August 26, 2026
kranthikidi.com
ತಾಜಾಸುದ್ದಿಸಿನಿಮಾ

ಟಾಕ್ಸಿಕ್ ಚಿತ್ರದ ಫಸ್ಟ್ ವಿಡಿಯೋ ಸಾಂಗ್ ರಿಲೀಸ್ – ರೊಮ್ಯಾಂಟಿಕ್ ಹಾಡಿಗೆ ನೆಟ್ಟಿಗರು ಫಿದಾ..!

‘ಟಾಕ್ಸಿಕ್’ ಚಿತ್ರದ ಮೊದಲ ವಿಡಿಯೋ ಸಾಂಗ್ ಬಿಡುಗಡೆಯಾಗಿದೆ. ‘ತಬಾಹಿ‘ ಲಿರಿಕಲ್ ಸಾಂಗ್ ಈಗಾಗಲೇ ರಿಲೀಸ್ ಆಗಿದ್ದು, ಇದೀಗ ವಿಡಿಯೋ ಸಾಂಗ್ ಅಭಿಮಾನಿಗಳ ಮುಂದೆ ಬಂದಿದೆ. ನಟ ಯಶ್ ಹಾಗೂ ನಟಿ ಕಿಯಾರಾ ಅಡ್ವಾಣಿ ಜೋಡಿಯ ಈ ರೊಮ್ಯಾಂಟಿಕ್ ಹಾಡು ಸೋಷಿಯಲ್ ಮೀಡಿಯಾದಲ್ಲಿ ಭಾರೀ ಸದ್ದು ಮಾಡುತ್ತಿದೆ. ನಾಲ್ಕು ಭಾಷೆಗಳಲ್ಲಿ ಬಿಡುಗಡೆಯಾಗಿರುವ ಈ ಹಾಡಿನಲ್ಲಿ ಯಶ್ ಹಾಗೂ ಕಿಯಾರಾ ಕೆಮಿಸ್ಟ್ರಿ ಹೈಲೈಟ್ ಆಗಿದೆ. ಗ್ಯಾಂಗ್‌ಸ್ಟರ್ ಪ್ರೀತಿಯ ಕಥೆಯನ್ನು ಈ ಹಾಡು ರೊಮ್ಯಾಂಟಿಕ್ ರೀತಿಯಲ್ಲಿ ತೆರೆದಿಡುತ್ತದೆ. ಸಾಮಾನ್ಯ ಲವ್ ಸಾಂಗ್‌ಗಿಂತ ಇದು ಸ್ವಲ್ಪ ಬೋಲ್ಡ್ ಆಗಿ ಮೂಡಿಬಂದಿದೆ.

ಹಾಡಿಗೆ ವಿಶಾಲ್ ಮಿಶ್ರಾ ಸಂಗೀತ ಸಂಯೋಜನೆ ಮಾಡಿದ್ದು, ಅವರೇ ಹಿನ್ನೆಲೆ ಗಾಯನವನ್ನೂ ನೀಡಿದ್ದಾರೆ. ಕನ್ನಡದಲ್ಲಿ ಯೋಗರಾಜ್ ಭಟ್ ಸಾಹಿತ್ಯ ಬರೆದಿದ್ದು, ಇತರೆ ಭಾಷೆಗಳಲ್ಲಿ ಆಯಾ ಚಿತ್ರರಂಗದ ಖ್ಯಾತ ಗೀತರಚನೆಕಾರರು ಸಾಹಿತ್ಯ ರಚಿಸಿದ್ದಾರೆ. ‘ತಬಾಹಿ’ ಎಂಬುದು ಸಾಂಪ್ರದಾಯಿಕ ಪ್ರೀತಿಯ ಅರ್ಥವನ್ನು ಹೇಳುವ ಪದವಲ್ಲ ಎಂದು ವಿಶಾಲ್ ಮಿಶ್ರಾ ಹೇಳಿದ್ದಾರೆ. ಭಗ್ನ ಪ್ರೀತಿ, ಸಂಪೂರ್ಣ ಶರಣಾಗತಿ ಹಾಗೂ ಅನುಮತಿ ಕೇಳದೆ ಉಕ್ಕುವ ಭಾವನೆಗಳ ತೀವ್ರತೆಯನ್ನು ಈ ಹಾಡು ಪ್ರತಿಬಿಂಬಿಸುತ್ತದೆ. ಉರ್ದು ಹಾಗೂ ಹಿಂದಿಯಲ್ಲಿ ‘ತಬಾಹಿ’ ಎಂದರೆ ವಿನಾಶ ಎಂಬ ಅರ್ಥವೂ ಇದೆ.

ಈ ಹಾಡು ಸಾಮಾನ್ಯ ಡ್ಯುಯೆಟ್ ಆಗಿರದೆ, ಮಾಂಟೇಜ್ ಶೈಲಿಯಲ್ಲಿ ಮೂಡಿಬಂದಿದೆ. ಭಾವನಾತ್ಮಕ ಹಾಗೂ ರೊಮ್ಯಾಂಟಿಕ್ ದೃಶ್ಯಗಳು ಹಾಡಿನ ಪ್ರಮುಖ ಆಕರ್ಷಣೆಯಾಗಿವೆ. ಸ್ವಾರ್ಥಿ ಎಂದು ಕರೆಸಿಕೊಳ್ಳುವ ನಾಯಕನ ಬದುಕಿನಲ್ಲಿ ಪ್ರೀತಿಯನ್ನು ತರುವ ಯುವತಿಯಾಗಿ ಕಿಯಾರಾ ಕಾಣಿಸಿಕೊಂಡಿದ್ದಾರೆ. ಯಶ್ ರಗಡ್ ಲುಕ್‌ನಲ್ಲಿ ಪ್ರೀತಿಗೆ ಹಾತೊರೆಯುವ ವ್ಯಕ್ತಿಯಾಗಿ ಮಿಂಚಿದ್ದರೆ, ಕಿಯಾರಾ ಗ್ಲಾಮರಸ್ ಲುಕ್‌ನಲ್ಲಿ ಗಮನ ಸೆಳೆದಿದ್ದಾರೆ. ಹಾಡಿನ ವಿಡಿಯೋದಲ್ಲಿ ನಯನತಾರಾ ಹಾಗೂ ತಾರಾ ಸುತಾರಿಯಾ ಕೂಡ ಕಾಣಿಸಿಕೊಂಡಿದ್ದಾರೆ. ಒಟ್ಟಿನಲ್ಲಿ, ‘ಟಾಕ್ಸಿಕ್’ ಚಿತ್ರದ ಮೊದಲ ವಿಡಿಯೋ ಸಾಂಗ್ ಈಗ ಸಿನಿಪ್ರಿಯರ ನಡುವೆ ಭಾರೀ ಚರ್ಚೆಗೆ ಕಾರಣವಾಗಿದೆ. ಇದನ್ನೂ ಓದಿ : ಪರ್ಯಾಯ SIR​ಗೆ ಆದೇಶಿಸಿದ್ದ ಚುನಾವಣಾ ಆಯೋಗಕ್ಕೆ ಹೈಕೋರ್ಟ್​ ನೋಟಿಸ್..!

Related posts

ಕಾವೇರಿ ಆತಂಕ; ಕುಡಿಯುವ ನೀರಿನ ಬಳಕೆಗೆ ಹೊಸ ಮಾರ್ಗಸೂಚಿಗೆ ಜಲಮಂಡಳಿ ಸಿದ್ಧತೆ..!

Kalpana Editor

ಬಿಎಂಟಿಸಿ ಚಾಲಕನಿಗೆ ಅಪಘಾತ, ಪರಿಹಾರಕ್ಕೆ ಆಗ್ರಹಿಸಿ; ಡಿಪೋ ಸಿಬ್ಬಂದಿ ಪ್ರತಿಭಟನೆ..!

Kalpana Editor

ಚಾಮರಾಜನಗರದಲ್ಲಿ ನಟ/ಸಿಎಂ ವಿಜಯ್ ಅಭಿನಯದ ‘ಜನನಾಯಗನ್’ ಸಿನಿಮಾ ಎತ್ತಂಗಡಿ..!

Kalpana Editor