21.5 C
ಬೆಂಗಳೂರು
September 22, 2026
kranthikidi.com
ತಾಜಾಸುದ್ದಿರಾಜ್ಯ

ತಮ್ಮ ಪ್ರಭಾವ ಬಳಸಿ ಫೈನಲ್ ಪಂದ್ಯವನ್ನು ನಮ್ಮಿಂದ ಕಿತ್ತುಕೊಂಡಿದ್ದಾರೆ – ಡಿಕೆಶಿ

ಬೆಂಗಳೂರು : ಐಪಿಎಲ್ ಫೈನಲ್ ಪಂದ್ಯ ಬೆಂಗಳೂರಿನಲ್ಲಿ ನಡೆಯಬೇಕಿತ್ತು. ಆದರೆ ಗುಜರಾತ್‌ನವರು ತಮ್ಮ ಪ್ರಭಾವ ಬಳಸಿ ಪಂದ್ಯವನ್ನು ನಮ್ಮಿಂದ ಕಿತ್ತುಕೊಂಡಿದ್ದಾರೆ ಎಂದು ನಿಯೋಜಿತ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಆರೋಪಿಸಿದ್ದಾರೆ. ಐಪಿಎಲ್ ಫೈನಲ್ ಪಂದ್ಯ ಬೆಂಗಳೂರಿನಲ್ಲಿ ನಡೆಯದಿರುವ ಕುರಿತು ಪ್ರತಿಕ್ರಿಯಿಸಿ, ಫೈನಲ್ ಪಂದ್ಯ ಕರ್ನಾಟಕದಲ್ಲಿ ನಡೆಯಬೇಕಿತ್ತು.

ಅದಕ್ಕೆ ನಾವು ಅನುಮತಿ ಕೂಡ ನೀಡಿದ್ದೆವು. ಆದರೆ ಗುಜರಾತ್‌ನವರು ತಮ್ಮ ಪ್ರಭಾವ ಬಳಸಿ ಪಂದ್ಯವನ್ನು ನಮ್ಮಿಂದ ಕಿತ್ತುಕೊಂಡಿದ್ದಾರೆ. ಮುಂದೆ ಇಂತಹ ಪರಿಸ್ಥಿತಿ ಬರದಂತೆ ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದ್ದೇವೆ. ನಮ್ಮ ಸ್ಟೇಡಿಯಂಗೆ ಅನ್ಯಾಯವಾಗಿದೆ. ನಮ್ಮ ಯುವಕರಿಗೂ ಅನ್ಯಾಯವಾಗಿದೆ ಎಂದಿದ್ದಾರೆ.

ಐಪಿಎಲ್ ಸೀಸನ್ 19ರ ಫೈನಲ್‌ನಲ್ಲಿ ಗೆದ್ದು ಎರಡನೇ ಬಾರಿ ಟ್ರೋಫಿ ಮುಡಿಗೇರಿಸಿಕೊಂಡ ಆರ್‌ಸಿಬಿ ತಂಡಕ್ಕೆ ಡಿ.ಕೆ. ಶಿವಕುಮಾರ್ ಅಭಿನಂದಿಸಿದರು. ಆರ್‌ಸಿಬಿ ಕರ್ನಾಟಕದ ಹೆಸರಿನಲ್ಲಿ ಆಡುತ್ತಿರುವ ತಂಡ. ನಮ್ಮ ರಾಜ್ಯದ ಆಟಗಾರರು ಐಪಿಎಲ್‌ನಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ್ದಾರೆ. ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ. ಕರ್ನಾಟಕ ಸರ್ಕಾರದ ಪರವಾಗಿ ಹಾಗೂ ರಾಜ್ಯದ ಅಭಿಮಾನಿಗಳ ಪರವಾಗಿ ಆರ್‌ಸಿಬಿ ತಂಡಕ್ಕೆ ಶುಭಾಶಯ ಕೋರುತ್ತೇನೆ. ಕರ್ನಾಟಕ ಹೆಮ್ಮೆಪಡುವಂತಹ ಸಾಧನೆಯನ್ನು ತಂಡ ಮಾಡಿದೆ ಎಂದು ಹೇಳುವ ಮೂಲಕ ಆರ್‌ಸಿಬಿ ಗೆಲುವನ್ನು ಹಾಡಿ ಹೊಗಳಿದ್ದಾರೆ.

Related posts

‘ಪೆದ್ದಿ’ ಸಿನಿಮಾ ರಿಲೀಸ್​​ಗೆ, ಮೊದಲು ಫ್ಯಾನ್ಸ್​​ಗೆ ಬ್ಯಾಡ್ ನ್ಯೂಸ್..!

Kalpana Editor

ತೇಜಸ್ವಿ ಸೂರ್ಯ ದೂರಿನ ಬೆನ್ನಲ್ಲೇ BMRCLಗೆ ಕೇಂದ್ರದಿಂದ ತನಿಖೆಗೆ ಆದೇಶ..!

Kalpana Editor

ಕಾವೇರಿ ನೀರು ನಿರ್ವಹಣೆ; ಸರ್ಕಾರದ ಧೋರಣೆಗೆ ತೀವ್ರ ಅಸಮಾಧಾನ – ಬಸವರಾಜ ಬೊಮ್ಮಾಯಿ

Kalpana Editor