August 27, 2026
kranthikidi.com
ತಾಜಾಸುದ್ದಿರಾಜ್ಯ

ವಿಕಾಸಸೌಧದ ಕ್ಯಾಂಟೀನ್ ಮೇಲೆ ಆಹಾರ ಇಲಾಖೆ ದಾಳಿ..!

ಬೆಂಗಳೂರು : ನಗರದಲ್ಲಿ ಕೆಲ ದಿನಗಳಿಂದ ಆಹಾರ ಇಲಾಖೆ ಅಧಿಕಾರಿಗಳ ದಾಳಿ ಮುಂದುವರೆದಿದ್ದು ಇಂದು ವಿಕಾಸಸೌಧದ ಮೊದಲ ಮಹಡಿಯಲ್ಲಿರುವ ಕ್ಯಾಂಟೀನ್ ಮೇಲೆ ದಾಳಿ ಮಾಡಿದ್ದಾರೆ. ಈ ವೇಳೆ ತಟ್ಟೆಗಳನ್ನು ಶೇಖರಿಸಿಡುವ ಜಾಗದಲ್ಲಿ ಜಿರಳೆಗಳು ಮತ್ತು ಗ್ರಾಹಕರಿಗೆ ಆಹಾರ ನೀಡುವ ಅಡಕೆ ಪ್ಲೇಟ್‌ಗಳ ಮೇಲೆ ಫಂಗಸ್ ಪತ್ತೆಯಾಗಿದೆ.

ಕ್ಯಾಂಟೀನ್ ಅನ್ನು ಸೀಜ್ ಮಾಡಲಾಗಿದೆ. ಆಹಾರ ಪದಾರ್ಥಗಳ ಗುಣಮಟ್ಟದಲ್ಲಿ ಲೋಪ, ಸ್ವಚ್ಛತೆಯ ಕೊರತೆ, ಅವಧಿ ಮುಗಿದ ಪದಾರ್ಥಗಳ ಬಳಕೆ ಹಾಗೂ ನಿಯಮಿತವಾಗಿ ಪೆಸ್ಟ್ ಕಂಟ್ರೋಲ್ ಮಾಡದಿರುವುದು ಸೇರಿದಂತೆ ವಿವಿಧ ನಿಯಮ ಉಲ್ಲಂಘನೆಗಳು ಕಂಡುಬಂದ ಕಾರಣ ಆಹಾರ ಇಲಾಖೆ ಅಧಿಕಾರಿಗಳು ಕ್ಯಾಂಟೀನ್‌ಗೆ ಬೀಗ ಜಡಿದಿದ್ದು, ಸ್ಥಳದಲ್ಲಿ ‘ತಾತ್ಕಾಲಿಕವಾಗಿ ಕ್ಯಾಂಟೀನ್ ಬಂದ್’ ಎಂಬ ನಾಮಫಲಕವನ್ನು ಅಳವಡಿಸಿದ್ದಾರೆ. ಇದನ್ನೂ ಓದಿ : ಕಾರಾಗೃಹ ವ್ಯವಸ್ಥೆಯ ಲೋಪದಲ್ಲಿ ಯಾರೇ ಇದ್ದರೂ ಅವರ ಮೇಲೆ ಕ್ರಮ; ಪ್ರಿಯಾಂಕ್ ಖರ್ಗೆ

Related posts

ವಾಹನ ಸವಾರರಿಗೆ ಮತ್ತೊಂದು ಜೀವಭಯ ಎದರು; ಯಶವಂತಪುರ-ತುಮಕೂರು ರಸ್ತೆಯ ಮೇಲ್ಸೇತುವೆ ಶಿಥಿಲಾವಸ್ಥೆ..!

Kalpana Editor

ಪಡಿತರದಾರರಿಗೆ ಸರ್ಕಾರ ಶಾಕ್: 14 ಸಾವಿರ ಬಿಪಿಎಲ್ ಕಾರ್ಡ್ ರದ್ದು..!

kknewskannada1987@gmail.com

ಡ್ರಗ್ಸ್‌ ನೀಡಿ ಮಹಿಳೆ ಮೇಲೆ ಅತ್ಯಾಚಾರ, ಬಲವಂತದ ಮತಾಂತರ – ಇಬ್ಬರು ಬಂಧನ..!

Kalpana Editor