23.5 C
ಬೆಂಗಳೂರು
October 12, 2026
kranthikidi.com
ತಾಜಾಸುದ್ದಿಸಿನಿಮಾ

ಹೊಸ ಕಥೆಗಾರರಿಗೆ ವೇದಿಕೆ ಕಲ್ಪಿಸಿದ ಪ್ರಿಯಾ ಸುದೀಪ್; ಕಥೆ ಹೇಳುವಂತೆ ಆಹ್ವಾನ..!

ಕಿಚ್ಚ ಸುದೀಪ್ ಅವರ ಪತ್ನಿ ಪ್ರಿಯಾ ಸುದೀಪ್ ಅವರು ಇತ್ತೀಚೆಗಷ್ಟೇ ತಮ್ಮ ಅಳಿಯ ಸಂಚಿತ್ ಸಂಜೀವ್ ನಟಿಸಿದ್ದ ‘ಮ್ಯಾಂಗೋ ಪಚ್ಚ’ ಚಿತ್ರವನ್ನು ಅದ್ಧೂರಿಯಾಗಿ ನಿರ್ಮಾಣ ಮಾಡಿ ಸೈ ಎನಿಸಿಕೊಂಡಿದ್ದರು. ಇದರ ಬೆನ್ನಲ್ಲೇ ಈಗ ಪ್ರಿಯಾ ಸುದೀಪ್ ಅವರು ಚಿತ್ರರಂಗದ ಹೊಸ ಪ್ರತಿಭೆಗಳಿಗೆ ಮತ್ತು ಕಥೆಗಾರರಿಗೆ ಮತ್ತೊಂದು ಸುವರ್ಣ ಅವಕಾಶವನ್ನು ಹೊತ್ತು ತಂದಿದ್ದಾರೆ.

ತಮ್ಮ ಅಧಿಕೃತ ಬ್ಯಾನರ್ ಆದ ‘ಸುಪ್ರಿಯಾನ್ವಿ ಪಿಕ್ಚರ್ ಸ್ಟುಡಿಯೋ’ ಮೂಲಕ ಹೊಸ ಕಥೆಗಳನ್ನು ಆಹ್ವಾನಿಸಿ ಪ್ರಿಯಾ ಅವರು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಒಂದನ್ನು ಹಂಚಿಕೊಂಡಿದ್ದಾರೆ. ಅನೇಕರು ತಮ್ಮ ಬಳಿ ಕಥೆ ಇಟ್ಟುಕೊಂಡು ಸರಿಯಾದ ವೇದಿಕೆ ಸಿಗದೆ ಒದ್ದಾಡುತ್ತಾ ಇರುತ್ತಾರೆ. ಅಂಥವರಿಗೆ ಪ್ರಿಯಾ ಅವರು ವೇದಿಕೆ ಕಲ್ಪಿಸುತ್ತಿದ್ದಾರೆ.

ಹೊಸ ಆಲೋಚನೆ ಹಾಗೂ ಮೌಲಿಕ ಕಥೆಗಳಿಗೆ ಮನ್ನಣೆ ನೀಡಲು ಮುಂದಾಗಿರುವ ಸುಪ್ರಿಯಾನ್ವಿ ಪಿಕ್ಚರ್ ಸ್ಟುಡಿಯೋ, ಹೊಸಬರ ಸೃಜನಶೀಲತೆಗೆ ಮುಕ್ತ ಅವಕಾಶ ನೀಡಿದೆ. ನಿಮ್ಮ ಬಳಿ ಉತ್ತಮ ಕಥೆಗಳಿದ್ದರೆ, ಹೆಚ್ಚಿನ ವಿವರಗಳಿಗಾಗಿ ಸಂಸ್ಥೆಯು ಅಧಿಕೃತ ವಾಟ್ಸಾಪ್ ಸಂಖ್ಯೆಯನ್ನು ನೀಡಿದೆ. 6363307434 ಇದಕ್ಕೆ ವಾಟ್ಸಾಪ್ ಮಾಡಬೇಕು.

ಇಲ್ಲಿ ಗಮನಿಸಬೇಕಾದ ವಿಷಯ ಎಂದರೆ, ಈ ನಂಬರ್​ಗೆ ಕರೆಗಳಿಗೆ ಅವಕಾಶವಿರುವುದಿಲ್ಲ, ಕೇವಲ ವಾಟ್ಸಾಪ್ ಚಾಟ್ ಮೂಲಕ ಮಾತ್ರ ಸಂಪರ್ಕಿಸಬೇಕು. ‘ಮ್ಯಾಂಗೋ ಪಚ್ಚ’ ಮೂಲಕ ಈಗಾಗಲೇ ಗಮನ ಸೆಳೆದಿರುವ ಈ ನಿರ್ಮಾಣ ಸಂಸ್ಥೆ, ಮುಂದಿನ ದಿನಗಳಲ್ಲಿ ಮತ್ತಷ್ಟು ವಿಶಿಷ್ಟ ಸಿನಿಮಾಗಳನ್ನು ಹೊತ್ತು ತರಲು ಭರ್ಜರಿ ಸಿದ್ಧತೆ ಮಾಡಿಕೊಳ್ಳುತ್ತಿರುವುದು ಈ ಪೋಸ್ಟ್ ಮೂಲಕ ಸ್ಪಷ್ಟವಾಗಿದೆ. ಇದನ್ನೂ ಓದಿ : ಮೆಟ್ರೋ ಕಾಮಗಾರಿ ವೇಳೆ ಕಾರ್ಮಿಕ ಸಾವು; ಬಿಎಂಆರ್‌ಸಿಎಲ್ ಅಧಿಕಾರಿಗಳ ವಿರುದ್ಧ ಎಫ್‌ಐಆರ್‌

Related posts

ಅಂದು ಕಪ್‌ಗೆ ಕೊಹ್ಲಿ ಕಿಸ್… ಇಂದು ಕೊಹ್ಲಿಗೆ ಅನುಷ್ಕಾ ಕಿಸ್..!

Kalpana Editor

ಮಹದೇಶ್ವರ ಬೆಟ್ಟದಲ್ಲಿ ಪ್ಲಾಸ್ಟಿಕ್‌ ಹಾವಳಿಗೆ ಇನ್ನೂ ಮುಕ್ತಿ ಸಿಕ್ಕಿಲ್ಲ…!

Kalpana Editor

ಆಟವಾಡ್ತಿದ್ದಾಗ ಆಯತಪ್ಪಿ ಕೆಳಗೆ ಬಿದ್ದ ಮಗು – ಸ್ಥಿತಿ ಗಂಭೀರ..!

Kalpana Editor