28.4 C
ಬೆಂಗಳೂರು
October 5, 2026
kranthikidi.com
ತಾಜಾಸುದ್ದಿರಾಜ್ಯ

ತಂದೆ-ತಾಯಿ ನಿರ್ಲಕ್ಷ್ಯ; ಮಹಡಿಯಿಂದ ಬಿದ್ದ ಮಗು – ಜೀವನ್ಮರಣ ಹೋರಾಟ..!

ಬೆಂಗಳೂರು : ತಂದೆ-ತಾಯಿ ಮನೆಯ ಮುಂದೆ ಆಟವಾಡಲು ಬಿಟ್ಟಿದ್ದ ಪುಟ್ಟ ಕಂದನೊಬ್ಬ 4ನೇ ಮಹಡಿಯಿಂದ ಕೆಳಗೆ ಬಿದ್ದು ಗಂಭೀರವಾಗಿ ಗಾಯಗೊಂಡಿರುವ ಹೃದಯವಿದ್ರಾವಕ ಘಟನೆ ಮಡಿವಾಳ ಪೊಲೀಸ್ ಠಾಣಾ ವ್ಯಾಪ್ತಿಯ ಚಿಕ್ಕ ಆಡುಗೋಡಿಯಲ್ಲಿ ನಡೆದಿದೆ.

ಆಗಸ್ಟ್‌ 15ರಂದು ಬೆಳಗ್ಗೆ 10.50ರ ಸುಮಾರಿಗೆ ಈ ಅವಘಡ ಸಂಭವಿಸಿದೆ. ಮನೆಯ ಮುಂದೆ ಆಟವಾಡುತ್ತಿದ್ದ ಮಗು ಗ್ರಿಲ್‌ ಮೇಲೆ ಹತ್ತಿದ್ದು, ಆಯತಪ್ಪಿ 4ನೇ ಮಹಡಿಯಿಂದ ಕೆಳಗೆ ಬಿದ್ದಿದೆ. ಕೆಳಗೆ ಬಿದ್ದ ಬಳಿಕ ಮಗು ಬೌನ್ಸ್ ಆಗಿ ಮತ್ತೆ ನೆಲಕ್ಕೆ ಅಪ್ಪಳಿಸಿದ್ದು, ಗಂಭೀರವಾಗಿ ಗಾಯಗೊಂಡಿದೆ.

ಮಗು ಮಹಡಿಯಿಂದ ಕೆಳಗೆ ಬೀಳುವ ಭಯಾನಕ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಘಟನೆ ಕಣ್ಣಾರೆ ಕಂಡ ಸ್ಥಳೀಯರು ಕ್ಷಣಮಾತ್ರವೂ ತಡಮಾಡದೆ ಮಗುವಿನ ರಕ್ಷಣೆಗೆ ಧಾವಿಸಿದ್ದಾರೆ. ಬೈಕ್‌ನಲ್ಲೇ ಮಗುವನ್ನು ಕರೆದೊಯ್ದ ಸ್ಥಳೀಯರು, ತಕ್ಷಣ ಕೋರಮಂಗಲದ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ.

ಮಗುವಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿದಿದ್ದು, ಸಾವು-ಬದುಕಿನ ನಡುವೆ ಪುಟ್ಟ ಕಂದ ಹೋರಾಟ ನಡೆಸುತ್ತಿದೆ. ಮಕ್ಕಳನ್ನು ಮನೆಯ ಮುಂದೆ ಆಟವಾಡಲು ಬಿಡುವಾಗ ಪೋಷಕರು ಎಚ್ಚರ ವಹಿಸಬೇಕೆಂಬುದಕ್ಕೆ ಈ ಘಟನೆ ಮತ್ತೊಂದು ಕಹಿ ಎಚ್ಚರಿಕೆಯಾಗಿದೆ. ಇದನ್ನೂ ಓದಿ : ಲಾಲ್‌ಬಾಗ್ ಉಳಿಸಿ; ಬಂಡೆ ತಬ್ಬಿಕೊಂಡು ವಾಕರ್ಸ್ ಪ್ರತಿಭಟನೆ..!

Related posts

ಪರಿಷತ್ ಚುನಾವಣೆ; ಜೆಡಿಎಸ್​​ನಿಂದ ಕಾಂಗ್ರೆಸ್​​ ಶಾಸಕರ ಸಂಪರ್ಕ ಸುದ್ದಿ ಸುಳ್ಳು – ಹೆಚ್​​ಡಿಕೆ

Kalpana Editor

ದೇವೇಗೌಡ, ಹೆಚ್​​ಡಿಕೆ ಬಗ್ಗೆ ನಾಲಿಗೆ ಹರಿಬಿಟ್ರೆ ಕತ್ತರಿಸುತ್ತೇವೆ – ಸುರೇಶ್ ಗೌಡ

Kalpana Editor

ರಾಮಕೃಷ್ಣ ಆಶ್ರಮದಲ್ಲಿ ವಿವೇಕ ಸ್ಮಾರಕ ಉದ್ಘಾಟಿಸಿದ ಪ್ರಧಾನಿ ಮೋದಿ

Kalpana Editor