27.5 C
ಬೆಂಗಳೂರು
October 9, 2026
kranthikidi.com
ತಾಜಾಸುದ್ದಿಸಿನಿಮಾ

‘ಕೆಜಿಎಫ್ 3’ ಮಾಡದೆ ಹೊಸ ರಿಸ್ಕ್ ತಗೊಂಡಿದ್ದೇಕೆ..?; ಮೌನ ಮುರಿದ ನಟ ಯಶ್

‘ರಾಕಿಂಗ್ ಸ್ಟಾರ್’ ಯಶ್ ಅವರು ‘ಕೆಜಿಎಫ್ 2’ ಚಿತ್ರದ ಮೂಲಕ ಭಾರತೀಯ ಚಿತ್ರರಂಗದಲ್ಲೇ ಹೊಸ ಇತಿಹಾಸ ಸೃಷ್ಟಿಸಿದವರು. ‘ಕೆಜಿಎಫ್ 2’ ಸಿನಿಮಾದ ಬೃಹತ್ ಯಶಸ್ಸಿನ ನಂತರ ಸುಲಭವಾಗಿ ಕೋಟಿ ಕೋಟಿ ಹಣ ಹಾಗೂ ಖ್ಯಾತಿ ತಂದುಕೊಡುವ ‘ಕೆಜಿಎಫ್ ಚಾಪ್ಟರ್ 3’ ಮಾಡಲು ಅವಕಾಶ ಇತ್ತು. ಆದರೆ, ಇದರ ಬದಲು, ಹೊಸ ಸಾಹಸಕ್ಕೆ ಕೈಹಾಕಿದ್ದೇಕೆ ಎಂಬ ಪ್ರಶ್ನೆಗೆ ಯಶ್ ಅವರು ನೀಡಿದ ಉತ್ತರ ಈಗ ಸಖತ್ ವೈರಲ್ ಆಗುತ್ತಿದೆ.

ಖ್ಯಾತ ನಿರೂಪಕ ರಜತ್ ಶರ್ಮಾ ಅವರ ‘ಆಪ್ ಕಿ ಅದಾಲತ್’ ಟಿವಿ ಶೋನಲ್ಲಿ ಭಾಗವಹಿಸಿದ್ದ ಯಶ್ ಅವರ ಬಳಿ, ‘ಕೆಜಿಎಫ್ 2 ನಂತಹ ದೊಡ್ಡ ಹಿಟ್ ಸಿಕ್ಕ ಮೇಲೂ ಕೆಜಿಎಫ್ 3 ಮಾಡಿ ಹಣ ಹಾಗೂ ಖ್ಯಾತಿಗಳಿಸದೆ ಹೊಸ ಸಿನಿಮಾ ಮಾಡುವ ರಿಸ್ಕ್ ಏಕ ತೆಗೆದುಕೊಂಡ್ರಿ?’ ಎಂದು ಪ್ರಶ್ನಿಸಲಾಯಿತು. ಇದಕ್ಕೆ ತಮ್ಮದೇ ಶೈಲಿಯಲ್ಲಿ ಉತ್ತರಿಸಿದ ಯಶ್, ‘ನನ್ನ ಸ್ವಂತ ಮನೆ ಬಿಟ್ಟು ಚಿತ್ರರಂಗಕ್ಕೆ ಬಂದೆನಲ್ಲ, ಅದಕ್ಕಿಂತ ದೊಡ್ಡ ರಿಸ್ಕ್ ನನಗೆ ಬೇರೊಂದಿಲ್ಲ. ನನಗೆ ಅಪಾಯಗಳ ನಡುವೆ, ರಿಸ್ಕ್ ತೆಗೆದುಕೊಂಡು ಜೀವನ ನಡೆಸುವುದ ಎಂದರೆ ತುಂಬಾ ಇಷ್ಟ’ ಎಂದು ಮಾಸ್‌ ಆಗಿ ಉತ್ತರಿಸಿದ್ದಾರೆ. ಯಶ್ ಅವರ ಈ ದಿಟ್ಟ ಉತ್ತರಕ್ಕೆ ಪ್ರೇಕ್ಷಕರಿಂದ ಭಾರೀ ಚಪ್ಪಾಳೆ ಹಾಗೂ ಮೆಚ್ಚುಗೆ ವ್ಯಕ್ತವಾಗಿದೆ.

ಯಶ್ ಅವರು ಪ್ರತಿ ಬಾರಿ ಹೊಸದನ್ನು ಮಾಡಬೇಕು ಎಂದು ಇಷ್ಟಪಡುತ್ತಾರೆ. ಕೆಜಿಎಫ್ ಬಳಿಕ ಅವರನ್ನು ರಾಕಿ ಎಂದು ಗುರುತಿಸುತ್ತಾರೆ. ಆ ಪಾತ್ರ ಮರೆಸುವ ರೀತಿಯಲ್ಲಿ ಒಂದು ಹೊಸ ಪಾತ್ರ ಮಾಡಬೇಕು ಎಂಬುದು ಅವರ ಬಯಕೆ. ಸಿನಿಮಾದಿಂದ ಸಿನಿಮಾಗೆ ಹೊಸ ಹೊಸ ಪಾತ್ರಗಳನ್ನು ಮಾಡಬೇಕು ಎಂಬುದು ಅವರ ಗುರಿ. ಅದನ್ನು ಸಾಧಿಸುವತ್ತ ಅವರು ಪ್ರಯತ್ನ ಯಾವಾಗಲೂ ಇರುತ್ತದೆ. ಯಶ್ ಅವರ ನಟನೆಯ ‘ಟಾಕ್ಸಿಕ್’ ಸಿನಿಮಾ ಆಗಸ್ಟ್ 26ರಂದು ರಿಲೀಸ್ ಆಗುತ್ತಿದೆ. ಈ ಸಿನಿಮಾಗೆ ಗೀತು ಮೋಹನ್​ದಾಸ್ ನಿರ್ದೇಶನ ಇದೆ. ಕಿಯಾರಾ ಅಡ್ವಾಣಿ, ನಯನತಾರಾ, ಕಿಯಾರಾ ಅಡ್ವಾಣಿ, ತಾರಾ ಸುತಾರಿಯಾ ಮೊದಲಾದವರು ನಟಿಸಿದ್ದಾರೆ. ಇದನ್ನೂ ಓದಿ : ಆಸ್ಟ್ರೇಲಿಯಾ ಶಿಖರದ ತುತ್ತತುದಿಯಲ್ಲಿ ಭಾರತದ ತ್ರಿವರ್ಣ ಧ್ವಜ ಹಾರಿದ ಕೊಡಗಿನ ಮಹಿಳೆ

Related posts

ಸತತ ಸೋಲಿನಿಂದ ಕಂಗೆಟ್ಟ ಪೂಜಾ ಹೆಗ್ಡೆಗೆ ಬಾಲಿವುಡ್​​ನಲ್ಲಿ ಮೂಡಿದೆ ಆಶಾಕಿರಣ

Kalpana Editor

ಒಕ್ಕಲಿಗ ನಾಯಕರ ಡಿನ್ನರ್ ಮೀಟಿಂಗ್ ವಿಚಾರದ ಬಗ್ಗೆ ಪ್ರಿಯಾಂಕ್ ಖರ್ಗೆ ಹೇಳಿದ್ದೇನು..?

Kalpana Editor

ಹೆಚ್‌ಡಿ ದೇವೇಗೌಡರ ಕಾಲಿಗೆ ಬಿದ್ದು, ಆಶೀರ್ವಾದ ಪಡೆದ ಡಿಕೆ ಶಿವಕುಮಾರ್‌

Kalpana Editor