22.3 C
ಬೆಂಗಳೂರು
October 9, 2026
kranthikidi.com
ತಾಜಾಸುದ್ದಿದೇಶ

ಟಾಟಾ ಸನ್ಸ್ ಅಧ್ಯಕ್ಷ ಸ್ಥಾನಕ್ಕೆ ಎನ್. ಚಂದ್ರಶೇಖರನ್ ದಿಢೀರ್‌ ರಾಜೀನಾಮೆ..!

ಮುಂಬೈ : ಟಾಟಾ ಸನ್ಸ್ ಕಾರ್ಯಾಧ್ಯಕ್ಷ ಎನ್. ಚಂದ್ರಶೇಖರನ್ ಅವರು ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ. ಪ್ರಸ್ತುತ ಅವಧಿ ಪೂರ್ಣಗೊಂಡ ನಂತರ ಮರುನೇಮಕಗೊಳ್ಳಲು ತಾನು ಬಯಸುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಆಗಸ್ಟ್ 18 ರಂದು ನಡೆಯಲಿರುವ ಟಾಟಾ ಸನ್ಸ್ ವರ್ಷಿಕ ಮಹಾಸಭೆಗೂ ಮುನ್ನವೇ ಈ ಮಹತ್ವದ ಬೆಳವಣಿಗೆ ನಡೆದಿದೆ.

2027ರ ಫೆಬ್ರವರಿವರೆಗೆ ಚಂದ್ರಶೇಖರನ್ ಅವರ ಅಧಿಕಾರವಧಿ ಇದೆ. ಆಗಸ್ಟ್ 18ರ ಎಜಿಎಂ ಸಭೆಯಲ್ಲಿ ಅವರ ಮರುನೇಮಕದ ಕುರಿತು ಪಾಲುದಾರರು ಮತದಾನ ಮಾಡಬೇಕಿತ್ತು. ಈ ಪ್ರಕ್ರಿಯೆ ನಡೆಯುವ ಮೊದಲೇ ಚಂದ್ರಶೇಖರನ್ ಅವರು ರಾಜೀನಾಮೆ ಸಲ್ಲಿಸಿದ್ದಾರೆ. ಈಗ ರಾಜೀನಾಮೆ ಸಲ್ಲಿಸಿದ್ದರೂ ಮುಂದಿನ ಫೆಬ್ರವರಿವರೆಗೆ ಚಂದ್ರಶೇಖರ್‌ ಅವರು ಹುದ್ದೆಯಲ್ಲಿ ಮುಂದುವರಿಯಲಿದ್ದಾರೆ. ಟಾಟಾ ಸಮೂಹದ ದತ್ತಿ ಸಂಸ್ಥೆಯಾದ ‘ಟಾಟಾ ಟ್ರಸ್ಟ್ಸ್’ ಅಧ್ಯಕ್ಷ ನೋಯೆಲ್ ಟಾಟಾ ಅವರು ಚಂದ್ರಶೇಖರನ್ ಮರುನೇಮಕಕ್ಕೆ ವಿರೋಧ ವ್ಯಕ್ತಪಡಿಸಿದ್ದರು. ಇದನ್ನೂ ಓದಿ : ನಟ ಪ್ರಕಾಶ್ ರಾಜ್ ವಿಳಾಸದಲ್ಲಿ ನೆಲೆಸಿಲ್ಲ, ಎಸ್‌ಐಆರ್‌ ಆರೋಪ ಸತ್ಯಕ್ಕೆ ದೂರ; ಕೇಂದ್ರ ನಗರ ಪಾಲಿಕೆ ಸ್ಪಷ್ಟನೆ..!

Related posts

ರಿಲ್ಯಾಕ್ಸ್‌ ಮೂಡ್‌ಗೆ ಜಾರಿದ ತಂದೆ-ಮಗ; ಕೊಡಗಿನ ರೆಸಾರ್ಟ್‌ನಲ್ಲಿ ಜಾಲಿ..!

Kalpana Editor

ನಾಳೆಯಿಂದ (ಜು.13) ಬರಪೀಡಿತ ಪ್ರದೇಶಗಳಿಗೆ ನಿಖಿಲ್ ಕುಮಾರಸ್ವಾಮಿ ಭೇಟಿ..!

Kalpana Editor

ಬಿಡದಿ ಟೌನ್‌ಶಿಪ್‌ ಜಟಾಪಟಿ; ಸರ್ವೆಗೆ ಬಂದ ಅಧಿಕಾರಿಗಳಿಗೆ ವಿರುದ್ಧ ರೈತರು ಆಕ್ರೋಶ..!

Kalpana Editor