21.9 C
ಬೆಂಗಳೂರು
October 10, 2026
kranthikidi.com
ತಾಜಾಸುದ್ದಿರಾಜ್ಯ

ಪಾದಚಾರಿ ಮಾರ್ಗ ಒತ್ತುವರಿ ತೆರವು ಕಾರ್ಯಾಚರಣೆ: ಪಶ್ಚಿಮ ಪಾಲಿಕೆ ವ್ಯಾಪ್ತಿಯಲ್ಲಿ ಇಂದು ಪ್ರಗತಿ..!

ಬೆಂಗಳೂರು : ಸಾರ್ವಜನಿಕರ ಸುರಕ್ಷಿತ ಹಾಗೂ ಸುಗಮ ಸಂಚಾರಕ್ಕೆ ಅನುಕೂಲ ಕಲ್ಪಿಸುವ ದೃಷ್ಟಿಯಿಂದ, ಮಾನ್ಯ ಗ್ರೇಟರ್ ಬೆಂಗಳೂರು ಅಭಿವೃದ್ಧಿ ಸಚಿವರಾದ ಕೃಷ್ಣ ಬೈರೇಗೌಡ ರವರ ಆದೇಶ ಹಾಗೂ ಬೆಂಗಳೂರು ಪಶ್ಚಿಮ ನಗರ ಪಾಲಿಕೆ ಆಯುಕ್ತರಾದ ಡಾ. ರಾಜೇಂದ್ರ ಕೆ.ವಿ. ರವರ ನಿರ್ದೇಶನ ಪ್ರಕಾರ ಪಾಲಿಕೆ ವ್ಯಾಪ್ತಿಯಲ್ಲಿ ಪಾದಚಾರಿ ಮಾರ್ಗ ಒತ್ತುವರಿ ತೆರವು ಕಾರ್ಯಾಚರಣೆ ಪ್ರಗತಿಯಲ್ಲಿದ್ದು, ಇಂದು 14.80 ಕಿ.ಮೀ.ನಷ್ಟು ಒತ್ತುವರಿ ತೆರವು ನಡೆಸಲಾಗಿದೆ.

ಪಾಲಿಕೆ ವ್ಯಾಪ್ತಿಯ ವಿವಿಧ ಆರ್ಟೀರಿಯಲ್ ಹಾಗೂ ಸಬ್ ಆರ್ಟೀರಿಯಲ್ ರಸ್ತೆಗಳ ವಿವಿಧ ಪಾದಚಾರಿ ಮಾರ್ಗಗಳಲ್ಲಿನ ಅನಧಿಕೃತ ಒತ್ತುವರಿಗಳನ್ನು ಸಂಚಾರ ಹಾಗೂ ಕಾನೂನು ಸುವ್ಯವಸ್ಥೆಯ ಪೊಲೀಸ್ ವಿಭಾಗದ ಅಧಿಕಾರಿ ಸೇರಿದಂತೆ ಇತರೆ ಇಲಾಖೆಗಳ ಸಹಯೋಗದೊಂದಿಗೆ ಇಂದು ಬೆಳಗ್ಗೆಯಿಂದ ತೆರವುಗೊಳಿಸಲಾಗಿದ್ದು, ಈ ವೇಳೆ, 19 ಪೆಟ್ಟಿ ಶಾಪ್‌, 24 ತಳ್ಳುಗಾಡಿ, 23 ಎಸಿ ಶೀಟ್ಸ್ ಪ್ರೊಜೆಕ್ಷನ್ಸ್/‌ ಕ್ಯಾನೊಪಿ, 37 ಮೆಟ್ಟಿಲು ಮತ್ತು ರ್ಯಾಂಪ್‌, 82 ಜಾಹಿರಾತು ಪಿಲ್ಲರ್‌ ಮತ್ತು ಬೋರ್ಡ್‌ಗಳು, 1 ತಾತ್ಕಾಲಿಕ/ ಶಾಶ್ವತ ಶೆಡ್‌, 11.55 ಟನ್‌ನಷ್ಟು ಕಟ್ಟಡ ತ್ಯಾಜ್ಯ/ತ್ಯಾಜ್ಯ ತೆರವುಗೊಳಿಸಲಾಗಿದೆ.

ಒತ್ತುವರಿ ತೆರವು ಕಾರ್ಯಾಚರಣೆ ವಿವರ – ಕೆಂಗೇರಿ ವಿಭಾಗದ ಆರನೇ ಮುಖ್ಯ ರಸ್ತೆ: ಬೆಳಕು ಆಸ್ಪತ್ರೆ – ರಾಬಿನ್‌ ಥಿಯೇಟರ್‌: 1.5 ಕಿ.ಮೀ.; ಈಸ್ಟ್‌ ವೆಸ್ಟ್‌ ಕಾಲೇಜು ರಸ್ತೆ, ಹೆರೋಹಳ್ಳಿ- 1 ಕಿ.ಮೀ. ಹೆಗ್ಗನಹಳ್ಳಿ ವಿಭಾಗದಲ್ಲಿ ಟಿವಿಎಸ್ ಅಡ್ಡರಸ್ತೆಯಿಂದ ಡೈನಮ್ಯಾಟಿಕ್ ಸರ್ಕಲ್‌ – 1 ಕಿ.ಮೀ. ಮಲ್ಲೇಶ್ವರಂ ವಿಭಾಗದಲ್ಲಿ 11ನೇ ಅಡ್ಡ ರಸ್ತೆ: ಕೆನರಾ ಬ್ಯಾಂಕ್‌ – ಸೆಕೆಂಡ್‌ ಮೇನ್‌ – 1.5 ಕಿ.ಮೀ.

ರಾಜಾಜಿನಗರ ವಿಭಾಗದಲ್ಲಿ ಬಸವೇಶ್ವರನಗರ 8ನೇ ಮುಖ್ಯ ರಸ್ತೆ: ಸಿದ್ದಯ್ಯ ಪುರಾಣಿಕ ರಸ್ತೆ – ಅಂಬಾ ಮಹೇಶ್ವರಿ ರಸ್ತೆ – 0.8 ಕಿ.ಮೀ., ಬಸವನಗುಡಿ ವಿಭಾಗದಲ್ಲಿ ವಿದ್ಯಾಪೀಠ ಮುಖ್ಯ ರಸ್ತೆ: ಶ್ರೀಕಂಠೇಶ್ವರ ವೃತ್ತ – ಕಾಮಾಖ್ಯ ಸಿಗ್ನಲ್‌ – 1 ಕಿ.ಮೀ.; ಲಕ್ಷ್ಮೀಪುರ ಮುಖ್ಯ ರಸ್ತೆ: ನಾರಾಯಣಸ್ವಾಮಿ ವೃತ್ತ – ಜಿಂಕೆ ಪಾರ್ಕ್‌ – 1.5 ಕಿ.ಮೀ. ಗೋವಿಂದರಾಜನಗರ ವಿಭಾಗದಲ್ಲಿ ರಾಜಾಜಿನಗರ 6ನೇ ಬ್ಲಾಕ್‌ – 1 ಕಿ.ಮೀ.

ಚಂದ್ರ ಲೇಔಟ್‌ ಉಪ ವಿಭಾಗದಲ್ಲಿ ಚಂದ್ರ ಲೇಔಟ್‌: ಹೊರವರ್ತುಲ ರಸ್ತೆಯ ಬಲ ಸರ್ವೀಸ್‌ ರಸ್ತೆ (ನಾಯಂಡಹಳ್ಳಿ ಅಂಡರ್‌ ಪಾಸ್‌) – ನಾಗರಬಾವಿ ವೃತ್ತ – 0.9 ಕಿ.ಮೀ. ಯಡಿಯೂರು ವಿಭಾಗದಲ್ಲಿ ಚಿಕ್ಕಲಸಂದ್ರ ವಾರ್ಡ್‌-183: ಬ್ರ್ಯಾಂಡ್‌ ಫ್ಯಾಕ್ಟರಿ 100 ಫೀಟ್‌ ಹೊರ ವರ್ತುಲ ರಸ್ತೆ – ಇಟ್ಟಮಡು ಸಿಗ್ನಲ್‌; ಗಣೇಶಮಂದಿರ ವಾರ್ಡ್‌ – 165 ಸುಬ್ರಹ್ಮಣ್ಯಪುರ ರಸ್ತೆ: 9ನೇ ಮುಖ್ಯ ರಸ್ತೆ – ಬನಶಂಕರಿ ಬಸ್‌ ನಿಲ್ದಾಣ – 1.40 ಕಿ.ಮೀ.; ವಾರ್ಡ್‌ – 161 ಹೊಸಕೆರೆಹಳ್ಳಿ ಹೊರ ವರ್ತುಲ ರಸ್ತೆ: ಜನತಾ ಬಜಾರ್‌ ಸಿಗ್ನಲ್‌ – ಪಿಇಎಸ್‌ ಕಾಲೇಜು – 0.85 ಕಿ.ಮೀ.;

ಯಡಿಯೂರು ಉಪ ವಿಭಾಗದಲ್ಲಿ ಸೌತ್‌ ಎಂಡ್‌ ರಸ್ತೆ: ವೈಭವ್‌ ವೃತ್ತ – ಸೌತ್‌ ಎಂಡ್‌ ವೃತ್ತ – 0.15 ಕಿ.ಮೀ. ವಿಜಯನಗರ (ವಿಜಯನಗರ ಉಪವಿಭಾಗ)ದಲ್ಲಿ ವೆಸ್ಟ್‌ ಆಫ್‌ ಕಾರ್ಡ್‌ ರೋಡ್‌, ಸರ್ವಿಸ್‌ ರಸ್ತೆ: 4ನೇ ಮೇನ್, ಕದಂಬ ಹೋಟೆಲ್‌ – ಕ್ಲಬ್‌ ರಸ್ತೆ, ಪಾಲಿಕೆ ಬಜಾರ್‌ – 0.7 ಕಿ.ಮೀ.; 5ನೇ ಮೇನ್‌, ಬೈಟುಕಾಫಿ ರಸ್ತೆ: ಕಾರ್ಡ್‌ ರಸ್ತೆ ಸಿಗ್ನಲ್‌ – ಪೈಪ್‌ಲೈನ್‌ ರಸ್ತೆ- 1.2 ಕಿ.ಮೀ. ರಾಜರಾಜೇಶ್ವರಿನಗರ ವಿಭಾಗದಲ್ಲಿ ಹೊರ ವರ್ತುಲ ರಸ್ತೆ: ಮಲ್ಲತಹಳ್ಳಿ ಬಸ್ ನಿಲ್ದಾಣ – ದೀಪಾ ಕಾಂಪ್ಲೆಕ್ಸ್ ಬಸ್ ನಿಲ್ದಾಣ – 1.5 ಕಿ.ಮೀ. ಇದನ್ನೂ ಓದಿ : ಜಿಲ್ಲೆಯಲ್ಲಿ ನಿರಂತರ ಮಳೆ; ಜಲಾವೃತ ಸೇತುವೆಯಿಂದ ಗ್ರಾಮಕ್ಕೆ ಸಂಪರ್ಕ ಕಡಿತ..!

Related posts

ಹಳಿ ಮೇಲಿನ ಮಣ್ಣು ತೆರವು ಪೂರ್ಣ; ಸಕಲೇಶಪುರ ಮಾರ್ಗದಲ್ಲಿ ರೈಲು ಸಂಚಾರ ಆರಂಭ..!

kknewskannada1987@gmail.com

‘ದೊಡ್ಡಣ್ಣ ನಿಧನ’ ಅಂತ ಸುಳ್ಳು ಸುದ್ದಿ ಹಬ್ಬಿಸಿದವರಿಗೆ ನಡುಕ; ದೂರು ದಾಖಲು

Kalpana Editor

ಡೀಸೆಲ್-ಪೆಟ್ರೋಲ್ ಬೆಲೆ ಏರಿಕೆ; ಕೇಂದ್ರ ಬಿಜೆಪಿ ಸರ್ಕಾರದ ವಿರುದ್ಧ ಆಮ್ ಆದ್ಮಿ ಪಕ್ಷದ ಪ್ರತಿಭಟನೆ..!

Kalpana Editor