28.4 C
ಬೆಂಗಳೂರು
October 5, 2026
kranthikidi.com
ಕ್ರೈಂತಾಜಾಸುದ್ದಿರಾಜ್ಯ

ಬೆಂಗಳೂರು ವಿಮಾನ ನಿಲ್ದಾಣದಲ್ಲಿ 4.22 ಕೋಟಿ ಮೌಲ್ಯದ ಮಾದಕ ವಸ್ತು ವಶ..!

ದೇವನಹಳ್ಳಿ : ಪ್ರಯಾಣಿಕನೋರ್ವ ವಿದೇಶದಿಂದ ತಂದಿದ್ದ ಕೋಟ್ಯಾಂತರ ರೂಪಾಯಿ ಮೌಲ್ಯದ ಮಾದಕ ವಸ್ತುವನ್ನು ಕಸ್ಟಮ್ಸ್​​ ಅಧಿಕಾರಿಗಳು ವಶಪಡಿಸಿಕೊಂಡಿರುವ ಘಟನೆ ಬೆಂಗಳೂರು ಗ್ರಾಮಾಂತರದ ದೇವನಹಳ್ಳಿ ಬಳಿಯ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಡೆದಿದೆ. 12.07 ಕೆಜಿ ಹೈಡ್ರೋಪೋನಿಕ್ ಗಾಂಜಾವನ್ನು ವಶಪಡಿಸಿಕೊಳ್ಳಲಾಗಿದ್ದು, ಎನ್​​ಡಿಪಿಎಸ್​​ ಕಾಯ್ದೆಯಡಿ ಆರೋಪಿಯನ್ನು ಬಂಧಿಸಿರೋದಾಗಿ ಅಧಿಕಾರಿಗಳು ತಿಳಿಸಿದ್ದಾರೆ.

ಇನ್ನು ಬಂಧಿತ ಆರೋಪಿಯಿಂದ ವಶಪಡಿಸಿಕೊಳ್ಳಲಾಗಿರುವ ಹೈಡ್ರೋಪೋನಿಕ್ ಗಾಂಜಾದ ಮೌಲ್ಯ ಸುಮಾರು 4 ಕೋಟಿ 22 ಲಕ್ಷ ರೂಪಾಯಿಗಳು ಎನ್ನಲಾಗಿದೆ. ಬ್ಯಾಂಕಾಕ್​​ನಿಂದ ಬೆಂಗಳೂರಿಗೆ ಬಂದಿದ್ದ ಪ್ರಯಾಣಿಕ ಲಗೇಜ್ ಬ್ಯಾಗ್​​ನಲ್ಲ ಮಾದಕ ವಸ್ತುವನ್ನು ಅಡಗಿಸಿಟ್ಟುಕೊಂಡು ಬರುವ ಮೂಲಕ ಸಾಗಾಟ ಯತ್ನ ನಡೆಸಿದ್ದ. ಆದರೆ ಏರ್​​ಪೋರ್ಟ್​​ಬಲ್ಲಿ ಪ್ರಯಾಣಿಕರ ತಪಾಸಣೆ ವೇಳೆ ಗಾಂಜಾವನ್ನು ಅದಿಕಾರಿಗಳು ಪತ್ತೆಹಚ್ಚಿದ್ದಾರೆ.

ಜೂನ್​​ 26ರಂದು ಬ್ಯಾಂಕಾಕ್‌ನಿಂದ ಬಂದ ಪ್ರಯಾಣಿಕನ ಬ್ಯಾಗೇಜ್‌ನಲ್ಲಿ 2.086 ಕೋಟಿ ರೂಪಾಯಿ ಮೌಲ್ಯದ 5.960 ಕೆಜಿ ಹೈಡ್ರೋಪೊನಿಕ್ ಗಾಂಜಾ ಪತ್ತೆ ಮಾಡಿದ್ದರು. ಇನ್ನೊಂದು ಪ್ರತ್ಯೇಕ ಕಾರ್ಯಾಚರಣೆಯಲ್ಲಿ, ಪ್ರಯಾಣಿಕನಿಂದ ಅಂದಾಜು 5.58 ಕೋಟಿ. ಮೌಲ್ಯದ 6.98 ಕೆಜಿ ಮೆಸ್ಕಲಿನ್ ಮಾದಕ ವಸ್ತುವನ್ನು ವಶಪಡಿಸಿಕೊಂಡು, ಎರಡೂ ಪ್ರಕರಣಗಳ ಸಂಬಂಧ ಆರೋಪಿಗಳನ್ನು ಬಂಧಿಸಿದ್ದರು. ಜೂ. 17ರಂದು ಪ್ರಯಾಣಿಕನಿಂದ 5.43 ಕೋಟಿ ಮೌಲ್ಯದ 15.520 ಕೆಜಿ ಹೈಡ್ರೋಪೊನಿಕ್ ಗಾಂಜಾ ಮತ್ತು ಜೂ. 29ರಂದು ಬ್ಯಾಂಕಾಕ್‌ನಿಂದ ಆಗಮಿಸಿದ್ದ ಪ್ರಯಾಣಿಕನೋರ್ವನಿಂದ 8.00 ಕೆಜಿ ತೂಕವಿರುವ 2.80 ಕೋಟಿ ಮೌಲ್ಯದ ಮಾದಕ ವಸ್ತುವನ್ನು ಜಪ್ತಿ ಮಾಡಿದ್ದರು.

Related posts

ಕುಟುಂಬದ ಜೊತೆ ‘ಜನ ನಾಯಗನ್’ ಸಿನಿಮಾ ನೋಡಿ ಎಂಜಾಯ್ ಮಾಡಿದ ನಟಿ ತ್ರಿಷಾ

Kalpana Editor

ಮನೆಯಲ್ಲೇ ಸುಲಭವಾಗಿ ಮಾಡಿ ಕೇರಳ ಶೈಲಿಯ ಫಿಶ್ ಫ್ರೈ

Kalpana Editor

ಕಾವೇರಿ ನೀರು ನಿರ್ವಹಣೆ; ಸರ್ಕಾರದ ಧೋರಣೆಗೆ ತೀವ್ರ ಅಸಮಾಧಾನ – ಬಸವರಾಜ ಬೊಮ್ಮಾಯಿ

Kalpana Editor