June 13, 2026
kranthikidi.com
ತಾಜಾಸುದ್ದಿದೇಶ

ಗಂಗಾ ನದಿಯಲ್ಲಿ ದೋಣಿ ಮುಳುಗಡೆ; ಇಬ್ಬರ ದುರ್ಮರಣ, 5 ಮಂದಿ ನಾಪತ್ತೆ..!

ಪಾಟ್ನಾ : 14 ಮಂದಿಯನ್ನು ಹೊತ್ತೊಯ್ಯುತ್ತಿದ್ದ ದೋಣಿಯೊಂದು ಗಂಗಾ ನದಿಯಲ್ಲಿ ಮುಳುಗಿದ ಪರಿಣಾಮ ಇಬ್ಬರು ಸಾವನ್ಬನಪ್ಪಿದ್ದು, 5 ಮಂದಿ ನಾಪತ್ತೆಯಾಗಿರುವ ಘಟನೆ ಬಿಹಾರದ ಪಾಟ್ನಾದಲ್ಲಿ ನಡೆದಿದೆ.

ಪ್ರವಾಹ ಪೀಡಿತ ಪಾಟ್ನಾದ ಉಮಾನಾಥ್ ಗಂಗಾ ಘಾಟ್ ಬಳಿ ಗಂಗಾ ನದಿಯಲ್ಲಿ ನೀರಿನ ಮಟ್ಟ ಏರಿಕೆ ಹಾಗೂ ಬಲವಾದ ಗಾಳಿಯಿಂದ ದೋಣಿ ಮುಳುಗಿದೆ. ಕೂಡಲೇ ಸ್ಥಳೀಯರ ನೆರವಿನಿಂದ ದೋಣಿಯಲ್ಲಿದ್ದ 7 ಮಂದಿಯನ್ನು ಎಸ್‌ಡಿಆರ್‌ಎಫ್ ತಂಡ ಸುರಕ್ಷಿತವಾಗಿ ರಕ್ಷಿಸಿದ್ದು, ಇಬ್ಬರ ಮೃತದೇಹವನ್ನು ನೀರಿನಿಂದ ಹೊರತೆಗೆಯಲಾಗಿದೆ.

ಸಾಮರ್ಥ್ಯಕ್ಕಿಂತ ಹೆಚ್ಚಿನ ಜನರನ್ನು ದೋಣಿಯಲ್ಲಿ ಕರೆದೊಯ್ದಿದ್ದು, ಯಾವುದೇ ರಕ್ಷಣಾ ಕವಚಗಳನ್ನು ಹೊಂದಿರದ ಕಾರಣ ದುರಂತ ಸಂಭವಿಸಿದೆ ಎಂದು ವರದಿಗಳು ತಿಳಿಸಿವೆ. ಮೃತರನ್ನು ನೀಲಂ ಕುಮಾರಿ (30) ಹಾಗೂ ಕಾಶಿ ಕುಮಾರ್ (15) ಎಂದು ಗುರುತಿಸಲಾಗಿದೆ.

14 ಮಂದಿ ಪೈಕಿ ಐದು ಮಂದಿ ನಾಪತ್ತೆಯಾಗಿದ್ದು, ಶೋಧಕಾರ್ಯ ಮುಂದುವರಿದಿದೆ. ಪ್ರತಿಕೂಲ ಹವಾಮಾನ ಮತ್ತು ನೀರಿನ ಪರಿಸ್ಥಿತಿಗಳ ಮಧ್ಯೆಯೂ ಮುಳುಗು ತಜ್ಞ ಮತ್ತು ರಕ್ಷಣಾ ಸಿಬ್ಬಂದಿ ನದಿಯ ವಿವಿಧ ಭಾಗಗಳಲ್ಲಿ ಶೋಧಕಾರ್ಯ ನಡೆಸುತ್ತಿದ್ದಾರೆ.

Related posts

ಒಬೆಸಿಟಿ ಮತ್ತು ಡಯಾಬಿಟಿಸ್ ಸಮಸ್ಯೆ ತಡೆಯಲು ಸಿಂಪಲ್ ಟಿಪ್ಸ್..!

Kalpana Editor

ಸಿಎಂ ಆದ ದಿನಕ್ಕೆ ರೌಡಿಗಳ ವಿರುದ್ಧ ಸಮರ ಸಾರಿದ ಸಿಎಂ ಡಿಕೆ ಶಿವಕುಮಾರ್

Kalpana Editor

ಕರ್ನಾಟಕಕ್ಕೆ ಮುಂಗಾರು ಎಂಟ್ರಿ – ವರುಣನ ಅಬ್ಬರ, ಧರೆಗುರುಳಿದ ಮರ ಜನಜೀವನ ಅಸ್ತವ್ಯಸ್ತ..!

Kalpana Editor