20.9 C
ಬೆಂಗಳೂರು
September 21, 2026
kranthikidi.com
ತಾಜಾಸುದ್ದಿರಾಜ್ಯ

ಸಾಗಿಸುತ್ತಿದ್ದ ಲಾರಿ ಪಲ್ಟಿ – 15 ಲಕ್ಷ ಮೌಲ್ಯದ ಮದ್ಯ ಮಣ್ಣುಪಾಲು..!

ಹಾಸನ : ದೊಡ್ಡಪುರ ಗ್ರಾಮದ ಬಳಿ ಬಿಯರ್ ಸಾಗಿಸುತ್ತಿದ್ದ, ಲಾರಿ ಪಲ್ಟಿಯಾಗಿ ಸುಮಾರು 15 ಲಕ್ಷ ರೂ. ಮೌಲ್ಯದ ಮದ್ಯ ಮಣ್ಣುಪಾಲಾಗಿದೆ. ಹಾಸನ ನಗರದ ಕೈಗಾರಿಕಾಭಿವೃದ್ಧಿ ಪ್ರದೇಶದಲ್ಲಿರುವ ವುಡ್ ಪಿಕರ್ ಕಂಪನಿಯಿಂದ ಕೊಪ್ಪಳಕ್ಕೆ 1100 ಬಿಯರ್ ಬಾಟಲ್ ತುಂಬಿದ ಲಾರಿ ತೆರಳುತ್ತಿತ್ತು. ದೊಡ್ಡಪುರ ಗ್ರಾಮದ ಬಳಿ ಲಾರಿಯ ಟೈಯರ್ ಬ್ಲಾಸ್ಟ್ ಆಗಿ, ಚಾಲಕನ ನಿಯಂತ್ರಣ ತಪ್ಪಿ ಡಿವೈಡರ್ ಮೇಲೆ ಹತ್ತಿ ಪಲ್ಟಿಯಾಗಿದೆ.

ಲೆಜೆಂಡ್, ರಾಯಲ್, ಪವರ್ ಕೂಲ್, ಸನ್ನಿ ಬೀಚಸ್ ಕಂಪನಿಯ ಬಿಯರ್‌ಗಳು ಬಾಟೆಲ್‌ಗಳು , ಟಿನ್‌ಗಳು ರಸ್ತೆಯಲ್ಲೆಲ್ಲಾ ಚೆಲ್ಲಾಡಿವೆ. ಒಂದು ಬದಿಯ ರಸ್ತೆ ಸಂಚಾರ ಸಂಪೂರ್ಣ ಬಂದ್ ಆಗಿದೆ. ಈ ಸ್ಥಳಕ್ಕೆ ಹಾಸನ ಗ್ರಾಮಾಂತರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇದನ್ನೂ ಓದಿ : ಪ್ರಶ್ನೆಪತ್ರಿಕೆ ಸೋರಿಕೆಗೆ ಕಠಿಣ ಕಾಯ್ದೆ; 10 ವರ್ಷ ಜೈಲು, 1 ಕೋಟಿ ದಂಡಕ್ಕೆ ಕೇಂದ್ರ ಸಿದ್ಧತೆ..!

Related posts

ಮಂಗಳೂರಿನಲ್ಲಿ ಪದವೀಧರರಿಗೆ ಉತ್ತಮ ಉದ್ಯೋಗಾವಕಾಶ; ನೇರ ಸಂದರ್ಶನ..!

Kalpana Editor

ಬಾಂಗ್ಲಾದೇಶೀಯರಿಗೆ ದಾಖಲೆ ನೀಡುತ್ತಿರುವ ಆರೋಪ, ಕಾಲ್ತುಳಿತ ಪ್ರಕರಣಕ್ಕೆ ಸಿಬಿಐ ತನಿಖೆ ಆಗ್ರಹ; ಆರ್‌.ಅಶೋಕ್

Kalpana Editor

ಚೆನ್ನಮ್ಮ ನನಗೆ ತಾಯಿ ಸಮಾನರು; ದೇವೇಗೌಡರ ಪತ್ನಿ ನಿಧನಕ್ಕೆ ಬೊಮ್ಮಾಯಿ ಸಂತಾಪ..!

Kalpana Editor