23.5 C
ಬೆಂಗಳೂರು
October 12, 2026
kranthikidi.com
ತಾಜಾಸುದ್ದಿರಾಜಕೀಯರಾಜ್ಯ

ರಾಮ ಮಂದಿರ ದೇಣಿಗೆ ಹಗರಣ ಮುಚ್ಚಿ ಹಾಕಲು ಬಿಜೆಪಿ ಪ್ರಯತ್ನ; ಖರ್ಗೆ ಆರೋಪ..!

ಬೆಂಗಳೂರು : ರಾಮ ಮಂದಿರ ದೇಣಿಗೆ ಹಗರಣವನ್ನು ಬಿಜೆಪಿ ಮುಚ್ಚಿ ಹಾಕೋಕೆ, ಪ್ರಯತ್ನ ಮಾಡ್ತಿದೆ ಅಂತ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಆರೋಪ ಮಾಡಿದ್ದಾರೆ. ರಾಮ ಮಂದಿರ ದೇಣಿಗೆ ಹಗರಣದಲ್ಲಿ ಕರ್ನಾಟಕದ ನಂಟಿದೆ ಎಂಬ ಅಖಿಲೇಶ್ ಯಾದವ್ ಆರೋಪಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಅಖಿಲೇಶ್ ಯಾದವ್ ಹೇಳಿಕೆ ಬಗ್ಗೆ ಗೊತ್ತಿಲ್ಲ. ಅದರೆ, ಬಿಜೆಪಿಗೆ RSSಗೆ ನೇಷನ್ ಫಸ್ಟ್ ಅಲ್ಲ. ಬಿಜೆಪಿ-RSSಗೆ ಡೊನೇಷನ್ ಫಸ್ಟ್ ಎಂದು ಕಿಡಿಕಾರಿದ್ದಾರೆ.

ರಾಮಮಂದಿರ ಪ್ರಾಣ ಪ್ರತಿಷ್ಠಾಪನೆ ಮಾಡಿದ್ದು ಯಾರು? ಉದ್ಘಾಟನೆ ಮಾಡಿದ್ದು ಯಾರು? ಸಮಿತಿ ಮಾಡಿದ್ದು ಯಾರು? ಎಲ್ಲಾ ಮಾಡಿದ್ದು ಪ್ರಧಾನಿ ಮೋದಿ ಅವರು. ಈಗ ದೇಣಿಗೆ ಹಗರಣ ಆಗಿದೆ. ಚಿನ್ನ, ಬೆಳ್ಳಿ, ಹಣ ಏನು ಇಲ್ಲ. ಈಗ ಪ್ರಧಾನಿ ಮೋದಿ ಮೌನವಾಗಿ ಇದ್ದಾರೆ, ಯೋಗಿ ಭಾಷಣ ಮಾಡ್ತಾರೆ ಎಂದಿದ್ದಾರೆ.

ಈಗ ಲೂಟಿ ಹೊಡೆದಿದ್ದು ನೀವು. ಈ ಹಗರಣದಲ್ಲಿ ನಿಮ್ಮ ಪಾಲು ಇಲ್ಲ ಅಂತ ಏನು ಗ್ಯಾರಂಟಿ ಇದೆ..? SIT ಮಾಡಿ ಯಾರಿಗೆ ರಿಪೋರ್ಟ್ ಕೊಟ್ಟರು..? IAS ಆಫೀಸರ್‌ಗೆ ರಿಪೋರ್ಟ್ ಕೊಟ್ಟರು. ಆ ಅಧಿಕಾರಿ ಕೂಡ ಟ್ರಸ್ಟ್‌ನಲ್ಲಿ ಇರೋನು. ಮೋದಿ ನಾನು ತಿನ್ನಲ್ಲ, ತಿನ್ನೋರಿಗೂ ಬಿಡಲ್ಲ ಅಂದ್ರು. ಈಗ ಏನ್ ಆಯ್ತು..? ಬಿಜೆಪಿ ಅವರು ಈ ಹಗರಣವನ್ನು ಮುಚ್ಚಿ ಹಾಕೋಕೆ ಮುಂದಾಗಿದ್ದಾರೆ ಎಂದು ದೂರಿದ್ದಾರೆ. ಇದನ್ನೂ ಓದಿ : ರಾಜ್ಯ ಬಿಜೆಪಿ ಗೊಂದಲಗಳಿಗೆ 2 ತಿಂಗಳಲ್ಲಿ ತೆರೆ; ಶಾಸಕಸುರೇಶ್ ಗೌಡ

Related posts

ಕಲ್ಲು ಕ್ವಾರಿ ದುರಂತ; ರಾಜ್ಯ ಸರ್ಕಾರದ ನಿರ್ಲಕ್ಷ್ಯವೇ ಕಾರಣ – ಮೃತರ ಕುಟುಂಬಗಳಿಗೆ ಸರ್ಕಾರದಿಂದ ಪರಿಹಾರ ನೀಡಬೇಕು – ಆರ್‌.ಅಶೋಕ

Kalpana Editor

ಸಿದ್ದರಾಮಯ್ಯ ಪತ್ನಿಗೆ ರಾಜ್ಯಸಭಾ ಆಫರ್ ನೀಡಿದ್ದ, ರಾಹುಲ್ ಗಾಂಧಿ

Kalpana Editor

74,000 ಹುದ್ದೆಗಳ ನೇಮಕಾತಿ ಭರ್ತಿಗೆ ಹೈಟೆಕ್ ಭದ್ರತೆ..!

Kalpana Editor