kranthikidi.com
ಕ್ರೈಂತಾಜಾಸುದ್ದಿರಾಜ್ಯ

ರೌಡಿಶೀಟರ್‌ನ ಬರ್ಬರ ಹತ್ಯೆ – ದುಷ್ಕರ್ಮಿಗಳು ಪರಾರಿ..!

ಹಾಸನ : ಹಾಸನದಲ್ಲಿ ಮಾರಕಾಸ್ತ್ರಗಳಿಂದ ಕೊಚ್ಚಿ ರೌಡಿಶೀಟರ್‌ನ ಬರ್ಬರವಾಗಿ ಹತ್ಯೆ ಮಾಡಿ ದುಷ್ಕರ್ಮಿಗಳು ಎಸ್ಕೇಪ್‌ ಆಗಿರುವ ಘಟನೆ ನಡೆದಿದೆ. ಹಾಸನ ನಗರದ ಚನ್ನಪಟ್ಟಣದಲ್ಲಿರುವ ಜಿಲ್ಲಾ ಕೋರ್ಟ್ ಮುಂಭಾಗದಲ್ಲಿ ಇಂದು ಮುಂಜಾನೆ ಈ ಘಟನೆ ನಡೆದಿದ್ದು, ಮಂಜೇಶ್ (43) ಕೊಲೆಯಾದ ರೌಡಿಶೀಟರ್ ಎಂದು ಗುರುತಿಸಲಾಗಿದೆ.

ಮಂಜೇಶ್ ತಾಯಿ ಹಾಸನ ಮೂಲದವರಾಗಿದ್ದು, ಬೆಂಗಳೂರಿನಲ್ಲಿ ನೆಲೆಸಿದ್ದರು. ಬೆಂಗಳೂರಿನಲ್ಲಿ ರೌಡಿಶೀಟರ್ ಆಗಿರುವ ಮಂಜೇಶ್ ಹಾಸನಕ್ಕೆ ಬಂದಿದ್ದ ವೇಳೆ ಹಂತಕರು ಮಾರಕಾಸ್ತ್ರಗಳನ್ನು ಹಿಡಿದು ದಾಳಿ ನಡೆಸಿದ್ದು, ಮುಖದ ಗುರುತು ಸಿಗದಂತೆ ಕೊಚ್ಚಿ ಕೊಲೆಗೈದು ಎಸ್ಕೇಪ್ ಆಗಿದ್ದಾರೆ. ಈ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಹಾಸನ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ ಎಂದು ಹೇಳಲಾಗಿದೆ. ಇದನ್ನೂ ಓದಿ : ನೆಪೊಟಿಸಮ್ ಚರ್ಚೆ: ಶಿವಣ್ಣ-ಅಪ್ಪು ಹೆಸರು ಹೇಳಿದ್ದಕ್ಕೆ, ಸುದೀಪ್ ಸ್ಪಷ್ಟನೆ..!

Related posts

ಕೇತನ್‌ ಜೊತೆ ಎಂಗೇಜ್‌ಮೆಂಟ್‌, ಲವ್ವರ್ ಜೊತೆ ರಹಸ್ಯ ಮದುವೆ – ಬಯಲಾಗ್ತಿದೆ ಕ್ರಿಮಿನಲ್‌ ಸಿಯಾ ಪುರಾಣ

Kalpana Editor

ವರ್ತೂರು ಗ್ರೌಂಡ್‌ನಲ್ಲಿ ವ್ಯಕ್ತಿಯ ರುಂಡ ಪತ್ತೆ – ಪೊಲೀಸರಿಂದ ತ್ರೀವ ತನಿಖೆ..!

Kalpana Editor

ರೌಡಿಶೀಟರ್ ಆವಲಹಳ್ಳಿ ಮಂಜೇಶ್ ಹತ್ಯೆ ಪ್ರಕರಣ; ಹತ್ತು ಮಂದಿ ಬಂಧನ..!

Kalpana Editor