kranthikidi.com
ತಾಜಾಸುದ್ದಿಸಿನಿಮಾ

ಫ್ಲ್ಯಾಟ್ ಬೆಲ್ಲಿ ಆಸೆಗೆ ನನ್ನನ್ನು ನಾನೇ ಹಿಂಸಿಸಿಕೊಂಡಿದ್ದೆ, ಕೆಮಿಕಲ್ ಚಿಕಿತ್ಸೆ ಮಾಡಿಸಿ, ಕೂದಲು ಹಾಳು; ನಟಿ ತಾಪ್ಸಿ ಪನ್ನು

ಬಾಲಿವುಡ್ ನಟಿ ತಾಪ್ಸಿ ಪನ್ನು ದೇಹದ ತೂಕ ಇಳಿಸಿಕೊಂಡು ಸುಂದರವಾಗಿ ಕಾಣಲು ನನ್ನ ದೇಹಕ್ಕೆ ನಾನೇ ಹಿಂಸೆ ನೀಡಿದ್ದೆ ಎಂದು ಹೇಳಿದ್ದಾರೆ. ಅವರ ಸೋಷಿಯಲ್ ಮೀಡಿಯಾ ಖಾತೆಯಲ್ಲಿ ತಮ್ಮ ವೇಟ್‌ಲಾಸ್ ಜರ್ನಿಯ ಕರಾಳ ಅನುಭವವನ್ನು ಹಂಚಿಕೊಂಡಿದ್ದಾರೆ. ಇನ್‌ಸ್ಟಾಗ್ರಾಂನಲ್ಲಿ ಈ ವಿಷಯ ಹಂಚಿಕೊಂಡ ತಾಪ್ಸಿ, ಬಾಲ್ಯದಿಂದಲೇ ಫಿಟ್ ಆಗಿದ್ದರೂ ಹೊಟ್ಟೆಯ ಕೆಳಭಾಗದಲ್ಲಿ ಸ್ವಲ್ಪ ಕೊಬ್ಬು ಉಳಿಯುತ್ತಿತ್ತು. ಇದನ್ನು ಕಡಿಮೆ ಮಾಡಲು ಹೆಚ್ಚು ವ್ಯಾಯಾಮ ಮಾಡುತ್ತಿದ್ದೆ ಎಂದು ತಿಳಿಸಿದ್ದಾರೆ.

ಅತಿಯಾದ ವ್ಯಾಯಾಮದಿಂದ ದೇಹದಲ್ಲಿ ನೀರಿನ ಅಂಶ ಹೆಚ್ಚಾಗಿ ಸಂಗ್ರಹವಾಗಬಹುದು. ಇದರಿಂದ ಹೊಟ್ಟೆಯ ಕೆಳಭಾಗದಲ್ಲಿ ಉಬ್ಬರ ಅಥವಾ ಕೊಬ್ಬು ಇದ್ದಂತೆ ಕಾಣಿಸುವುದು ಸಾಮಾನ್ಯ. ಪ್ರತಿ ಮಹಿಳೆಯ ದೇಹ ವಿಭಿನ್ನವಾಗಿರುತ್ತದೆ. ಹಾರ್ಮೋನ್ ಬದಲಾವಣೆಗಳಿಂದ ದೇಹದ ರೂಪವೂ ಬದಲಾಗುತ್ತಿರುತ್ತದೆ. ಹೀಗಾಗಿ ಪ್ರತಿದಿನ ಒಂದೇ ರೀತಿ ಕಾಣಬೇಕು ಎಂದು ನಿರೀಕ್ಷಿಸುವುದು ಸರಿಯಲ್ಲ ಎಂದು ಹೇಳಿದ್ದಾರೆ. ಇದನ್ನೂ ಓದಿ : ಡಿಕೆಶಿ ಮನೆದೇವತೆಗೆ ವಿಶೇಷ ಪೂಜೆ – ಬಲಗಡೆ ಹೂ ಪ್ರಸಾದ ನೀಡಿದ ಕೆಂಕೆರಮ್ಮ

ಅವರ ಪೌಷ್ಟಿಕ ತಜ್ಞೆ ಮುನ್ಮುನ್ ಗಣೇರಿವಾಲ್ ನೀಡಿದ ಸಲಹೆಯನ್ನು ಉಲ್ಲೇಖಿಸಿದ ತಾಪ್ಸಿ, ಮಹಿಳೆಯರಲ್ಲಿ ಹೊಟ್ಟೆಯ ಕೆಳಭಾಗದಲ್ಲಿ ಸ್ವಲ್ಪ ಕೊಬ್ಬು ಮತ್ತು ನೀರಿನ ಅಂಶ ಇರುವುದು ಸಹಜ. ಇದು ಸಂತಾನೋತ್ಪತ್ತಿ ಅಂಗಗಳ ರಕ್ಷಣೆಗೆ ಸಹಕಾರಿಯಾಗುತ್ತದೆ. ಸೋಶಿಯಲ್ ಮೀಡಿಯಾದಲ್ಲಿ ಫಿಟ್ ಆಗಿ ಕಾಣುವ ಪೋಟೋಗಳಿಗೆ ಮಾರು ಹೋಗಿ, ನೀವು ಅದೇ ರೀತಿ ಕಾಣಬೇಕು ಎಂದು ನಿಮ್ಮನ್ನೇ ನೀವು ಹಿಂಸಿಸಿಕೊಳ್ಳಬೇಡಿ. ಮಹಿಳೆಯರಿಗೆ ಸ್ವಲ್ಪ ಹೊಟ್ಟೆ ಉಬ್ಬರ ಅಥವಾ ಕೊಬ್ಬು ಇರುವುದು ಆರೋಗ್ಯಕರ ಎಂದು ತಾಪ್ಸಿ ಸಂದೇಶ ನೀಡಿದ್ದಾರೆ.

ಇದೇ ವೇಳೆ, ತಮ್ಮ ರೂಪದ ಬಗ್ಗೆ ಬಾಲ್ಯದಲ್ಲಿ ಇದ್ದ ಅಸಮಾಧಾನವನ್ನು ತಾಪ್ಸಿ ನೆನಪಿಸಿಕೊಂಡಿದ್ದಾರೆ. ದೊಡ್ಡ ಮೂಗು ಮತ್ತು ಗುಂಗುರು ಕೂದಲಿನ ಕಾರಣದಿಂದ ತಾವು ಇತರ ನಟಿಯರಂತೆ ಕಾಣುವುದಿಲ್ಲ ಎಂದು ಭಾವಿಸಿದ್ದೆ. ಕೂದಲು ಸ್ಟ್ರೇಟ್‌ ಮಾಡಲು ಕೆಮಿಕಲ್ ಟ್ರೀಟ್‌ಮೆಂಟ್ ಮಾಡಿಸಿಕೊಂಡು ನನ್ನ ಕೂದಲನ್ನು ನಾನೇ ಹಾಳು ಮಾಡಿಕೊಂಡೆ. ವರ್ಷಗಳ ಬಳಿಕ ನಾನು ಹೇಗಿದ್ದೆನೋ ಹಾಗೆ ಒಪ್ಪಿಕೊಳ್ಳಲು ಕಲಿತೆ. ನಮ್ಮ ನೈಜ ರೂಪವನ್ನು ಪ್ರೀತಿಸುವುದೇ ನಿಜವಾದ ಸೌಂದರ್ಯ ಎಂದು ತಾಪ್ಸಿ ಹೇಳಿದ್ದಾರೆ.

Related posts

ಶಿಕ್ಷಕರ ಕಿರುಕುಳ ಆರೋಪ; 4ನೇ ಮಹಡಿಯಿಂದ ಬಿದ್ದು, ವಿದ್ಯಾರ್ಥಿ ಆತ್ಮಹತ್ಯೆ..!

Kalpana Editor

ಡಿಕೆಶಿ ಮನೆದೇವತೆಗೆ ವಿಶೇಷ ಪೂಜೆ – ಬಲಗಡೆ ಹೂ ಪ್ರಸಾದ ನೀಡಿದ ಕೆಂಕೆರಮ್ಮ

Kalpana Editor

ದೇಶವನ್ನು ಬಲಪಡಿಸುವಲ್ಲಿ ಯಾವುದೇ ಅವಕಾಶ ಬಿಟ್ಟುಕೊಟ್ಟಿಲ್ಲ: ಪ್ರಧಾನಿ ಮೋದಿ

Kalpana Editor