August 1, 2026
kranthikidi.com
ತಾಜಾಸುದ್ದಿರಾಜ್ಯ

ಜಮೀರ್‌ ಸಚಿವ, ಡಿಸಿಎಂ ಆಗದಂತೆ ಷಡ್ಯಂತ್ರ – ವೈರಲ್ ಆಡಿಯೋ ಬಗ್ಗೆ ಮೊಹಮ್ಮದ್ ಸಿರಾಜ್ ಪ್ರತಿಕ್ರಿಯೆ..!

ದಾವಣಗೆರೆ : ಜಮೀರ್‌ ಅಹಮ್ಮದ್ ಹೆಸರಿಗೆ ಮಸಿ ಬಳಿಯೋಕೆ ಯಾರೋ ಆಡಿಯೋ ಬಿಟ್ಟಿದ್ದಾರೆ ಎಂದು ಮೊಹಮ್ಮದ್ ಸಿರಾಜ್ ಆರೋಪಿಸಿದ್ದಾರೆ. ದಾವಣಗೆರೆ ಉಪಚುನಾವಣೆ ವಿಚಾರವಾಗಿ ವೈರಲ್‌ ಆಗಿರುವ ಆಡಿಯೋ ಬಗ್ಗೆ ಅವರು ಮಾತನಾಡಿದರು.

ಈ ವೇಳೆ, ಸಾಹೇಬ್ರು ಪಕ್ಷ ವಿರೋಧಿ ಚಟುವಟಿಕೆ ಮಾಡಿಲ್ಲ. ಕಾಂಗ್ರೆಸ್‌ಗಾಗಿ ಶ್ರಮಿಸಿದ್ದಾರೆ. ಜಮೀರ್ ಹೆಸರಿಗೆ ಮಸಿ ಬಳಿಯಲು ಯಾರೋ ಈ ಪ್ರಯತ್ನ ಮಾಡಿದ್ದಾರೆ. ನಮ್ಮಿಬ್ಬರ ಮಧ್ಯೆ ಅಂತಹ ಚರ್ಚೆಗಳೇ ನಡೆದಿಲ್ಲ. ಯಾರೋ ಈ ರೀತಿ ಮಾಡಿದ್ದಾರೆ. ನನಗೆ ಈ ವಿಚಾರ ಮಾಧ್ಯಮಗಳ ಮೂಲಕ ತಿಳಿಯಿತು. ಪಕ್ಷದಿಂದ ಯಾರೂ ನನಗೆ ಈ ವಿಚಾರವಾಗಿ ಕೇಳಿಲ್ಲ ಎಂದರು.

ಪಕ್ಷದಲ್ಲಿರುವವರೇ ಜಮೀರ್‌ಗೆ ಕೆಟ್ಟ ಹೆಸರು ತರಲು ಯತ್ನಿಸುತ್ತಿದ್ದಾರೆ. ಅಂತಹವರು ಪಕ್ಷದಲ್ಲೂ ಇದ್ದಾರೆ. ದಾವಣಗೆರೆಯಲ್ಲೂ ಇದ್ದಾರೆ. ಜಮೀರ್‌ ಅವರು ಸಚಿವ, ಡಿಸಿಎಂ ಆಗದಂತೆ ಷಡ್ಯಂತ್ರ ನಡೆಯುತ್ತಿದೆ. ದಾವಣಗೆರೆಯಲ್ಲಿ ಜಮೀರ್ ಅಭ್ಯರ್ಥಿ ಪರವಾಗಿಯೇ ಕೆಲಸ ಮಾಡಿದ್ದಾರೆ.‌ ಆಡಿಯೋ ವೈರಲ್ ಬಗ್ಗೆ ದೂರು ಕೊಡುತ್ತೇನೆ ಎಂದು ಎಚ್ಚರಿಸಿದ್ದಾರೆ.

Related posts

ಎಸ್‍ಐಆರ್ ಮಹಾಸಂಪರ್ಕ ಅಭಿಯಾನ; ಒಂದು ಕೋಟಿ ಮನೆ ತಲುಪುವ ಗುರಿ – ಬಿ.ವೈ. ವಿಜಯೇಂದ್ರ

Kalpana Editor

ಸೈಟ್ ವಿವಾದ; ಎಸ್‌ಪಿಗಾಗಿ ಕಾದು ಕಾದು ವಾಪಸ್ ಆದ ಯಶ್ ತಾಯಿ

Kalpana Editor

ಅವರು ಹೋಮಕ್ಕೆ ಕೋಟಿ ಸುರಿದರೆ, ನಾನು ರಂಗಭೂಮಿಗೆ ವ್ಯಯಿಸುತ್ತೇನೆ; ನಟ ಪ್ರಕಾಶ್ ರಾಜ್‌

Kalpana Editor