27 C
ಬೆಂಗಳೂರು
August 26, 2026
kranthikidi.com
ಕ್ರೈಂತಾಜಾಸುದ್ದಿರಾಜ್ಯ

ಮಾಜಿ ಉಪಸಭಾಪತಿ ಆಶಿಶ್ ಬ್ಯಾನರ್ಜಿ ಟಿಎಂಸಿ ಕಚೇರಿಯಲ್ಲಿ ಶವವಾಗಿ ಪತ್ತೆ..!

ಕೋಲ್ಕತ್ತಾ : ಪಶ್ಚಿಮ ಬಂಗಾಳ ವಿಧಾನಸಭೆಯ ಮಾಜಿ ಉಪಸಭಾಪತಿ ಆಶಿಶ್ ಬ್ಯಾನರ್ಜಿ ಇಂದು (ಭಾನುವಾರ) ಬೆಳಗ್ಗೆ ಬಿರ್ಭೂಮ್ ಜಿಲ್ಲೆಯ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಕಚೇರಿಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಟಿಎಂಸಿ ಕಚೇರಿ ರಾಂಪುರ್ಹತ್ ನಗರದ ಬ್ಯಾನರ್ಜಿ ಅವರ ನಿವಾಸದ ಸಮೀಪವೇ ಇದೆ. ಪೊಲೀಸರು ಹೆಚ್ಚಿನ ವಿವರಗಳನ್ನ ಬಹಿರಂಗಪಡಿಸಿಲ್ಲ. ಆಶೀಶ್‌ ಅವರ ನಿವಾಸದಲ್ಲಿ ಡೆತ್‌ನೋಟ್‌ ಪತ್ತೆಯಾಗಿದೆ. ಅವರ ಮೃತದೇಹವನ್ನ ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದ್ದು, ವರದಿ ಬಳಿಕ ಹೆಚ್ಚಿನ ಮಾಹಿತಿ ನೀಡುವುದಾಗಿ ಪೊಲೀಸರು ವಿವರಿಸಿದ್ದಾರೆ.

ರಾಂಪುರ್ಹತ್‌ನಲ್ಲಿ ಜನಿಸಿದ ಬ್ಯಾನರ್ಜಿ ಬುರ್ದ್ವಾನ್ ವಿಶ್ವವಿದ್ಯಾಲಯದಿಂದ ಪಿಎಚ್‌ಡಿ ಪದವಿ ಪಡೆದಿದ್ದರು ಮತ್ತು ರಾಂಪುರ್ಹತ್ ಕಾಲೇಜಿನಲ್ಲಿ ಸಹಾಯಕ ಪ್ರಾಧ್ಯಾಪಕರಾಗಿಯೂ ಸೇವೆ ಸಲ್ಲಿಸಿದ್ದರು. 74 ವರ್ಷದ ಆಶಿಶ್ ಬ್ಯಾನರ್ಜಿ ಟಿಎಂಸಿಯ ಹಿರಿಯ ನಾಯಕರಾಗಿದ್ದರು. 2021ರ ಜುಲೈ ನಿಂದ 2026ರ ಮೇ ವರೆಗೆ ಪಶ್ಚಿಮ ಬಂಗಾಳ ವಿಧಾನಸಭೆಯ 13 ನೇ ಉಪಸಭಾಪತಿಯಾಗಿ ಸೇವೆ ಸಲ್ಲಿಸಿದ್ದರು. ಬ್ಯಾನರ್ಜಿ ಮಾಜಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ಅಡಿಯಲ್ಲಿ ರಾಜ್ಯದ ಶಿಕ್ಷಣ ಮತ್ತು ಕೃಷಿ ಸಚಿವರಾಗಿಯೂ ಸೇವೆ ಸಲ್ಲಿಸಿದ್ದರು.

2001 ರಿಂದ 2021 ರವರೆಗೆ ರಾಂಪುರ್ಹತ್ ವಿಧಾನಸಭಾ ಕ್ಷೇತ್ರದಿಂದ ಬ್ಯಾನರ್ಜಿ ಸತತ 5 ಚುನಾವಣೆಗಳಲ್ಲಿ ಗೆದ್ದಿದ್ದರು. ಆದ್ರೆ ಈ ನಡೆದ ವಿಧಾನಸಭಾ ಚುನಾವಣೆಯಲ್ಲಿ ಆಶಿಶ್‌ ಬಿಜೆಪಿ ಅಭ್ಯರ್ಥಿ ಧ್ರುಬಾ ಸಹಾ ವಿರುದ್ಧ ಸುಮಾರು 24,000 ಮತಗಳ ಅಂತರದಿಂದ ಸೋತರು. ಭಾರತೀಯ ಚುನಾವಣಾ ಆಯೋಗದ (ಇಸಿಐ) ಅಂಕಿಅಂಶಗಳ ಪ್ರಕಾರ, ಬ್ಯಾನರ್ಜಿ 87,687 ಮತಗಳನ್ನು ಪಡೆದರೆ, ಸಹಾ 1,11,920 ಮತಗಳನ್ನ ಪಡೆದು ರಾಂಪುರ್ಹತ್ ಸ್ಥಾನವನ್ನು ಗೆದ್ದರು. ಇದನ್ನೂ ಓದಿ : ‘ಕೆಜಿಎಫ್ 3’ ಮಾಡದೆ ಹೊಸ ರಿಸ್ಕ್ ತಗೊಂಡಿದ್ದೇಕೆ..?; ಮೌನ ಮುರಿದ ನಟ ಯಶ್

Related posts

ಮೂತ್ರನಾಳದ ಸೋಂಕಿನ ಕುರಿತು ನಿರ್ಲಕ್ಷ ಬೇಡ; ತಡೆಗಟ್ಟಲು ಇಲ್ಲಿದೆ ಮಾರ್ಗದರ್ಶನ..

Kalpana Editor

ನಟ ರಾಮ್ ಚರಣ್ ಆಸ್ಪತ್ರೆ ಫೋಟೋ ವೈರಲ್; ವಿಶ್ರಾಂತಿ ಕಡ್ಡಾಯ..!

Kalpana Editor

ನನ್ನ ಮಗಳಿಗೆ ಜೀವದಾನ ಸಿಕ್ಕಿದೆ – ಪ್ರಧಾನಿಗೆ ಧನ್ಯವಾದ ತಿಳಿಸಿದ ಬಾಲಕಿ ತಾಯಿ

Kalpana Editor