಿನ ಮೇಲೆ ಚಪ್ಪಲಿ ಎಸೆತ..!

Kalpana Editor

ಇಂದು ಉದ್ಘಾಟಿಸಬೇಕಿದ್ದ, ಕೊಪ್ಪಳ ರೈಲ್ವೆ ನಿಲ್ದಾಣದಲ್ಲಿ ನೀರು ಸೋರಿಕೆ..!

Kalpana Editor

ಕಂದಾಯ ಇಲಾಖೆಯಲ್ಲಿ ಭಾರಿ ಗೋಲ್ಮಾಲ್, 1000 ಎಕರೆ ಭೂ ಅಕ್ರಮ ಬಯಲಿಗೆ..!

Kalpana Editor