24.4 C
ಬೆಂಗಳೂರು
September 21, 2026
kranthikidi.com
ತಾಜಾಸುದ್ದಿರಾಜಕೀಯರಾಜ್ಯ

ಅಂದು, ಇಂದು, ಎಂದೆಂದೂ ಒಗ್ಗಟ್ಟೇ ನಮ್ಮ ಶಕ್ತಿ – ಕಾಂಗ್ರೆಸ್ ಟ್ವೀಟ್

ಬೆಂಗಳೂರು : ಅಂದು, ಇಂದು, ಎಂದೆಂದೂ ಒಗ್ಗಟ್ಟೇ ನಮ್ಮ ಶಕ್ತಿ ಎಂದು ಕರ್ನಾಟಕ ಕಾಂಗ್ರೆಸ್ ಮತ್ತೊಮ್ಮೆ ಒತ್ತಿ ಹೇಳಿದೆ. ಸಿಎಂ ವಿದಾಯದ ಬ್ರೇಕ್‌ಫಾಸ್ಟ್ ಸಭೆಯಲ್ಲಿ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆ ಶಿವಕುಮಾರ್ ಪರಸ್ಪರ ಅಪ್ಪಿಕೊಂಡ ಮತ್ತು ಡಿಕೆಶಿ ಸಿಎಂ ಸಿದ್ದರಾಮಯ್ಯರ ಕಾಲಿಗೆ ಬಿದ್ದು ಆಶೀರ್ವಾದ ತೆಗೆದುಕೊಳ್ಳುತ್ತಿರುವ ಫೋಟೋಗಳನ್ನು ಕರ್ನಾಟಕ ಕಾಂಗ್ರೆಸ್ ಎಕ್ಸ್‌ನಲ್ಲಿ ಹಂಚಿಕೊಂಡಿದೆ.

ಸಿಎಂ-ಡಿಸಿಎಂ ಫೋಟೋಗಳನ್ನು ಹಂಚಿಕೊಂಡ ಕಾಂಗ್ರೆಸ್, ಅಂದು ಇಂದು ಎಂದೆಂದೂ ಒಗ್ಗಟ್ಟೇ ನಮ್ಮ ಶಕ್ತಿ. ಸಾರ್ವಜನಿಕರ ಸೇವೆಯೇ ನಮ್ಮ ಗುರಿ ಎಂದು ಟ್ವೀಟ್ ಮಾಡಿದೆ. ನನಗೆ ಯಾವುದೇ ನೋವಿಲ್ಲ, ಮನಃಪೂರ್ವಕವಾಗಿ ರಾಜೀನಾಮೆ ನೀಡುತ್ತಿದ್ದೇನೆ ಎಂದು ಸಿಎಂ ಸಿದ್ದರಾಮಯ್ಯ ವಿದಾಯದ ಬ್ರೇಕ್‌ಫಾಸ್ಟ್‌ನಲ್ಲಿ ನುಡಿದಿದ್ದಾರೆ. ಮಂತ್ರಿಗಳ ಜೊತೆಗಿನ ಉಪಹಾರ ಸಭೆಯಲ್ಲಿ ಮಾತನಾಡಿದ ಅವರು, ಹೈಕಮಾಂಡ್ ಹೇಳುವುವುದನ್ನು ಪಾಲನೆ ಮಾಡುವುದು ನನ್ನ ಕರ್ತವ್ಯ ಎಂದು ನುಡಿದಿದ್ದಾರೆ.

ಈ ಹಿಂದೆ ನಡೆದ ಒಪ್ಪಂದ ಸೂತ್ರ ಬಿಚ್ಚಿಟ್ಟ ಸಿದ್ದರಾಮಯ್ಯ ಸಂಪುಟ ಸಹೋದ್ಯೋಗಿಗಳ ಮುಂದೆ ರಾಜೀನಾಮೆ ನೀಡುವ ನಿರ್ಧಾರ ಪ್ರಕಟಿಸಿದರು. ಮುಂದಿನ ಸಿಎಂ ಯಾರು ಎಂಬ ಹೆಸರನ್ನ ಹೇಳದ ಸಿದ್ದರಾಮಯ್ಯ, ಮುಂದೆ ಯಾರು ಆಗುತ್ತಾರೆ ಎನ್ನುವುದನ್ನು ಹೈಕಮಾಂಡ್ ಹೇಳಲಿದೆ. ಹೈಕಮಾಂಡ್ ನಾಯಕರು ನಾವು ತೀರ್ಮಾನ ಮಾಡುತ್ತೇವೆ ಎಂದಿದ್ದಾರೆ. ಅವರೇ ಎಲ್ಲ ಮುಂದಿನ ಪ್ರಕ್ರಿಯೆ ನಡೆಸುತ್ತಾರೆ ಎಂದು ಹೇಳಿದರು.

ಸಿದ್ದರಾಮಯ್ಯನವರು ಈ ರೀತಿ ಹೇಳುತ್ತಿದ್ದಂತೆ ಡಿಕೆ ಶಿವಕುಮಾರ್ ಕಣ್ಣಂಚಲಿ ನೀರು ಬಂದಿದೆ. ಸಿಎಂ ಕೊಟ್ಟ ಮಾತಿನಂತೆ ನಡೆದುಕೊಂಡಿದ್ದಕ್ಕೆ ಡಿಕೆಶಿ ಭಾವುಕರಾದರು ಎಂಬ ವಿಚಾರ ಮೂಲಗಳಿಂದ ತಿಳಿದು ಬಂದಿದೆ. ಇಂದು ಬೆಳಗ್ಗೆ ಉಪಹಾರಕ್ಕೆ ಕಾವೇರಿ ನಿವಾಸಕ್ಕೆ ಆಗಮಿಸಿದ ಡಿಕೆ ಶಿವಕುಮಾರ್ ಅವರು ಸಿದ್ದರಾಮಯ್ಯರನ್ನು ತಬ್ಬಿಕೊಂಡು ಕಾಲಿಗೆ ಬಿದ್ದು ಆಶೀರ್ವಾದ ಪಡೆದಿದ್ದಾರೆ. ಉಪಹಾರ ಸಭೆಗೂ ಮೊದಲು ಡಿಕೆಶಿ ಜೊತೆ ಮೊದಲು ಸಿಎಂ ಪ್ರತ್ಯೇಕ ಮಾತುಕತೆ ನಡೆಸಿದ್ದರು.

Related posts

ಮೀಸಲಾತಿ ಕುರಿತು ನಟಿ ಶಿಲ್ಪಾ ಶೆಟ್ಟಿ ನಕಲಿ ಹೇಳಿಕೆ ವೈರಲ್: ಖಂಡಿಸಿದ ನಟಿ

Kalpana Editor

ನಟ ರಾಮ್ ಚರಣ್ ಆಸ್ಪತ್ರೆ ಫೋಟೋ ವೈರಲ್; ವಿಶ್ರಾಂತಿ ಕಡ್ಡಾಯ..!

Kalpana Editor

ಸತತ ಎರಡನೇ ಬಾರಿಗೆ ಚಾಂಪಿಯನ್‌ ಪಟ್ಟಕ್ಕೇರಿದ ಆರ್​ಸಿಬಿ

Kalpana Editor