ಕೇರಳ ಅಂದ್ರೆ ಮೀನಿನ ರೆಸಿಪಿಗೆ ಫೇಮಸ್. ಕೇರಳಕ್ಕೆ ಹೋದ ನಾನ್ವೆಜ್ ಪ್ರಿಯರು ‘ಫಿಶ್ ಫ್ರೈ’ ತಿನ್ನದೆ ಬರಲ್ಲ. ಆದ್ರೆ ಈ ಕೆರಳ ಶೈಲಿಯ ಫಿಶ್ ತಿನ್ನೋಕೆ ನೀವು ಅಲ್ಲಿಗೇ ಹೋಗಬೇಕಿಲ್ಲ, ಮನೆಯಲ್ಲೇ ಸುಲಭವಾಗಿ ಮಾಡಬಹುದು. ಒಮ್ಮೆ ಅದರ ರುಚಿ ನೋಡಿದ್ರೆ ಮತ್ತೆ ಮತ್ತೆ ಅದೇ ಕೇಳೋದಂತೂ ಖಂಡಿತ. ಅದಕ್ಕೆ ನಾವು ಕೇರಳ ಶೈಲಿಯಲ್ಲಿ ಸಿಂಪಲ್ ಆಗಿ ‘ಫಿಶ್ ಫ್ರೈ’ ಮಾಡುವುದು.
ಬೇಕಾಗಿರುವ ಸಾಮಾಗ್ರಿಗಳು : ಅವೊಲಿ ಮೀನು – 1, ಕೆಂಪು ಮೆಣಸಿನ ಪುಡಿ – 1 ಟೀಸ್ಪೂನ್, ಮೆಣಸಿನ ಪುಡಿ – 1 ಟೀಸ್ಪೂನ್, ಅರಿಶಿನ ಪುಡಿ – ಅರ್ಧ ಟೀಸ್ಪೂನ್, ರುಚಿಗೆ ತಕ್ಕಷ್ಟು ಉಪ್ಪು, ನಿಂಬೆ ರಸ – 2 ಟೀಸ್ಪೂನ್, ಕರಿಬೇವು – 10 ರಿಂದ 15 ಎಲೆಗಳು, ಎಣ್ಣೆ – ಅರ್ಧ ಕಪ್, ನಿಂಬೆ ಹೋಳು – 2, ಕಟ್ ಮಾಡಿದ ಈರುಳ್ಳಿ – 1 ಕಪ್..,
ಮಾಡುವ ವಿಧಾನ : ಮೀನುಗಳನ್ನು ಸ್ವಚ್ಛಗೊಳಿಸಿ, ಅದರ ಎರಡೂ ಬದಿಗಳನ್ನು ಕಟ್ ಮಾಡಿ. ಕೆಂಪು ಮೆಣಸಿನ ಪುಡಿ, ಮೆಣಸಿನ ಪುಡಿ, ಅರಿಶಿನ ಪುಡಿ, ಉಪ್ಪು ಮತ್ತು ನಿಂಬೆ ರಸವನ್ನು ಮಿಶ್ರಣ ಮಾಡುವ ಮೂಲಕ ಮಸಾಲಾವನ್ನು ತಯಾರಿಸಿ. ಎರಡೂ ಬದಿಗಳಲ್ಲಿ ಮೀನಿನ ಮಸಾಲಾವನ್ನು ಸಮವಾಗಿ ಲೇಪಿಸಿ, 30 ನಿಮಿಷಗಳ ಕಾಲ ಮಸಾಲಾ ಜೊತೆಗೆ ಬಿಡಿ.
ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ, ಕರಿಬೇವಿನ ಎಲೆಗಳನ್ನು ಹಾಕಿ. ನಂತರ ಮಸಾಲಾ ಮೀನನ್ನು ಮಧ್ಯಮ ಉರಿಯಲ್ಲಿ ಫ್ರೈ(ಕಡಿಮೆ ಎಣ್ಣೆಯನ್ನು ಬಳಸಿ) ಮಾಡಿ. ಅದು ಚೆನ್ನಾಗಿ ಸುಟ್ಟು, ಕಂದು ಬಣ್ಣಕ್ಕೆ ಬರುವವರೆಗೆ ಫ್ರೈ ಮಾಡಿ ತದನಂತರ ಇನ್ನೊಂದು ಬದಿ ಬೇಯಿಸಲು ತಿರುಗಿಸಿ. ಕೊನೆಗೆ ಕರಿದ ಮೀನಿನ ಫ್ರೈ ಮೇಲೆ ಪೇಪರ್ ಪೌಡರ್, ನಿಂಬೆ ರಸ ಮತ್ತು ಈರುಳ್ಳಿ ಹಾಕಿ ಬಡಿಸಿ. ಇದನ್ನೂ ಓದಿ : ನಟ ಪ್ರಭಾಸ್ ಅಭಿನಯದ ಫೌಜಿ ಚಿತ್ರದ ರಿಲೀಸ್ ಡೇಟ್ ಫಿಕ್ಸ್..!
