August 1, 2026
kranthikidi.com
ಕ್ರೀಡೆತಾಜಾಸುದ್ದಿಸಿನಿಮಾ

ಅಂದು ಕಪ್‌ಗೆ ಕೊಹ್ಲಿ ಕಿಸ್… ಇಂದು ಕೊಹ್ಲಿಗೆ ಅನುಷ್ಕಾ ಕಿಸ್..!

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಮತ್ತೊಮ್ಮೆ ಟ್ರೋಫಿ ಗೆದ್ದ ಸಂಭ್ರಮದಲ್ಲಿದೆ. ನಿನ್ನೆಯಿಂದ ಆಟಗಾರರ ಸಂಭ್ರಮದ ಫೋಟೋಗಳು ಮತ್ತು ವಿಡಿಯೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ. ಆದರೆ ಇವೆಲ್ಲದರ ನಡುವೆ ವಿರಾಟ್ ಕೊಹ್ಲಿ ಪತ್ನಿ ಅನುಷ್ಕಾ ಶರ್ಮಾ ಅವರ ಪೋಸ್ಟ್ ಮಾತ್ರ ಭಾರೀ ಸದ್ದು ಮಾಡುತ್ತಿದೆ.

ಆರ್‌ಸಿಬಿ ಚಾಂಪಿಯನ್ ಆದ ಬಳಿಕ ಅನುಷ್ಕಾ ಶರ್ಮಾ ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ವಿಶೇಷ ಪೋಸ್ಟ್ ಹಂಚಿಕೊಂಡಿದ್ದಾರೆ. ಈ ಪೋಸ್ಟ್‌ನಲ್ಲಿ ವಿರಾಟ್ ಕೊಹ್ಲಿ ಟ್ರೋಫಿಯನ್ನು ಕೈಯಲ್ಲಿ ಹಿಡಿದುಕೊಂಡಿದ್ದು, ಅನುಷ್ಕಾ ಅವರಿಗೆ ಮುತ್ತು ನೀಡುತ್ತಿರುವ ಭಾವನಾತ್ಮಕ ಕ್ಷಣ ಸೆರೆಹಿಡಿಯಲಾಗಿದೆ. ಅನುಷ್ಕಾ ಅವರ ಈ ಪೋಸ್ಟ್‌ಗೆ 2 ಮಿಲಿಯಲ್‌ಗಿಂತಲೂ ಹೆಚ್ಚು ಲೈಕ್ಸ್‌ಗಳು ಬಂದಿವೆ.

ಈ ಫೋಟೋ ನೋಡಿದ ಅಭಿಮಾನಿಗಳು ಕಾಮೆಂಟ್‌ಗಳ ಮೂಲಕ ಪ್ರತಿಕ್ರಿಯಿಸಿದ್ದಾರೆ. ಹಲವು ವರ್ಷಗಳ ಕಾಲ ಕಪ್‌ಗಾಗಿ ಹೋರಾಡಿದ ವಿರಾಟ್ ಕೊಹ್ಲಿ ಅವರ ಕನಸು ಈಗ ಮತ್ತೊಮ್ಮೆ ನನಸಾಗಿದೆ. ಎಂದು ಫ್ಯಾನ್ಸ್ ಕಾಮೆಂಟ್ ಮಾಡುತ್ತಿದ್ದಾರೆ. ಅಭಿಮಾನಿಗಳ ಗಮನ ಸೆಳೆದಿರುವ ಮತ್ತೊಂದು ವಿಶೇಷ ಸಂಗತಿಯೆಂದರೆ, ಮೊದಲ ಬಾರಿಗೆ ಆರ್‌ಸಿಬಿ ಟ್ರೋಫಿ ಗೆದ್ದಾಗ ವಿರಾಟ್ ಕೊಹ್ಲಿ ಟ್ರೋಫಿಗೆ ಮುತ್ತು ನೀಡಿದ ಫೋಟೋ ವೈರಲ್ ಆಗಿತ್ತು.

ಈಗ ಎರಡನೇ ಗೆಲುವಿನ ಸಂಭ್ರಮದಲ್ಲಿ ಟ್ರೋಫಿ ಹಿಡಿದಿರುವ ವಿರಾಟ್‌ಗೆ ಅನುಷ್ಕಾ ಮುತ್ತು ನೀಡಿರುವ ಫೋಟೋ ಸೋಷಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿದೆ. ಇನ್‌ಸ್ಟಾಗ್ರಾಮ್‌ನಲ್ಲಿ ಈ ಪೋಸ್ಟ್ ಮಿಲಿಯನ್‌ಗಟ್ಟಲೆ ಲೈಕ್‌ಗಳನ್ನು ಪಡೆದುಕೊಂಡಿದ್ದು, ವಿರುಷ್ಕಾ ಅಭಿಮಾನಿಗಳಿಂದ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ. ಹಲವು ಸೆಲೆಬ್ರಿಟಿಗಳು ಮತ್ತು ಕ್ರಿಕೆಟ್ ಅಭಿಮಾನಿಗಳೂ ಈ ಪೋಸ್ಟ್‌ಗೆ ಹಾರ್ಟ್ ಇಮೋಜಿ ಮೂಲಕ ಪ್ರತಿಕ್ರಿಯಿಸಿದ್ದಾರೆ.

Related posts

ಹಾಡು ನಿಲ್ಲಿಸಿದ ‘ಗಾನಕೋಗಿಲೆ’; ಖ್ಯಾತ ಗಾಯಕಿ ಎಸ್. ಜಾನಕಿ ನಿಧನ..!

Kalpana Editor

ಆನ್-ಸ್ಕ್ರೀನ್ ಮಾರ್ಕಿಂಗ್ ವಿವಾದ; ಹೊಣೆ ಹೊತ್ತ ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್

Kalpana Editor

ಆರ್‌ಎಸ್‌ಎಸ್‌ ವಿರುದ್ಧ ಬಿ.ಕೆ ಹರಿಪ್ರಸಾದ್ ಕಿಡಿ; ನಾವು ಯಾವತ್ತು ಒಪ್ಪಿಕೊಳ್ಳುವುದಿಲ್ಲ..!

Kalpana Editor