24.1 C
ಬೆಂಗಳೂರು
October 11, 2026
kranthikidi.com
ತಾಜಾಸುದ್ದಿರಾಜ್ಯ

ಬೆಳೆ ಸಾಲ ಸಂಪೂರ್ಣ ಮನ್ನಾ – ರೈತರಿಗೆ ಬಿಗ್‌ ಗಿಫ್ಟ್‌ ಕೊಟ್ಟ ಸಿಎಂ ವಿಜಯ್‌

ಚೆನ್ನೈ : ಸಿಎಂ ಜೋಸೆಫ್‌ ವಿಜಯ್‌ ತಮಿಳುನಾಡಿನ ರೈತರಿಗೆ ಬಂಪರ್‌ ಕೊಡುಗೆ ನೀಡಿದ್ದಾರೆ. ವಿವಿಧ ಸಹಕಾರಿ ಬ್ಯಾಂಕುಗಳಲ್ಲಿ ರೈತರು ಪಡೆದಿರುವ 75,000 ರೂ. ವರೆಗಿನ ಬೆಳೆ ಸಾಲವನ್ನು ಸಂಪೂರ್ಣ ಮನ್ನಾ ಮಾಡುವುದಾಗಿ ಘೋಷಣೆ ಮಾಡಿದ್ದಾರೆ.

ಪರಿಷ್ಕೃತ ಯೋಜನೆಯ ಪ್ರಕಾರ, 2025 ರ ಮೇ 1 ರಿಂದ 2026 ರ ಫೆ.28 ರ ನಡುವೆ ಸಹಕಾರಿ ಬ್ಯಾಂಕುಗಳಿಂದ 75,000 ರೂ. ವರೆಗಿನ ಸಾಲ ಸಂಪೂರ್ಣ ಮನ್ನಾ ಆಗಲಿದೆ. ರಾಜ್ಯಾದ್ಯಂತ ಸುಮಾರು 14.43 ಲಕ್ಷಕ್ಕೂ ಹೆಚ್ಚು ರೈತರು ಇದರ ಪ್ರಯೋಜನ ಪಡೆಯಲಿದ್ದಾರೆ. ಆದ್ರೆ ಈ ಕ್ರಮದಿಂದ ಸರ್ಕಾರಕ್ಕೆ 5,932.23 ಕೋಟಿ ರೂ. ಹೊರೆಯಾಗಲಿದೆ.

ಯಾರಿಗೆ ಪ್ರಯೋಜನ? – 8.33 ಲಕ್ಷ ಸಣ್ಣ ರೈತರು, 5.16 ಲಕ್ಷ ಮಧ್ಯಮ ರೈತರು, 93,548 ಬೃಹತ್‌ ರೈತರಿಗೆ ಪ್ರಯೋಜನ.., ಇದರೊಂದಿಗೆ 75,000 ರೂ.ಗಿಂತಲೂ ಹೆಚ್ಚು ಬೆಳೆ ಸಾಲ ಪಡೆದವರಿಗೆ 35,000 ರೂ. ವರೆಗಿನ ಸಾಲ ಮನ್ನಾ ಮಾಡುವುದಾಗಿ ಘೋಷಿಸಿದ್ದಾರೆ.

ಒಟ್ಟು ಫಲಾನುಭವಿಗಳಲ್ಲಿ 75,000 ರೂ.ವರೆಗಿನ ಸಾಲ ಹೊಂದಿರುವ 6.22 ಲಕ್ಷಕ್ಕೂ ಹೆಚ್ಚು ರೈತರು ಸಂಪೂರ್ಣ ಮನ್ನಾ ಪ್ರಯೋಜನ ಪಡೆಯುತ್ತಾರೆ. ಅದಕ್ಕಿಂತಲೂ ಹೆಚ್ಚಿನ ಸಾಲ ಹೊಂದಿದವರಲ್ಲಿ 8.21 ಲಕ್ಷ ರೈತರ ಸಾಲ ತಲಾ 35,000 ರೂ. ಮನ್ನಾ ಆಗಲಿದೆ. ಇದು ಸಿಎಂ ವಿಜಯ್‌ ಸರ್ಕಾರ ಇದುವೆರೆಗೆ ಘೋಷಿಸಿದ ಅತಿದೊಡ್ಡ ರೈತ ಕಲ್ಯಾಣ ಕಾರ್ಯಕ್ರಮಗಳಲ್ಲಿ ಒಂದಾಗಿದೆ.

ರಾಜ್ಯದ ರೈತರ ಆರ್ಥಿಕ ಸ್ಥಿತಿ ಮತ್ತು ರೈತರ ಅಗತ್ಯಗಳನ್ನು ನಿರ್ವಹಿಸಲು ಈ‌ ನಿರ್ಧಾರ ತೆಗೆದುಕೊಳ್ಳಲಾಗಿದೆ. ಈ ಯೋಜನೆಯಡಿ ಸಹಕಾರಿ ಬ್ಯಾಂಕುಗಳಿಗೆ ಪಾವತಿಸಬೇಕಾದ ಪಾವತಿಗಳನ್ನು ಭಾರತೀಯ ರಿಸರ್ವ್ ಬ್ಯಾಂಕ್ ಮಾರ್ಗಸೂಚಿಗಳಿಗೆ ಅನುಗುಣವಾಗಿ 45 ರಿಂದ 60 ದಿನಗಳಲ್ಲಿ ಇತ್ಯರ್ಥಪಡಿಸುವ ಸಾಧ್ಯತೆಗಳಿವೆ. ಇದನ್ನೂ ಓದಿ : ಪ್ರಸಾದದ ಗುಣಮಟ್ಟ ಸುಧಾರಿಸಲು ಮೈಸೂರಿನ ಸಂಸ್ಥೆ ಜೊತೆ ಟಿಟಿಡಿ ಒಪ್ಪಂದ..!

Related posts

ಕೊಲ್ಲೂರು ಮೂಕಾಂಬಿಕಾ ದೇಗುಲಕ್ಕೆ ಕೇರಳ ಸಿಎಂ ಸತೀಶನ್ ಭೇಟಿ..!

Kalpana Editor

ಕರ್ನಾಟಕದೊಂದಿಗೆ ನೇರ ಮಾತುಕತೆ ಬೇಡ; ಸಿಎಂ ವಿಜಯ್​​​​ಗೆ ಪಳನಿಸ್ವಾಮಿ ಸಲಹೆ..!

Kalpana Editor

ರುಚಿಯಾದ ಹರಿಯಾಲಿ ಮಟನ್ ಗ್ರೇವಿ..!

kknewskannada1987@gmail.com